ಆಂದ್ರಿತಾ ರೇ ಈಗ ಚಿತ್ರರಂಗದಲ್ಲಿ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಧೂಳ್ ಅನ್ನೋ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಇದು ತಮಿಳಿನ ತಿರುವೆಳ್ಳೆ ಯಾಡಲ್ ಆರಂಭಂ ಅನ್ನೋ ತಮಿಳು ಚಿತ್ರದ ರಿಮೇಕ್.
ಧೂಳ್ ಚಿತ್ರಕ್ಕೆ ಯೋಗೀಶ್ ನಾಯಕ. ಎಂ.ಎಸ್. ರಾಜಶೇಖರ್ ಅವರ ಮಗ ರಾಘವೇಂದ್ರ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಧೂಳ್ ಚಿತ್ರಕ್ಕಾಗಿ ರಾಘವೇಂದ್ರ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು, ಧರಣಿಯಾಗಿದ್ದಾರೆ.
ಚಿತ್ರಕ್ಕೆ ಜುಲೈ 24ರಂದು ಮೂಹೂರ್ತ ನಡೆಯಲಿದೆ. 45 ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಆದಷ್ಟು ಬೇಗ ಚಿತ್ರ ಬಿಡುಗಡೆ ಮಾಡಲಿದ್ದಾರಂತೆ ನಿರ್ದೇಶಕ ರಾಘವೇಂದ್ರ ಆಲಿಯಾಸ್ ಧರಣಿ. ಚಿತ್ರೀಕರಣವನ್ನು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲು ತೀರ್ಮಾನಿಸಿದ್ದಾರೆ. ಉದ್ಯಮಿಯಾದ ಎಂ.ಎಚ್. ಸುನೀಲ್ ಚಿತ್ರದ ನಿರ್ಮಾಪಕರು. ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ತಮಿಳಿನಲ್ಲಿ ಇದೊಂದು ಹಿಟ್ ಚಿತ್ರವಾಗಿದ್ದು, ಕನ್ನಡದಲ್ಲಿ ಹೇಗೆ ಹೊರ ಹೊಮ್ಮುತ್ತದೆ ಎಂಬುದು ಚಿತ್ರ ಬಿಡುಗಡೆಯಾದ ಮೇಲಷ್ಟೇ ನಿರ್ಧಾರವಾಗಲಿದೆ.