| ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಡಿಕೆಶಿ | | | ಬೆಂಗಳೂರು, ಬುಧವಾರ, 3 ಜೂನ್ 2009( 13:00 IST ) | | | |
| | |
| ಲೋಕಸಭಾ ಚುನಾವಣೆಯಲ್ಲಿ ಹಣ-ಹೆಂಡ ಹಂಚಿರುವ ಬಗ್ಗೆ ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ತಮ್ಮ ಪಕ್ಷದ ವಿರುದ್ಧವೇ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯ ಮುಖಂಡ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಅಕ್ರಮಗಳ ಬಗೆಗೆ ಪ್ರದೇಶ ಕಾಂಗ್ರೆಸ್ ಅನೇಕ ಬಾರಿ ಆಯೋಗಕ್ಕೆ ದೂರು ನೀಡಿತ್ತು. ಆ ಸಂದರ್ಭದಲ್ಲಿ ಅವೆಲ್ಲವೂ ಸುಳ್ಳು ಎನ್ನುವ ಹಾಗೆ ಬಿಜೆಪಿಯವರು ಅಲ್ಲಗಳೆಯುತ್ತಿದ್ದರು. ಆದರೆ ಇವತ್ತು ಆ ಪಕ್ಷದ ಸಚಿವರೇ ಅಕ್ರಮ ನಡೆದಿರುವ ಸತ್ಯ ಒಪ್ಪಿಕೊಂಡಿರುವ ಪರಿಣಾಮ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.ಈಶ್ವರಪ್ಪ ಅವರ ಹೇಳಿಕೆ ಕುರಿತು ಆಯೋಗಕ್ಕೂ ಮಾಹಿತಿ ನೀಡುತ್ತೇವೆ. ಹಾಗೆಯೇ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನೂ ಭೇಟಿಯಾಗಿ ದೂರು ನೀಡಲಾಗುವುದು ಎಂದರು.ಚುನಾವಣೆ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಹಣ,ಸಾವಿರಾರು ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ದೂರುಗಳು ಕೂಡ ದಾಖಲಾಗಿದೆ. ಇಷ್ಟೆಲ್ಲ ಪುರಾವೆಗಳಿದ್ದ ಮೇಲೆ ಮತ್ತೊಮ್ಮೆ ತನಿಖೆ ನಡೆಸುವ ಅಗತ್ಯ ಏನಿದೆ ಎಂದು ಡಿಕೆಶಿ ಪ್ರಶ್ನಿಸಿದರು. |
| |
| | |
| | | |
|
| | |
|
|
| | |
|
|
| |
|  | |