ವಾಷಿಂಗ್ಟನ್, ಭಾನುವಾರ, 25 ಅಕ್ಟೋಬರ್ 2009( 15:27 IST )
ದಿನೇ, ದಿನೇ ಹೆಚ್ಚಳ ಕಾಣುತ್ತಿರುವ ಹಂದಿಜ್ವರದ ಪಿಡುಗು ಅಮೆರಿಕದಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಎಂದು ಘೋಷಿಸಲಾಗಿದೆ.
ಅಮೆರಿಕದಲ್ಲಿ ಎಚ್1ಎನ್1 ರೋಗದಿಂದ ಈವರೆಗೆ ಒಂದು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಜನರಿಗೆ ಸೋಂಕು ತಗುಲಿದ್ದು ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತುರ್ತು ಘೋಷಣೆ ಹೊರಡಿಸಿದ್ದಾರೆ.
ಅಮೆರಿಕದಾದ್ಯಂತ ಹಲವಾರ ಸಮುದಾಯಗಳೊಳಗೆಯೇ ಎಚ್1ಎನ್1ರೋಗದ ಸೋಂಕು ಬಹಳ ವೇಗದಲ್ಲಿ ಹೆಚ್ಚಾಗುತ್ತಿದೆ. ಕೆಲವು ಸ್ಥಳಗಳಲ್ಲಿ ವೈದ್ಯಕೀಯ ಸಂಪನ್ಮೂಲಗಳ ಕೊರತೆಯೇ ಎದ್ದಿದೆ ಎಂದು ಒಬಾಮ ತಮ್ಮ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ವೈದ್ಯಾಧಿಕಾರಿಗಳು ಕೆಲವು ನಿರ್ದಿಷ್ಟ ಸರ್ಕಾರಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ತುರ್ತುಸ್ಥಿತಿ ಘೋಷಣೆಯಾದಾಗ ಇಂಥ ನಿಯಮಗಳನ್ನು ಪಾಲಿಸದೆಯೇ ರೋಗಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಒಬಾಮ ವಿವರಿಸಿದ್ದಾರೆ.