|
ಭಾರತಕ್ಕೆ ಯುರೇನಿಯಂ ಮಾರಲು ಅವಕಾಶವಿಲ್ಲ
|
|
ಮೆಲ್ಬೋರ್ನ್, ಮಂಗಳವಾರ, 28 ಆಗಸ್ಟ್ 2007( 12:19 IST )
|
|
|
|
|
|
|
|
ಭಾರತಕ್ಕೆ ಯುರೇನಿಯಂ ಮಾರಾಟ ಮಾಡುವ ಯೋಜನೆಗೆ ಆಸ್ಟ್ರೇಲಿಯ ಮುಂದಡಿ ಇಟ್ಟರೆ, ಅದರ ವಿದೇಶಾಂಗ ಸಚಿವರು ನೀಡಿದ ಮುಚ್ಚಳಿಕೆಗಳು ಮತ್ತು ಅಂತಾರಾಷ್ಟ್ರೀಯ ಅಣ್ವಸ್ತ್ರ ವಿರೋಧಿ ಒಪ್ಪಂದವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವಿಶ್ವದ ಅತೀದೊಡ್ಡ ಸರ್ಕಾರೇತರ ಸಂಸ್ಥೆಯೊಂದು ವಾದಿಸಿದೆ.
ತಮ್ಮ ಪರಮಾಣು ಸ್ಥಾವರಗಳ ಪೂರ್ಣ ಸ್ವರೂಪದ ಸುರಕ್ಷತೆಗೆ ಸಹಿ ಹಾಕಿದ ರಾಷ್ಟ್ರಗಳಿಗೆ ಮಾತ್ರ ಆಸ್ಟ್ರೇಲಿಯ ಯುರೇನಿಯಂ ಮಾರುತ್ತದೆಂದು ಹತ್ತು ವರ್ಷಗಳ ಕೆಳಗೆ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಡೌನರ್ ನೀಡಿದ ಹೇಳಿಕೆಯ ಬಗ್ಗೆ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಅಧ್ಯಯನದ ಜೇಮ್ಸ್ ಮಾರ್ಟಿನ್ ಕೇಂದ್ರದ(ಸಿಎನ್‌ಎಸ್) ತಜ್ಞರು ಗಮನಸೆಳೆದಿದ್ದಾರೆ . ಅಮೆರಿಕ-ಭಾರತ ಕರಡು ಒಪ್ಪಂದದ ಪ್ರಕಾರ, ಕೇವಲ ನಾಗರಿಕ ಪರಮಾಣು ಸ್ಥಾವರಗಳನ್ನು ಮಾತ್ರ ತಪಾಸಣೆಗೆ ಒಳಪಡಿಸಬೇಕಾಗಿದ್ದು, ಮಿಲಿಟರಿ ನೆಲೆಗಳನ್ನು ತಪಾಸಣೆಗೆ ಒಳಪಡಿಸುವಂತಿಲ್ಲ.
ಭಾರತಕ್ಕೆ ಯುರೇನಿಯಂ ಮಾರಾಟದಿಂದ ಆಸ್ಟ್ರೇಲಿಯ ದಕ್ಷಿಣ ಫೆಸಿಫಿಕ್ ಪರಮಾಣು ಮುಕ್ತ ಒಪ್ಪಂದವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸಿಎನ್‌ಎಸ್ ತಜ್ಞರು ಎಚ್ಚರಿಸಿದ್ದು, 10 ವರ್ಷಗಳ ಕೆಳಗೆ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಡೌನರ್ ನೀಡಿದ ಉತ್ತರದ ಬಗ್ಗೆ ಗಮನ ಸೆಳೆದಿದ್ದಾರೆ.
ಪೆಸಿಫಿಕ್‌ನಲ್ಲಿ ಫ್ರಾನ್ಸ್ ನಡೆಸಿದ ಅಣ್ವಸ್ತ್ರ ಪರೀಕ್ಷೆ ಹಿನ್ನೆಲೆಯಲ್ಲಿ ದಕ್ಷಿಣ ಪೆಸಿಫಿಕ್ ಒಪ್ಪಂದ ಮೂಡಿದ್ದು, ಯುರೇನಿಯಂ ರಫ್ತಿಗೆ ಅಗತ್ಯವಾದ ಸುರಕ್ಷತೆಗಳ ಮಟ್ಟದ ಬಗ್ಗೆ ಆಸ್ಟ್ರೇಲಿಯ ನಿಲುವನ್ನು ಬಿಗಿಗೊಳಿಸಿದೆ.
|
|
|
|
|
|
|
|