ನಂಬಲಸಾಧ್ಯವಾದ ಸಾಹಸ ಕೃತ್ಯಗಳಿಂದ ರೋಮಾನಿಯಾದ 5ವರ್ಷದ ಬಾಲಕ ಗಿಯುಲಿಯಾನೋ ಸ್ಫೋ ಎಲ್ಲರನ್ನೂ ಅಚ್ಚರಿಯಕಡಲಲ್ಲಿ ಮುಳುಗಿಸಿದ್ದಾನೆ. ಗಿನೆಸ್ ದಾಖಲೆಗಳ ತೀರ್ಪುಗಾರರ ಮಂಡಳಿಯಂತೂ ಬೆರಗಾಗಿ ಹೋಗಿದೆ.
2ವರ್ಷದ ಮಗುವಾಗಿದ್ದಾಗಿನಿಂದೂ ಸಾಹಸಗಳ ಅಭ್ಯಾಸ ನಡೆಸುತ್ತಿರುವ ಸ್ಫೋ ಇಟಲಿಯಲ್ಲಿ ತನ್ನ ತಂದೆ-ತಾಯಿಗಳೊಂದಿಗೆ ವಾಸಿಸುತ್ತಿದ್ದಾನೆ.ಇದಕ್ಕೆ ಮೊದಲು ಇದೇ ವರ್ಷ ಈ ಮಗು ತಲೆ ಕೆಳಗಾಗಿ ಕೈಗಳ ಮೇಲೆ ನಿಂತು, ಕಾಲುಗಳ ನಡುವೆ ಚೆಂಡು ಸಿಕ್ಕಿಸಿಕೊಂಡು 10ಮೀ.ಗಳವರೆಗೆ ನಡೆದು ಪ್ರೇಕ್ಷಕರು ಹಾಗೂ ಗಿನೆಸ್ ತೀರ್ಪುಗಾರರನ್ನು ಅಚ್ಚರಿಗೊಳಿಸಿದ್ದ.
ಇಂಟರ್ನೆಟ್‌ನ ಯು-ಟ್ಯೂಬ್‌ನಲ್ಲಿ ಅವನು ಈ ಸಾಹಸ ನಡೆಸುವುದನ್ನು ಕೋಟ್ಯಂತರ ಜನ ವೀಕ್ಷಿಸಿ, ಅವನ ಅಭಿಮಾನಿಗಳಾಗಿ ಹೋಗಿದ್ದಾರೆ. ಅವನು ಹುಟ್ಟಿದಾಗಿನಿಂದ ನಾನು ಅವನನ್ನು ಜಿಮ್‌ಗೆ ಕರೆದೊಯ್ಯುತ್ತಿದ್ದೇನೆ. ಸ್ವತಃ ನಾನೇ ಜೀವನ ಪರ್ಯಂತ ವ್ಯಾಯಾಮ ಮಾಡುತ್ತಿದ್ದೇನೆ. ಅವನೊಬ್ಬನನ್ನೇ ನಾನು ಅಭ್ಯಾಸ ಮಾಡಲು ಎಂದೂ ಬಿಡುವುದಿಲ್ಲ. ಅವನಿಗೆ ಆಯಾಸವಾದರೆ ಇಬ್ಬರೂ ಹೊರಗೆ ಹೋಗಿ ಆಟ ಆಡುತ್ತೇವೆ ಎಂದು ಸ್ಫೋ ತಂದೆ 33ರ ಹರೆಯದ ಇಯುಲಿಯನ್ ಸ್ಫೋ ಹೇಳುತ್ತಾರೆ.