ಆಪರೇಶನ್ ಹಸ್ತ: ಮೊಯ್ಲಿಗೆ ಸದಾನಂದ ಗೌಡ ಸವಾಲ್
|
|
|
|
ಬೆಂಗಳೂರು, ಸೋಮವಾರ, 1 ಸೆಪ್ಟೆಂಬರ್ 2008( 19:12 IST )
|
|
|
|
|
|
|
|
ಆಪರೇಷನ್ ಕಮಲವನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿರುದ್ಧ ಈಗ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ, ಮೊಯ್ಲಿಯವರಿಗೆ ಸಾಧ್ಯವಾದರೆ 15ದಿನಗಳ ಒಳಗಾಗಿ ಆಪರೇಷನ್ ಹಸ್ತ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಈ ಕುರಿತು ಬಿಜೆಪಿಗೆ ಟೀಕೆ ಮಾಡುವ ಮುನ್ನ ಮೊಯ್ಲಿ ಅವರು ತಮ್ಮ ಪಕ್ಷದ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡುವ ಅಗತ್ಯವಿದೆ. ಅಧ್ಯಕ್ಷರನ್ನೇ ಆಯ್ಕೆ ಮಾಡಲು ಹಿಂದು ಮುಂದೆ ನೋಡುತ್ತಿರುವ ಕೆಪಿಸಿಸಿಗೆ ಆಪರೇಷನ್ ಹಸ್ತ ಮಾಡುವ ಅರ್ಹತೆಯಾದರೂ ಇದೆಯಾ ಎಂದು ಅವರು ಪ್ರಶ್ನಿಸಿದರು.
ಆಪರೇಷನ್ ಕಮಲ ಕಾರ್ಯಾಚರಣೆಯ ಅಗತ್ಯತೆ ಮೇರೆಗೆ ಬಿಜೆಪಿ ಕೈಗೊಂಡಿರುವ ಈ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮಾಡ ಹೊರಟಿರುವ ಆಪರೇಷನ್ ಹಸ್ತ ಯಾವ ರೀತಿಯಲ್ಲೂ ಯಶ ಕಾಣದು ಎಂದು ಅವರು ಭವಿಷ್ಯ ನುಡಿದರು.
ರಾಜ್ಯದಲ್ಲಿ ಐದು ವರ್ಷಗಳ ಕಾಲ ಸುಭದ್ರ ಆಡಳಿತ ನಡೆಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರಕ್ಕೆ ಆಪರೇಷನ್ ಕಮಲದ ಅಗತ್ಯವಿತ್ತು ಎಂದು ಅವರು ಸಮರ್ಥನೆ ನೀಡಿದರು.
|
|
|
|