ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ಋಷಿ ಕಪೂರ್ ಪುತ್ರ 'ಸಾಂವರಿಯಾ' ಹೀರೋ
ತಾರಾ ಪರಿಚಯ
Feedback Print Bookmark and Share
 
WD
ಋಷಿ ಕಪೂರ್ ಪುತ್ರ ರಣಬೀರ್ ಕಪೂರ್ ಅವರು 'ಸಾಂವರಿಯಾ' ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಜಯ್ ಲೀಲಾ ಭನ್ಸಾಲಿಯಂತಹ ಖ್ಯಾತ ನಿರ್ದೇಶಕ ಇರುವ ಈ ಚಿತ್ರ ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ನವೆಂಬರ್ 9ರಂದು ಈ ಚಿತ್ರ ತೆರೆ ಕಾಣಲಿದೆ. ಈ ಬಗ್ಗೆ ರಣಧೀರ್ ಕಪೂರ್ ಜತೆಗೆ ಮಾತುಕತೆಯ ತುಣುಕುಗಳು ಇಲ್ಲಿವೆ:

ಆರ್‌ಕೆ ಬ್ಯಾನರ್ ಈಗಾಗಲೇ ದೊಡ್ಡ ದೊಡ್ಡ ಚಿತ್ರಗಳನ್ನು ನೀಡಿದೆ. ನಿಮ್ಮ ಪರಿವಾರದಲ್ಲೇ ಹಲವಾರು ಚಿತ್ರ ನಿರ್ದೇಶಕರಿದ್ದಾರೆ. ಹಾಗಿದ್ದೂ ಹೊರಗಿನವರ ಬ್ಯಾನರ್‌ನಡಿಯಲ್ಲೇ ನೀವು ಚಿತ್ರರಂಗಕ್ಕೆ ಕಾಲಿಡಲು ನಿರ್ಧರಿಸಿದ್ದೇಕೆ?

ನಾನು ಉತ್ತಮ ಕಥೆಯೊಂದರ ತಲಾಶೆಯಲ್ಲಿದ್ದೆ. ಆದರೆ ಇದುವರೆಗೆ ಕಥೆ ನನಗಿಷ್ಟವಾಗಿಲ್ಲ. ಆಕಸ್ಮಿಕವಾಗಿ ಸಂಜಯ್ ಲೀಲಾ ಭನ್ಸಾಲಿಯವರ ಪ್ರಸ್ತಾಪ ಬಂತು. ಚಿತ್ರದ ಕಥೆಯೂ ಚೆನ್ನಾಗಿತ್ತು. ನಿರ್ದೇಶಕರಿಗೂ ಚೆನ್ನಾಗಿ ಹೆಸರಿದೆ. ಹೀಗಾಗಿ ಇದಕ್ಕೆ ನಾನೊಪ್ಪಿದೆ. ಆದರೆ ಶೀಘ್ರವೇ ಆರ್‌ಕೆ ಬ್ಯಾನರ್‌ನಡಿಯಲ್ಲೂ ಚಿತ್ರಗಳನ್ನು ಮಾಡುವವನಿದ್ದೇನೆ.

ಚಿತ್ರ ನೋಡಿದವರು ನಿಮ್ಮನ್ನು ನಿಮ್ಮ ತಂದೆ ಋಷಿ ಕಪೂರ್ ಅಥವಾ ನಿಮ್ಮಜ್ಜ ರಾಜ್ ಕಪೂರ್ ಜತೆಗೆ ಹೋಲಿಸುತ್ತಾರೆ ಎಂಬ ಅಂಶವು ನಿಮ್ಮನ್ನು ಒತ್ತಡದಲ್ಲಿ ಸಿಲುಕಿಸುವುದಿಲ್ಲವೇ?

ಇದೆಲ್ಲಾ ಒತ್ತಡ ಅಂತನ್ನಿಸಿದರೆ ನಾನು ಡಿಪ್ರೆಶನ್‌ನಲ್ಲಿ ಸಿಲುಕಬೇಕಾಗುತ್ತದೆ. ನಾನು ಮಹಾನ್ ಕಪೂರ್ ಕುಟುಂಬದಿಂದ ಬಂದಿರುವವ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಹೊಸಬ ಅಷ್ಟೆ. ಈ ಮಹಾನ್ ಕಲಾವಿದರೊಂದಿಗೆ ನನ್ನನ್ನು ಹೋಲಿಸಲಾಗುತ್ತದೆ. ನಾನೇ ಸ್ವತಃ ಅವರ ಆರಾಧಕ. ನನ್ನ ಅಭಿನಯ ಯಾವ ರೀತಿ ಇದೆ ಎಂಬುದನ್ನು ಚಿತ್ರ ನೋಡಿದ ಮಂದಿಯೇ ಹೇಳುತ್ತಾರೆ.

ನಿಮ್ಮ ಚಿತ್ರ ಸಾಂವರಿಯಾ ಕುರಿತು ಹೇಳಿ...

ಇದೊಂದು ಅದ್ಭುತವಾದ ಪ್ರೇಮಕಥೆಯನ್ನು ಆಧರಿಸಿದ ಚಿತ್ರ. ಇದರಲ್ಲಿ ಸಂಜಯ್ ಲೀಲಾ ಭನ್ಸಾಲಿಯವರು ಪೂರ್ಣವಾಗಿ ಮುಳುಗಿಯೇ ಇದನ್ನು ಮಾಡಿದ್ದಾರೆ. ಇದನ್ನು ಸಂಜಯ್ ಲೀಲಾ ಭನ್ಸಾಲಿ ಚಿತ್ರ ಎಂದೇ ಹೇಳುವುದು ಅತ್ಯಂತ ಸೂಕ್ತ ಅಂತ ಅನಿಸುತ್ತದೆ.

'ಸಾಂವರಿಯಾ'ದಲ್ಲಿ ನಿಮಗೆ ಸಲ್ಮಾನ್ ಖಾನ್ ಹಾಗೂ ರಾಣಿ ಮುಖರ್ಜಿ ಜತೆ ಕೆಲಸ ಮಾಡುವ ಅವಕಾಶ ದೊರೆತಿದೆ. ನಿಮ್ಮ ಅನುಭವ ಹೇಗಿತ್ತು?

ಸಲ್ಮಾನ್ ಜತೆ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವ ಅವಕಾಶ ದೊರೆಯಲಿಲ್ಲ. ಆದರೆ ಅವರಿಂದ ಸಾಕಷ್ಟು ಪ್ರಭಾವಿತನಾಗಿದ್ದೇನೆ. ಅವರಿಂದ ನಾನು ಅಭಿನಯದ ತಂತ್ರಗಳನ್ನು ಕಲಿತುಕೊಂಡಿದ್ದೇನೆ. ರಾಣಿ ಮುಖರ್ಜಿಯಂತೂ ಅದ್ಭುತ ಕಲಾವಿದೆ. ಯಾವತ್ತೂ ನನಗೆ ಸಹಕಾರ ನೀಡಿದ್ದಾರೆ. ಅವರ ಜತೆ ಅಭಿನಯಿಸುವುದು ತುಂಬಾ ಖುಷಿ ಕೊಟ್ಟಿದೆ.

ನಿಮ್ಮ ತಂದೆ ಹಲವಾರು ಹೊಸ ನಾಯಕಿಯರ ಜತೆ ಕೆಲಸ ಮಾಡಿದ್ದಾರೆ. ನೀವು ಕೂಡ ಹಾಗೆಯೇ ಮಾಡುವ ಇಚ್ಛೆ ಇದೆಯೇ?

ಹೆಚ್ಚಿನ ನಾಯಕಿಯರ ಜತೆ ನನ್ನ ತಂದೆಯ ಜೋಡಿ ಸರಿ ಹೋಗುತ್ತಿರಲಿಲ್ಲ. ಅದಕ್ಕಾಗಿ ಅವರು ಹೊಸ ನಾಯಕಿಯರ ಜತೆಯೇ ಕೆಲಸ ಮಾಡಬೇಕಾಗಿತ್ತು. ನನಗೆ ಇಂಥ ಸಮಸ್ಯೆ ಬರಲಾರದು ಎಂಬ ಆಶಾವಾದ ನನ್ನದು. ಹೊಸ ನಾಯಕಿಯರ ಜತೆ ಕೆಲಸ ಮಾಡಲೂ ನನಗ್ಯಾವ ಸಮಸ್ಯೆಯೂ ಇಲ್ಲ.

ನಿಮ್ಮ ತಂದೆ 'ಸಾಂವರಿಯಾ' ನೋಡಿದ್ದಾರೆಯೇ?

ಇಲ್ಲ. ಅವರ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ನನ್ನದು. ಯಾಕೆಂದರೆ ಅವರು ಯಾವುದನ್ನೂ ಮನಸ್ಸಿನಲ್ಲೇ ಇಟ್ಟುಕೊಳ್ಳುವುದಿಲ್ಲ. ಅವರ ಮನಸ್ಸಿನಲ್ಲಿ ಏನಿರುತ್ತದೋ, ನೇರವಾಗಿ ಹೇಳಿಬಿಡುತ್ತಾರವರು.

ಸೋನಮ್ ಅವರ ಯಾವ ವಿಷಯ ನಿಮಗೆ ಇಷ್ಟವಾಗಲಿಲ್ಲ?

ಆಕೆಯದು ಮಾತು ಹೆಚ್ಚು.

ರಾಜ್ ಕಪೂರ್ ಮತ್ತು ಸಂಜಯ್ ಲೀಲಾ ಭನ್ಸಾಲಿ ಅವರಲ್ಲಿ ಒಬ್ಬ ನಿರ್ದೇಶಕರನ್ನು ಆಯ್ಕೆ ಮಾಡಬೇಕಿದ್ದರೆ, ನೀವು ಯಾರನ್ನು ಆರಿಸಿಕೊಳ್ಳುವಿರಿ?

ರಾಜ್ ಕಪೂರ್

ಭವಿಷ್ಯದಲ್ಲಿ ನೀವು ಯಾವ ರೀತಿಯ ಪಾತ್ರಗಳನ್ನು ಮಾಡಬೇಕೆಂದಿದ್ದೀರಿ?

ನಾನು ಯಾವುದೇ ನಿಶ್ಚಿತ ಇಮೇಜ್‌ಗೆ ಸೀಮಿತವಾಗಲು ಬಯವುದಿಲ್ಲ. ರೋಮಾಂಟಿಕ್, ಆಕ್ಷನ್, ಕಾಮಿಡಿ ಮುಂತಾದ ಎಲ್ಲಾ ಪಾತ್ರಗಳನ್ನು ನಿರ್ವಹಿಸುವಾಸೆ.

'ಸಾಂವರಿಯಾ' ಮತ್ತು 'ಓಂ ಶಾಂತಿ ಓಂ' ಎರಡು ಕೂಡಾ ಒಂದೇ ದಿನ ತೆರೆ ಕಾಣಲಿವೆ. ಇದರಿಂದ 'ಸಾಂವರಿಯಾ'ದ ಗಳಿಕೆಗೆ ತೊಡಕಾಗುತ್ತದೆ ಎಂಬ ಆತಂಕವಿಲ್ಲವೇ?

ಶಾರೂಕ್ ಖಾನ್ ಇರುವುದರಿಂದಾಗಿ 'ಓಂ ಶಾಂತಿ ಓಂ'ನ ಕ್ರೇಜ್ ಸಾಕಷ್ಟಿದೆ. ಅವರ ಚಿತ್ರಕ್ಕೆ ನನ್ನ ಶುಭ ಹಾರೈಕೆಗಳು. ಎರಡೂ ಚಿತ್ರಗಳು ಯಶಸ್ವಿಯಾಗಲಿ, ಆದರೆ 'ಸಾಂವರಿಯಾ' ಚಿತ್ರ ಹೆಚ್ಚು ಗಳಿಕೆ ಮಾಡಲಿ ಎಂದೂ ನನ್ನ ಹಾರೈಕೆ.

ರಾಜ್ ಕಪೂರ್ ನಿರ್ದೇಶಿಸಿದ ಯಾವುದೇ ಚಿತ್ರದಲ್ಲಿ ನಿಮಗೆ ಕೆಲಸ ಮಾಡಬೇಕಾಗಿಬಂದರೆ, ನೀವು ಯಾವ ರೀತಿ ಚಿತ್ರಗಳನ್ನು ಆರಿಸುತ್ತೀರಿ?

ಶ್ರೀ 420