ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಮತ್ತು ಪ್ರಾಂತೀಯ ಮುಖ್ಯಮಂತ್ರಿಗಳು ಮುಂತಾದ ಗಣ್ಯವ್ಯಕ್ತಿಗಳ ಮೇಲೆ ದಾಳಿಗಳನ್ನು ನಡೆಸುವ ಸಲುವಾಗಿ ಇರಾಕ್‌ನಲ್ಲಿ ನಡೆದ ದಾಳಿಗಳ ಸೂತ್ರಧಾರಿಗಳಾಗಿದ್ದ 7 ಮಂದಿ ಅಲ್ ಖಾಯಿದಾ ಕಮಾಂಡರ್‌ಗಳು ಪಾಕಿಸ್ತಾನ ಪ್ರವೇಶಿಸಿದ್ದಾರೆ.
ಮೇ 3ರಂದು ಆಫ್ಘಾನಿಸ್ತಾನದ ಪಾಕ್ತಿಯ ಪ್ರಾಂತ್ಯದಲ್ಲಿ ಅಲ್ ಖಾಯಿದಾ ಮತ್ತು ತಾಲಿಬಾನ್ ಪ್ರಮುಖರ ನಡುವೆ ನಡೆದ ಭೇಟಿಯ ಬಗ್ಗೆ ಎಚ್ಚರಿಸಿ ಗುಪ್ತಚರ ಸಂಸ್ಥೆಗಳು ಪ್ರಮುಖ ಪ್ರಾಂತ್ಯಗಳಿಗೆ ಮತ್ತು ನಗರಗಳಿಗೆ ಸಂದೇಶ ಕಳಿಸಿದೆಯೆಂದು ಹೆಸರು ಹೇಳಲು ಬಯಸದ ಅಧಿಕಾರಿ ಸುದ್ದಿಪತ್ರಿಕೆಗೆ ತಿಳಿಸಿದ್ದಾರೆ.
ಅಶಾಂತಿ ಸೃಷ್ಟಿಸುವ ಸಲುವಾಗಿ ಪಾಕಿಸ್ತಾನದಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಇವೆರಡು ಗುಂಪುಗಳು ನಿರ್ಧರಿಸಿದ್ದು, ಜರ್ದಾರಿ ಮತ್ತು ನಾಲ್ವರು ಪ್ರಾಂತೀಯ ಮುಖ್ಯಮಂತ್ರಿಗಳ ಮೇಲೆ ಈ ದಾಳಿಗಳನ್ನು ಗುರಿಯಿರಿಸಲಾಗಿದೆ ಎಂದು ವರದಿ ತಿಳಿಸಿದೆ. ತಾಲಿಬಾನ್ ಜತೆ ಸಹಯೋಗದಿಂದ ದಾಳಿಗಳನ್ನು ನಡೆಸಲು ಪಾಕಿಸ್ತಾನಕ್ಕೆ ಆಗಮಿಸಿರುವ 7 ಮಂದಿ ಅಲ್ ಖಾಯಿದಾ ಕಮಾಂಡರ್‌ಗಳು ಇರಾಕ್‌ನಲ್ಲಿ ಈ ಮುಂಚೆ ದಾಳಿಯ ಸೂತ್ರಧಾರರಾಗಿದ್ದರೆಂದು ವರದಿ ತಿಳಿಸಿದೆ. |