ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಥಾಯ್ಲೆಂಡ್ ಭೇಟಿಯ ಕೊನೆಯ ದಿನದಂದು ಪೂರ್ವ ಏಷ್ಯಾ ಮುಖಂಡರುಗಳ ಜತೆ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಷಯಗಳನ್ನು ಚರ್ಚಿಸಿದರು.
10 ಸದಸ್ಯರನ್ನೊಳಗೊಂಡ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ ಹಾಗೂ ಆರು ಪಾಲುದಾರ ದೇಶಗಳು ಜತೆ ಸೇರಿರುವ 4 ನೇ ಪೂರ್ವ ಏಷ್ಯಾ ಶೃಂಗ ಸಭೆಯಲ್ಲಿ (ಆಸಿಯಾನ್) ಭಾಗವಹಿಸಿದವರಲ್ಲಿ ಮನಮೋಹನ್ ಸಿಂಗ್ ಅವರು ಪ್ರಮುಖರಾಗಿದ್ದಾರೆ. ಭಾರತ, ಚೀನಾ, ಜಪಾನ್ ದೇಶಗಳು ಪಾಲುದಾರ ದೇಶದ ಪಟ್ಟಿಯಲ್ಲಿ ಸೇರಿವೆ.