ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹತ್ಯೆ ಯತ್ನ: ಅಫ್ಘಾನ್ ಗವರ್ನರ್ ಪಾರು (Afghanista | American | US | Governor | Terror)
Feedback Print Bookmark and Share
 
ಇಬ್ಬರು ಶಸ್ತ್ರಸಜ್ಜಿತ ಉಗ್ರಗಾಮಿಗಳು ಸೋಮವಾರ ನಡೆಸಿದ ಹತ್ಯೆಯತ್ನದಲ್ಲಿ ಅಫ್ಘಾನಿಸ್ತಾನದ ಪೂರ್ವದ ನಂಗರ್‌ಹಾರ್ ಪ್ರಾಂತ್ಯದ ಗವರ್ನರ್ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.

ದಾಳಿ ನಡೆಸಿದ ಇಬ್ಬರಲ್ಲಿ ಒಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮತ್ತೊಬ್ಬನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಜಲಲಾಬಾದ್‌ನಲ್ಲಿರುವ ಗವರ್ನರ್ ಕಚೇರಿ ಸಮೀಪದಲ್ಲಿ ಮಾಹಿತಿ ತಂತ್ರಜ್ಞಾನ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ಎ.ಕೆ.47 ಗನ್ ಹಾಗೂ ಗ್ರೆನೇಡ್‌ಗಳನ್ನು ಹೊಂದಿದ್ದ ಇಬ್ಬರು ಉಗ್ರಗಾಮಿಗಳು ದಾಳಿ ನಡೆಸಿದರು ಎಂದು ಪ್ರಾಂತೀಯ ಸರ್ಕಾರದ ವಕ್ತಾರರೊಬ್ಬರು ವಿವರಿಸಿದ್ದಾರೆ.

ಗವರ್ನರ್ ಗುಲ್ ಅಘಾ ಶರ್ಜೆ ಅವರು ತಮ್ಮ ವಾಹನದಲ್ಲಿ ಸಮಾವೇಶ ನಡೆಯುತ್ತಿದ್ದ ಸಭಾಂಗಣದ ಪ್ರವೇಶದ್ವಾರಕ್ಕೆ ತಲುಪಿದಾಗ ಎರಡನೇ ಮಹಡಿಯಿಂದ ಉಗ್ರನೊಬ್ಬ ಗ್ರೆನೇಡ್ ಎಸೆದ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ