| ಭಿನ್ನಮತ: ರೆಡ್ಡಿ ಬೆಂಬಲಿಗರಿಂದ ರಹಸ್ಯ ಚರ್ಚೆ | | ಭಿನ್ನಮತ ಶಮನ ವ್ಯರ್ಥ-ಯಡಿಯೂರಪ್ಪ ರಾಜ್ಯಕ್ಕೆ ವಾಪಸ್ | ನವದೆಹಲಿ, ಶುಕ್ರವಾರ, 5 ಜೂನ್ 2009( 11:51 IST ) | | | |
| | |
| ಬಿಜೆಪಿ ರಾಜ್ಯರಾಜಕಾರಣದಲ್ಲಿ ತಲೆದೋರಿದ ಭಿನ್ನಮತ ಶಮನ ಕೊನೆಗೂ ಇತ್ಯರ್ಥ ಕಾಣದ ಇದ್ದ ಪರಿಣಾಮ ಮೂರು ದಿನಗಳ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿಗೆ ವಾಪಸಾಗಿದ್ದಾರೆ. ಮತ್ತೊಂದೆಡೆ ಶುಕ್ರವಾರ ಬೆಳಿಗ್ಗೆ ರೆಡ್ಡಿ ಸಹೋದರರು ದಿಢೀರನೆ ತಮ್ಮ ಬೆಂಬಲಿಗರೊಂದಿಗೆ ನಗರದಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ.ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ನವದೆಹಲಿಯಲ್ಲಿ ತೇಪೆ ಹಚ್ಚುವ ಹೇಳಿಕೆ ನೀಡಿದ್ದರೂ ಕೂಡ, ನಿನ್ನೆ ಮತ್ತೆ ಸಿಎಂ ವಿರುದ್ಧ ಗುಡುವ ಮೂಲಕ ತಮ್ಮ ಮುಸುಕಿನ ಗುದ್ದಾಟ ಮುಂದುವರಿಸಿದ್ದಾರೆ. ಇತ್ತ ಸಚಿವ ಜನಾರ್ದನ ರೆಡ್ಡಿ ಇಂದು ಶ್ರೀರಾಮುಲು, ಶಿವನಗೌಡ ಪಾಟೀಲ್, ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳೆ, ಆನಂದ್ ಆಸ್ನೋಟಿಕರ್ ಸೇರಿದಂತೆ ಹಲವು ಪ್ರಮುಖರೊಂದಿಗೆ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದಾರೆ.ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿ ಮೇ 30ಕ್ಕೆ ಒಂದು ವರ್ಷ ಪೂರೈಸಿತ್ತು. ಈ ಸಂದರ್ಭದಲ್ಲಿ ಮೇ 31ರಂದು ವಿಕಾಸ ಸಂಕಲ್ಪ ಉತ್ಸವ ಆಚರಿಸಲಾಗಿತ್ತು. ಆದರೆ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ, ರೆಡ್ಡಿ ಸಹೋದರರು ಗೈರು ಹಾಜರಾಗುವ ಮೂಲಕ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡಿತ್ತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಣ, ಹೆಂಡ ಹಂಚಿ ಗೆಲುವು ಸಾಧಿಸಿತ್ತು ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸಚಿವ ಈಶ್ವರಪ್ಪ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಕುರಿತು ತಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಜಾರಿಕೊಂಡು, ಪಕ್ಷದ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುವುದೇ ಎಂದು ನವದೆಹಲಿಯಲ್ಲಿ ಮೂರು ದಿನ ಠಿಕಾಣಿ ಹೂಡಿದ್ದರು.ಆದರೆ ಹೈಕಮಾಂಡ್ ಇಂಧನ ಸಚಿವರಿಂದ ವಿವರಣೆ ಕೇಳಿ ಛೀಮಾರಿ ಹಾಕಿತ್ತು, ಅದಕ್ಕೆ ಪೂರಕ ಎಂಬಂತೆ ಸುದ್ದಿಗೋಷ್ಠಿ ನಡೆಸಿ ಭಿನ್ನಮತ ಶಮನಕ್ಕೆ ಈಶ್ವರಪ್ಪ ಯತ್ನಿಸಿದ್ದರು. ಪಕ್ಷದೊಳಗಿನ ಆಂತರಿಕೆ ಸಮಸ್ಯೆ ಬಗೆಹರಿಯಿತು ಎಂದುಕೊಳ್ಳುವಷ್ಟರಲ್ಲಿ ಈಶ್ವರಪ್ಪ ಮತ್ತೆ ತಿರುಗಿಬಿದ್ದಿದ್ದಾರೆ. ರೆಡ್ಡಿ ಸಹೋದರರ ಅಸಮಧಾನವೂ ಮುಂದುವರಿದಿದೆ. ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿರುವ ರೆಡ್ಡಿ ಸಹೋದರರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ರಾಜ್ಯರಾಜಕಾರಣದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. |
| |
| | |
| | | |
|
| | |
|
|
| | |
|
|
| |
|  | |