ಚುನಾವಣಾಧಿಕಾರಿಯಾಗಿ ವಿದ್ಯಾಶಂಕರ್ ಅಧಿಕಾರ ಸ್ವೀಕಾರ
|
|
|
ಬೆಂಗಳೂರು, ಮಂಗಳವಾರ, 1 ಏಪ್ರಿಲ್ 2008( 18:44 IST )
|
|
|
|
|
|
|
|
ಹಿರಿಯ ಐಎಎಸ್ ಅಧಿಕಾರಿ ಎಂ.ಎನ್. ವಿದ್ಯಾಶಂಕರ್ ಇಂದು (ಮಂಗಳವಾರ) ರಾಜ್ಯದ ಮುಖ್ಯ ಚುನಾವಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಮುಖ್ಯ ಚುನಾವಣಾಧಿಕಾರಿಯಾಗಿದ್ದ ರಾಮಶೇಷನ್ ಅವರು ಸ್ವಯಂ ನಿವೃತ್ತಿ ಘೋಷಿಸಿರುವುದರಿಂದ ತೆರವಾದ ಸ್ಥಾನವನ್ನು ತುಂಬಲು, ವಿದ್ಯಾಶಂಕರ್‌ರ ವರನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದ ಹಿನ್ನೆಲೆಯಲ್ಲಿ ಇಂದು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾಶಂಕರ್ ಅವರು, ಈಗಾಗಲೇ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ ಆಕಸ್ಮಿಕವಾಗಿ ಕೆಲವರ ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆಯಾಗದಿದ್ದರೆ ಅಂತವರ ಹೆಸರುಗಳನ್ನು ಸೇರ್ಪಡೆ ಮಾಡುವ ಸಲುವಾಗಿ ಇದೇ ಶನಿವಾರ ಹಾಗೂ ಭಾನುವಾರದಂದು ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಚುನಾವಣಾ ಸಿದ್ದತೆ ಕುರಿತು ಮಾತನಾಡಿದ ಅವರು, ರಾಜ್ಯ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಪೂರ್ಣಗೊಂಡಿದ್ದು, ಚುನಾವಣೆ ನಡೆಸಲು ಆಯೋಗ ಸರ್ವರೀತಿಯಲ್ಲೂ ಸಿದ್ದಗೊಂಡಿದೆ. ಈಗಾಗಲೇ ಚುನಾವಣಾ ಆಯೋಗದ ವೆಬ್‌ಸೈಟ್‌ನ್ನು ಕಳೆದ ಮೂರು ದಿನಗಳಲ್ಲಿ ಸುಮಾರು 4.5ಲಕ್ಷದಷ್ಟು ಜನರು ವೀಕ್ಷಿಸಿದ್ದಾರೆ ಎಂದ ತಿಳಿಸಿದರು.
|
|
|
|