ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲವ್ ಜಿಹಾದ್: ಡಿಜಿಪಿ ವರದಿಗೆ ಕೇರಳ ಹೈಕೋ ಅಸಮಾಧಾನ (Love jihad | Kelrala | High Court | DGP)
Feedback Print Bookmark and Share
 
'ಲವ್ ಜಿಹಾದ್' ಹೆಸರಿನಲ್ಲಿ ಇತರ ಧರ್ಮಗಳ ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಪ್ರಕರಣಗಳ ಕುರಿತು ಡಿಜಿಪಿ ಜಾಕೊಬ್ ಪನ್ನೂಸ್ ನೀಡಿದ ವರದಿಗೆ ಅಸಮಾಧಾನ ಸೂಚಿಸಿರುವ ಕೇರಳ ಹೈಕೋರ್ಟ್ ಹೆಚ್ಚಿನ ತನಿಖೆ ನೆಡೆಸುವಂತೆ ಸೂಚಿಸಿದೆ. ಡಿಜಿಪಿ ವರದಿಯಲ್ಲಿ ಹೇಳಲಾದ ಕೆಲ ಉತ್ತರಗಳು ಅಸ್ಪಷ್ಟವಾಗಿವೆ ಅಲ್ಲದೆ ವ್ಯತ್ಯಸ್ಥ ಪ್ಯಾರಾಗಳಲ್ಲಿ ಇರುವ ಹೇಳಿಕೆಗಳು ಪರಸ್ಪರ ತಾಳೆಯಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಕೆ. ಶಂಕರನ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದರು.

ಡಿಜಿಪಿ ಜಾಕೊಬ್ ಪನ್ನೂಸ್ ಅಕ್ಟೋಬರ್ 22ರಂದು ಕೋರ್ಟ್‌ಗೆ ಸಲ್ಲಿಸಿದ್ದ ವರದಿಯಲ್ಲಿ, ಮುಸ್ಲಿಂ ಯುವಕರ ಜತೆ ಇತರ ಧರ್ಮಗಳ ಯುವತಿಯರು ಪ್ರೀತಿಯಲ್ಲಿ ಬಿದ್ದಾಗ ಅವರನ್ನು ಮತಾಂತರವಾಗುವಂತೆ ಮನವೊಲಿಸುವ ಕಾರ್ಯ ನಡೆಯುತ್ತಿದೆ ಎಂದು ಶಂಕಿಸಲು ಕೆಲ ಆಧಾರಗಳಿವೆ. ಆದರೆ, ‘ಲವ್ ಜಿಹಾದ್’ ಎಂಬ ಯಾವ ಸಂಘಟನೆಯೂ ರಾಜ್ಯದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದರು.

ಈ ವರದಿಯನ್ನು ಸಿದ್ಧಪಡಿಸಲು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಹಾಗೂ ಕೆಳ ಹಂತದ ಅಧಿಕಾರಿಗಳಿಂದ ಪಡೆದ ಮಾಹಿತಿಗಳನ್ನು ನವೆಂಬರ್ 11ರಂದು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇರಳ ಹೈಕೋರ್ಟ್ ಡಿಜಿಪಿಗೆ ಸೂಚಿಸಿದೆ

ಏತನ್ಮಧ್ಯೆ, ಕೇರಳದಲ್ಲಿ ಲವ್ ಜಿಹಾದ್ ನಡೆಯುತ್ತಿರುವ ಕುರಿತು ಬೇಹುಗಾರಿಕಾ ಇಲಾಖೆಗೆ ಯಾವುದೇ ಮಾಹಿತಿ ದೊರಕಿಲ್ಲ ಎಂಬುದಾಗಿ ಸಹಾಯಕ ಸಾಲಿಸಿಟರ್ ಜನರಲ್ ಟಿ.ಪಿ.ಎಂ. ಇಬ್ರಾಹಿಂ ಖಾನ್ ತಿಳಿಸಿದ್ದಾರೆ. ನವೆಂಬರ್ 11ರಂದು ಈ ಕುರಿತು ವರದಿ ನೀಡುವಂತೆ ಕೋರ್ಟ್ ಸೂಚಿಸಿತು.
ಸಂಬಂಧಿತ ಮಾಹಿತಿ ಹುಡುಕಿ