ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಮ ಜಪ ಬೇಡವೆಂದ ನಕ್ಷತ್ರ (Nakshatra | Hare Rama Hare Krishna | Gokula)
ಸುದ್ದಿ/ಗಾಸಿಪ್
Feedback Print Bookmark and Share
 
Nakshatra
MOKSHA
ನಕ್ಷತ್ರ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಎರಡು ಚಿತ್ರದಲ್ಲಿ ಒಂದೇ ಬಾರಿಗೆ ನಟಿಸುವುದು ಅಸಾಧ್ಯವೆಂದಿದ್ದಾರೆ. ಇದಕ್ಕಾಗಿ ಹರೆ ರಾಮ ಹರೇ ಕೃಷ್ಣ ಚಿತ್ರದಿಂದ ಹೊರಬಂದಿದ್ದಾರೆ.

ಗೋಕುಲ ಚಿತ್ರಕ್ಕೂ ಈ ಚಿತ್ರಕ್ಕೂ ಡೇಟ್ಸ್ ಕ್ಲಾಶ್ ಆದ್ದರಿಂದ ಅದನ್ನು ಬಿಡಬೇಕಾಯಿತು ಎನ್ನುತ್ತಾರೆ ನಕ್ಷತ್ರ. ಇನ್ನೊಂದು ವಿಶೇಷತೆ ಎಂದರೆ ಅನೇಕ ನಿರ್ಮಾಪಕ-ನಿರ್ದೇಶಕರು ನಕ್ಷತ್ರ ಜತೆಗೆ ಅವರ ತಾಯಿ ಸುಮಿತ್ರಾ ಅವರನ್ನು ಚಿತ್ರದಲ್ಲಿ ಅಭಿನಯಿಸುವುದಕ್ಕೆ ಕರೆಯುತ್ತಾರಂತೆ. ನಕ್ಷತ್ರ ನಟಿಸುವ ಚಿತ್ರಗಳಲ್ಲಿ ಸುಮಿತ್ರ ನಟಿಸಬಹುದು. ಆದರೆ ಸುಮಿತ್ರ ನಟಿಸುವ ಎಲ್ಲಾ ಚಿತ್ರದಲ್ಲಿ ನಕ್ಷತ್ರ ನಟಿಸುವುದು ಕಷ್ಟ. ಅದೇ ಕಾರಣಕ್ಕಾಗಿ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿಲ್ಲವಂತೆ.

ಈ ನಡುವೆ ತಮಿಳಿನಲ್ಲೂ ಈಕೆಗೆ ಆಫರ್ ಬಂದಿದೆಯಂತೆ. ಆದರೆ ಸಧ್ಯಕ್ಕೆ ಯಾವುದನ್ನು ಒಪ್ಪಿಲ್ಲ. ಸರಿಗಮ ನಿಧಾನವಾಗಿ ಸಾಗುತ್ತಿದೆ. ಆದಾದ ಬಳಿಕ ಮಿಕ್ಕ ಚಿತ್ರಗಳ ಬಗ್ಗೆ ಗಮನಹರಿಸುತ್ತಾರೆ ಎನ್ನುತ್ತಾರೆ ನಕ್ಷತ್ರ. ಅಂದ ಹಾಗೆ ಸರಿಗಮದಲ್ಲಿ ಗುಂಡಗಿದ್ದ ನಕ್ಷತ್ರ ಇದೀಗ ತೆಳ್ಳಗಾಗಿದ್ದಾರೆ. 10 ಕೆಜಿ ಇಳಿಸಿಕೊಂಡಿದ್ದರ ಹಿಂದಿನ ಗುಟ್ಟು ಯೋಗ, ಡ್ಯಾನ್ಸ್ ಎನ್ನುತ್ತಾರೆ ನಕ್ಷತ್ರ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಕ್ಷತ್ರ, ಹರೇ ರಾಮ ಹರೇ ಕೃಷ್ಣ, ಗೋಕುಲ