ತನ್ನ ಪತಿಯು ತನಗೆ ಫೋನ್ ಮತ್ತು ಎಸ್ಎಂಎಸ್ ಮೂಲಕ ತಲಾಖ್ ನೀಡಿದ್ದಾರೆ ಎಂದು ಹರ್ಯಾಣದ ಮಾಜಿ ಉಪಮುಖ್ಯಮಂತ್ರಿ ಚಂದ್ರಮೋಹನ್ ಅವರ ಹಾಲಿ ಪತ್ನಿ ಚಾಂದ್ ಫಿಜಾ ದೂರುವ ಮೂಲಕ ಇವರ ವಿವಾಹ ಪ್ರಕರಣ ಮತ್ತೊಂದು ತಿರುವು ಪಡೆದಿದೆ." ಕಳೆದ ರಾತ್ರಿ ಅವರು ನನಗೆ ಫೋನ್ ಮಾಡಿ ಮೂರು ಬಾರಿ ತಲಾಖ್ ಉಲ್ಲೇಖಿಸಿದ್ದಾರೆ. ಅವರು ಈ ಕರೆಯನ್ನು ಲಂಡನ್‌ನಿಂದ ಮಾಡಿರುವುದಾಗಿ ಪೋನ್ ನಂಬರ್ ನಮೂದಾಗಿದೆ" ಎಂದು ಫಿಜಾ ಅವರು ಮೊಹಾಲಿಯಲ್ಲಿನ ತನ್ನ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಚಂದ್ರ ಮೋಹನ್ ಅಲಿಯಾಸ್ ಚಾಂದ್ ಮೊಹಮ್ಮದ್ ತನಗೆ ತಲಾಖ್ ಹೇಳುವ ಟೆಕ್‌ಸ್ಟ್ ಮೆಸೇಜ್ ಕಳುಹಿಸಿದ್ದಾರೆ ಎಂದೂ ಹೇಳಿದ್ದಾರೆ.ಅವರು ತನ್ನೊಂದಿಗೆ ಕ್ಷಿಪ್ರ ಮಾತುಕತೆ ನಡೆಸಿದ್ದು, ಅವರು ಬೆದರಿಕೆಯ ಭಾಷೆಯನ್ನು ಬಳಸಿದರು ಮತ್ತು ಅತ್ಯಂತ ಒರಟಾಗಿ ಮಾತನಾಡಿದರು ಎಂದು ದೂರಿ ಫಿಜಾ, ಚಂದ್ರ ಮೋಹನ್ ತನಗೆ ಐದು ಲಕ್ಷ ಪರಿಹಾರ ನೀಡುವುದಾಗಿ ಹೇಳಿದರೆಂದು ತಿಳಿಸಿದ್ದಾರೆ.ತನ್ನ ಹಿಂದಿನ ದೂರಿನ ಕುರಿತು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ, ಹೊಸದೊಂದು ದೂರು ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ.ಹರ್ಯಾಣದ ಮಾಜಿಮುಖ್ಯಮಂತ್ರಿಯಾಗಿದ್ದ ಚಂದ್ರ ಮೋಹನ್ ಅವರು ಈ ವಿವಾಹದಿಂದಾಗಿ ತನ್ನ ಸ್ಥಾನ ಕಳೆದುಕೊಂಡಿದ್ದರು. ಅಲ್ಲದೆ ಪುತ್ರನ ಕೃತ್ಯದಿಂದ ಕೋಪಗೊಂಡ ಅವರ ತಂದೆ ಭಜನ್‌ಲಾಲ್ ಅವರು ಮಗನನ್ನು ಮನೆಯಿಂದ ಹೊರಗೆ ಹಾಕಿದ್ದರು. ಸಹಜವಾಗೇ ಮೊದಲ ಪತ್ನಿ ದೂರಸರಿದಿದ್ದರು. ಅನುರಾಧ ಬಾಲಿ ಎಂಬ ವಕೀಲೆಯನ್ನು ವಿವಾಹವಾಗಲು ಚಂದ್ರಮೋಹನ್ ಮುಸ್ಲಿಂಧರ್ಮಕ್ಕೆ ಮತಾಂತರವಾಗಿದ್ದರು. ಹರ್ಯಾಣ ಮಾಜಿ ಉಪಮುಖ್ಯಮಂತ್ರಿಯ ಹಾಲಿ ಪತ್ನಿ ಆತ್ಮಹತ್ಯೆ ಯತ್ನ |