| ವಿಶ್ವಸಂಸ್ಥೆ ಆಯೋಗದಿಂದ ಬೇನಜೀರ್ ಹತ್ಯೆ ತನಿಖೆ | | | ಇಸ್ಲಾಮಾಬಾದ್, ಬುಧವಾರ, 10 ಜೂನ್ 2009( 20:27 IST ) | | | |
| | |
| ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಹತ್ಯಾ ಪ್ರಕರಣದ ತನಿಖೆಗೆ ಚಾಲನೆ ನೀಡಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಐರಿಷ್‌ನ ಮಾಜಿ ಪೊಲೀಸ್ ಅಧಿಕಾರಿ ಆಯೋಗದಲ್ಲಿದ್ದು, ಆ ತಂಡ ತನಿಖೆ ನಡೆಸಲಿದೆ.2007 ರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರನ್ನು ಉಗ್ರರು ಗುಂಡಿಟ್ಟು ಸಾಯಿಸಿದ್ದರು. ಪ್ರಕರಣದ ತನಿಖೆ ನಡೆಸಲು ಐರಿಷ್ ನ್ಯಾಷನಲ್ ಪೊಲೀಸ್ ಪಡೆಯ ಮಾಜಿ ಸಹಾಯಕ ಕಮೀಷನರ್, ವಿಶ್ವಸಂಸ್ಥೆ ಆಯೋಗದ ಸದಸ್ಯ ಪೀಟರ್ ಪಿಟ್ಜೆರಾಲ್ಡ್ ಅವರ ನೇತೃತ್ವದ ಆಯೋಗ ತನಿಖೆ ಆರಂಭಿಸಲಿದೆ.ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಫೆಬ್ರುವರಿ ತಿಂಗಳಿನಲ್ಲಿಯೇ ಭುಟ್ಟೋ ಹತ್ಯಾ ಪ್ರಕರಣದ ತನಿಖೆಗೆ ಮೂರು ಮಂದಿ ಸದಸ್ಯರ ಆಯೋಗ ರಚಿಸುವುದಾಗಿ ಘೋಷಿಸಿದ್ದರು. ಚಿಲಿಯ ವಿಶ್ವಸಂಸ್ಥೆ ರಾಯಭಾರಿ ಹೆರಾಲ್ಡೋ ಮುನೋಜ್ ನೇತೃತ್ವದ ಮೂರು ಮಂದಿ ಸದಸ್ಯರನ್ನೊಳಗೊಂಡ ಆಯೋಗದಲ್ಲಿ ಇಂಡೋನೇಷ್ಯಾದ ಮಾಜಿ ಅಟಾರ್ನಿ ಜನರಲ್ ಮಾರ್ಜುಕಿ ದರ್ ಉಸ್ಮಾನ್ ಸೇರಿದ್ದಾರೆ.ಮುಂದಿನ ತಿಂಗಳು ಭುಟ್ಟೋ ಹತ್ಯಾ ಪ್ರಕರಣದ ತನಿಖೆಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ ಎಂದು ಡಾನ್ ಪತ್ರಿಕೆ ವರದಿ ತಿಳಿಸಿದೆ. ಭುಟ್ಟೋ ಹತ್ಯಾ ಪ್ರಕರಣದ ವಿಚಾರಣೆಗೆ ಅಂದಾಜು 200ಮಿಲಿಯನ್ ವೆಚ್ಚವಾಗಲಿದೆ. |
| |
| | |
| | | |
|
| | | | | |
|
|
| |
|  | |