ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪತ್ನಿಗೆ ಅಪ್ಪನಿಂದಲೇ ರೇಪ್ ಮಾಡಿಸಿದ ಷಂಡ ಗಂಡ! (Impotent husband | father | rape | wife)
Feedback Print Bookmark and Share
 
ತಾನು ಷಂಡನೆಂದು ತಿಳಿದ ಪತಿಯೊಬ್ಬ ತನ್ನ ಅಪ್ಪನಿಂದಲೇ ಪತ್ನಿಯ ಮೇಲೆ ಅತ್ಯಾಚಾರವೆಸಗುವಂತೆ ಮಾಡಿರುವ ಘಟನೆ ಕುರಿತು ರಾಜ್‌ಕೋಟ್‌ನಿಂದ ವರದಿಯಾಗಿದೆ.

ತನ್ನ ಪತಿ ಷಂಡನೆಂದು ವೈದ್ಯರು ಘೋಷಿಸಿರುವ ಬಳಿಕ, ಪತಿಯ ಅಪ್ಪ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳೆಯೊಬ್ಬಾಕೆ ದೂರು ನೀಡಿದ್ದಾರೆ. ಮಾವನ ಈ ದುರಾಚಾರಕ್ಕೆ ತನ್ನ ಪತಿಯ ಒಪ್ಪಿಗೆ ಇತ್ತೆಂದು ಹೇಳಿರುವ ಆಕೆ, ಈ ಮೂಲಕ ಮಗುವನ್ನು ಪಡೆಯಲು ಪತಿ ಈ ಕೃತ್ಯಕ್ಕೆ ಒಪ್ಪಿಗೆ ನೀಡಿದ್ದ ಎಂಬುದಾಗಿ ಆ ಮಹಿಳೆ ದಾಖಲಿಸಿರುವ ದೂರಿನಲ್ಲಿ ಹೇಳಲಾಗಿದೆ.

ತನ್ನ ಅತ್ತೆ, ಪತಿ, ಪತಿಯ ಸಹೋದರ ಹಾಗೂ ಪತಿಯ ಚಿಕ್ಕಪ್ಪ ಎಲ್ಲರ ವಿರುದ್ಧವೂ ದೈಹಿಕ ಹಲ್ಲೆ ಹಾಗೂ ಅತ್ಯಾಚಾರದ ಸಂಚಿನ ವಿರುದ್ಧ ದೂರು ನೀಡಲಾಗಿದೆ. ಎರಡು ತಿಂಗಳ ಹಿಂದೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಈ ಆಘಾತದಿಂದ ಚೇತರಿಸಿಕೊಳ್ಳಲು ಎರಡು ತಿಂಗಳು ಹಿಡಿಯಿತೆಂದು ಅವರು ತನ್ನ ದೂರಿನಲ್ಲಿ ಹೇಳಿದ್ದಾರೆ.

ರಾಜ್‌ಕೋಟ್‌ನ ಮೊರ್ಬಿ ತಾಲೂಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇಲ್ಲಿ ಮಹಿಳೆಯರ ಹೆತ್ತವರು ವಾಸಿಸುತ್ತಿದ್ದಾರೆ. ಮಾವ ವಿಮಲ್ ಗೋಪಿಯಾನಿ ವಿರುದ್ಧ ಅತ್ಯಾಚಾರವಲ್ಲದೆ, ದೈಹಿಕ ಹಿಂಸೆ ಹಾಗೂ ಕೊಲೆ ಯತ್ನದ ಆರೋಪಗಳನ್ನೂ ಹೊರಿಸಲಾಗಿದೆ.

ಈಕೆ ಧರ್ಮೇಶ್ ಎಂಬಾತನ್ನು ಏಳುವರ್ಷಗಳ ಹಿಂದೆ ವಿವಾಹವಾಗಿದ್ದರು. ವಿವಾಹವಾಗಿ ಎರಡು ವರ್ಷ ಕಳೆದರೂ ಆಕೆ ಗರ್ಭಧರಿಸದಿದ್ದಾಗ, ಆಕೆಯ ಪತಿಯ ಮನೆಯವರು ವೈದ್ಯರೊಬ್ಬರ ಬಳಿ ಕರೆದೊಯ್ದಿದ್ದರು. ಇಲ್ಲಿ ಆಕೆ ಗರ್ಭಧರಿಸಲು ವೈದ್ಯಕೀಯವಾಗಿ ಶಕ್ತಳಾಗಿಲ್ಲ ಎಂದು ವೈದ್ಯರು ಹೇಳಿದ್ದರು. ಸಂಶಯಗೊಂಡ ಆಕೆ ದ್ವಿತೀಯ ಅಭಿಪ್ರಾಯಕ್ಕಾಗಿ ಇನ್ನೋರ್ವ ವೈದ್ಯರ ಸಲಹೆ ಕೇಳಿದಾಗ ಈಕೆಯಲ್ಲಿ ಏನೂ ಸಮಸ್ಯೆ ಇಲ್ಲ ಎಂದು ಹೇಳಲಾಗಿತ್ತು. ಈ ಕುರಿತು ತನ್ನ ಪತಿಯ ಮನೆಯವರೊಂದಿಗೆ ಕೇಳಿದ್ದಾಗ, ಧರ್ಮೇಶ್‌ಗೆ ವೈದ್ಯಕೀಯ ಸಮಸ್ಯೆ ಇತ್ತು ಎಂದು ಒಪ್ಪಿಕೊಂಡಿದ್ದರು.

ಇದಾದ ಬಳಿಕ ಒಂದು ದಿನ ಆಕೆಯ ಮಾವ ಆಕೆಗೆ ನಿದ್ರೆಯ ಮಾತ್ರೆಗಳನ್ನು ನೀಡಿದ್ದು, ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೇಳೆ ಅತ್ಯಾಚಾರವೆಸಗಿದ್ದ. ಈ ಕುರಿತು ತನ್ನ ಪತಿಯೊಂದಿಗೆ ದೂರಿಕೊಂಡಾಗ, ಮಗುವನ್ನು ಹಡೆಯಲು ಇದೆಲ್ಲಾ ಯೋಜಿತ ಕೃತ್ಯ ವೆಂದು ಹೇಳಿದನೆಂದು ದೂರಲಾಗಿದೆ.

ಪರಿಸ್ಥಿತಿಯ ಅರಿವಾಗಿ ಈಕೆ ಬೊಬ್ಬೆ ಹೊಡೆದಾಗ ಆಕೆಗೆ ಇನ್ನಷ್ಟು ನಿದ್ರೆ ಮಾತ್ರೆಗಳನ್ನು ನೀಡಿ ಕೊಲೆ ಮಾಡಲು ಪ್ರಯತ್ನಿಸಲಾಯಿತು. ಕೊನೆಗೆ ಹೇಗೋ ಮೊಬೈಲ್ ಫೋನ್ ಒಂದನ್ನು ಪಡೆಯವಲ್ಲಿ ಶಕ್ತಳಾದ ಆಕೆ ಈ ಕುರಿತು ತನ್ನ ಹೆತ್ತವರಿಗೆ ಮಾಹಿತಿ ನೀಡಿದ್ದಳು.

ಇದೊಂದು ಪೊಲೀಸ್ ಪ್ರಕರಣವಾಗಬಹುದೆಂದು ಹೆದರಿದ ಆಕೆಯ ಪತಿಯ ಮನೆಯವರು ಆಕೆಯನ್ನು ಬಳಿಕ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆ ಸಂಪೂರ್ಣ ಚೇತರಿಸಿಕೊಂಡು ಆಘಾತದಿಂದಹೊರ ಬಂದಿರುವ ಬಳಿಕ ದೂರು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ