|
ಭಾರತೀಯ ಅಧಿಕಾರಿಗಳಿಗೆ ವಿಶ್ವಸಂಸ್ಥೆ ಶ್ಲಾಘನೆ
|
|
ವಿಶ್ವಸಂಸ್ಥೆ, ಭಾನುವಾರ, 19 ಆಗಸ್ಟ್ 2007( 17:32 IST )
|
|
|
|
|
|
|
|
ವಿಶ್ವಸಂಸ್ಥೆ ಮೊತ್ತ ಮೊದಲ ಬಾರಿಗೆ ನಿಯೋಜಿಸಿರುವ ಮಹಿಳಾ ಘಟಕದ ಸದಸ್ಯರಾದ ಭಾರತೀಯ ಮಹಿಳಾ ಪೊಲೀಸ್ ಅಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಅಪರಾಧ ನಿಯಂತ್ರಣದಲ್ಲಿ ಸಲ್ಲಿಸಿರುವ ಕಾರ್ಯವನ್ನು ವಿಶ್ವಸಂಸ್ಥೆಯ ಅಧಿಕಾರಿಗಳು ಬಹುವಾಗಿ ಪ್ರಶಂಸಿಸಿದ್ದಾರೆ.
ಲೈಬೀರಿಯದ ರಾಜಧಾನಿ ಮೊನ್ರೊವಿಯದಲ್ಲಿನ ಆಕರ್ಷಕ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್‌ರ ವಿಶೇಷ ಪ್ರತಿನಿಧಿ ಅಲನ್ ಡಾಸ್, ಅಧಿಕಾರಿಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರಲ್ಲದೆ, ನ್ಯಾಶನಲ್ ಪೊಲೀಸ್ ಇನ್ ಲೈಬೀರಿಯ(ಎನ್‌ಪಿಎಲ್)ಗೆ ನೀಡುತ್ತಿರುವ ನಿರಂತರ ಬೆಂಬಲಕ್ಕಾಗಿ ಶ್ಲಾಘನೆಯ ಗುರುತೆಂಬಂತೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪದಕಗಳನ್ನು ವಿತರಿಸಿದರು.
"ಶಾಂತಿಪಾಲನೆಯಲ್ಲಿ ಲಿಂಗ ಸಮಾನತೆಗೆ ಹೊಸ ಆರಂಭವಾಗಿದ್ದರೂ, ಈ ನಿಯೋಜನೆಯು ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಭಾರತದ ನಿರಂತರ ಬದ್ಧತೆಯ ಮುಂದುವರಿಕೆಯಾಗಿದೆ" ಎಂದು ಡಾಸ್ ಈ ಸಂದರ್ಭದಲ್ಲಿ ಹೇಳಿದರು.
ದಿ ಯುನೈಟೆಡ್ ನೇಶನ್ಸ್ ಮಿಶನ್ ಇನ್ ಲೈಬೀರಿಯ(ಯುಎನ್ಎಂಐಎಲ್) ಪ್ರಸ್ತುತ ಪೊಲೀಸ್ ಸೇವೆಗೆ ಹೆಚ್ಚೆಚ್ಚು ಮಹಿಳೆಯರನ್ನು ಆಕರ್ಷಿಸುವುದಕ್ಕೆ ನೆರವಾಗುತ್ತಿದೆ.
|
|
|
|
|
|
|
|