ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
7 ಯತಿಗಳ ಗೈರು: ಪರ್ಯಾಯ ಪೀಠವೇರಿದ ಪುತ್ತಿಗೆ ಶ್ರೀ
ಇತಿಹಾಸದಲ್ಲೇ ಮೊದಲ ಬಾರಿಗೆ ಉಡುಪಿ ಅಷ್ಟಮಠದ ಏಳು ಮಠಗಳ ಯತಿಗಳ ಅನುಪಸ್ಥಿತಿಯಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಶುಕ್ರವಾರ ಬೆಳಗ್ಗೆ ಪರ್ಯಾಯ ಪೀಠಾರೋಹಣ ಮಾಡಿದರು.

ಆತಂಕ, ಆನಿಶ್ಚಿತತೆಯ ನಡುವೆಯೇ ಸಾಗಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಿದರಾದರೂ ಏಳು ಮಂದಿ ಸ್ವಾಮೀಜಿಗಳ ಅನುಪಸ್ಥಿತಿಯಲ್ಲಿ ಪುತ್ತಿಗೆ ಶ್ರೀಗಳು ಪರ್ಯಾಯ ದರ್ಬಾರ್ ನೆರವೇರಿಸಿದರು.

ಪ್ರತಿಷ್ಠಿತ ಮಠಾಧೀಶರ ಹಗ್ಗ ಜಗ್ಗಾಟ; 'ಮುರಿದರೂ ಮುರಿದೇನು ಆದರೆ ಬಗ್ಗಲಾರೆ' ಎಂಬ ಭಾವ ಬಿಂಬಿತವಾಗಿದ್ದ ಹಿನ್ನೆಲೆಯಲ್ಲಿ ಪರ್ಯಾಯ ಸುಸೂತ್ರವಾಗಿ ನಡೆಯುವುದೇ ಎಂಬ ಕುತೂಹಲ ಮೊದಲಿನಿಂದಲೂ ಇತ್ತು.

ನಿನ್ನೆ ಸಂಜೆಯ ತನಕವೂ ಗೊಂದಲದ ಗೂಡೇ ಆಗಿದ್ದ ಪೀಠಾರೋಹಣ ಮತ್ತು ಶ್ರೀಕೃಷ್ಣ ಪೂಜೆಯ ವಿಷಯಗಳು ಸಾಯಂಕಾಲದ ಹೊತ್ತಿಗೆ ಒಂದು ಪ್ರಮುಖ ಘಟ್ಟಕ್ಕೆ ಬಂದಿದ್ದವು. ಏನು ಮಾಡಿದರೂ ಶ್ರೀಕೃಷ್ಣ ಪೂಜೆ ಮಾಡಿಯೇ ಸಿದ್ಧ ಎಂಬ ಭಾವ ತಳೆದಿದ್ದ ಪುತ್ತಿಗೆ ಶ್ರೀಗಳು ಇದಕ್ಕೆ ಸಂಬಂಧಿಸಿದ ಆಚರಣೆಗಳಲ್ಲಿ ತೊಡಗಿಕೊಂಡುಬಿಟ್ಟಿದ್ದರು.

ಬಹುಮತದ ವಿರೋಧದ ನಡುವೆಯೂ ಪುತ್ತಿಗೆ ಶ್ರೀಗಳು ಸರ್ವಜ್ಞ ಪೀಠವೇರಿರುವುದು ಅವರ ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದರೆ, ಅಪ್ಪಟ ಸಂಪ್ರದಾಯವಾದಿ ಮನೋಭಾವದ ಭಕ್ತಗಣದಲ್ಲಿ ಕೊಂಚ ಬೇಸರ ಮೂಡಿಸಿತ್ತು.
ಮತ್ತಷ್ಟು
ಆಡ್ವಾಣಿ ಭೇಟಿಯಿಂದ ಬಿಜೆಪಿ ಚಟುವಟಿಕೆ ಬಿರುಸು
ನಿಧಿಯ ಆಸೆಗಾಗಿ ಮಹಿಳೆಯರಿಬ್ಬರ ಬಲಿ
ನೆಲೆ ಕಂಡುಕೊಳ್ಳದ ಎಂ.ಪಿ.ಪ್ರಕಾಶ್
ಆತಂಕ - ಗೊಂದಲಗಳ ಮಧ್ಯೆಯೇ ಪರ್ಯಾಯಕ್ಕೆ ಸಿದ್ಧತೆ
3 ವರ್ಷದಲ್ಲಿ ನೈಸರ್ಗಿಕ ಅನಿಲ ವಿದ್ಯುತ್ ಕೇಂದ್ರಗಳು
ಪರ್ಯಾಯಕ್ಕೆ ಕ್ಷಣಗಣನೆ: ಶೃಂಗಾರಗೊಂಡ ಉಡುಪಿ