ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇನ್ನೂ ಮುಂದುವರಿದ ಆಪರೇಶನ್ 'ಕಾಂಚನಾ' (Bijapur | Borewell | Police | DC)
 
ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿರುವ 4ರ ಹರೆಯದ ಪುಟ್ಟ ಬಾಲಕಿ ಕಾಂಚನಾಳ ರಕ್ಷಣೆಗಾಗಿ ಸಹಸ್ರಾರು ಜನರ ಪ್ರಾರ್ಥನೆ;ನಿರಂತರ ಕಾರ್ಯಾಚರಣೆ ಇನ್ನೂ ಫಲ ನೀಡಿಲ್ಲ. ಬಾಲಕಿ ಬದುಕಿರುವ ಸಾಧ್ಯತೆ ಕ್ಷೀಣವಾಗಿದ್ದರೂ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಘಟನಾ ಸ್ಥಳದಲ್ಲಿ ಎರಡು ದಿನಗಳಿಂದ ನೆರೆದಿರುವ ಸಹಸ್ರಾರು ಜನ ಮಗುವನ್ನು ಮೇಲಕ್ಕೆತ್ತುವುದನ್ನೇ ನೋಡುತ್ತಿದ್ದಾರೆ. ತಂದೆ-ತಾಯಿಯರು ಕರುಳ ಕುಡಿಗಾಗಿ ರೋಧಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಯೋಧರ ಪಡೆ, ಅಗ್ನಿಶಾಮಕ ಪಡೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಂಡೆ ಸಿಕ್ಕಿದ್ದರಿಂದ ಕಾರ್ಯಾಚರಣೆಗೆ ತೀವ್ರ ಅಡ್ಡಿ ಉಂಟಾಗಿದ್ದು, ಇನ್ನೂ 16ಅಡಿಗಳಷ್ಟು ಹೊಂಡ ತೋಡಲು ಬಾಕಿ ಇರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ನಾಲ್ಕು ವರ್ಷದ ಕಾಂಚನಾಳ ರಕ್ಷಣೆಗಾಗಿ ಸೋಮವಾರ ಸಂಜೆಯಿಂದ ಆರಂಭಗೊಂಡಿರುವ ಕಾರ್ಯಾಚರಣೆ ಬುಧವಾರವೂ ಮುಂದುವರಿದಿದೆ. ಕೊಳವೆಯ ಮೂಲಕ ನಿರಂತರವಾಗಿ ಆಮ್ಲಜನಕ ಪೂರೈಸಲಾಗುತ್ತಿದ್ದು, ಆಕೆಯ ಚಲನವಲನದ ಯಾವುದೇ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಆದರೂ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.

ಬೆಳಗಾವಿ ಹಾಗೂ ಆಂಧ್ರಪ್ರದೇಶದ ಸಿಕಂದರಾಬಾದ್‌ನಿಂದ ಆಗಮಿಸಿರುವ ಸೇನೆಯ ಪರಿಣತ ಯೋಧರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಮಂಗಳವಾರ 20ಅಡಿ ಆಳದ ನಂತರ ಕಲ್ಲು ಬಂಡೆ ಅಡ್ಡಿಯಾಗಿ ಪರಿಣಮಿಸಿದೆ. ಸಂಜೆಯಿಂದ ಕಾಂಪ್ರೆಸ್ಸರ್ ಮೂಲಕ ಡ್ರಿಲ್ ಮಾಡಿ, ಜಿಲೆಟಿನ್ ಬಳಸಿ ಲಘ ಸ್ಫೋಟದ ಮೂಲಕ ಬಂಡೆಯನ್ನು ಒಡೆಯಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಉಪಾಹಾರ, ನೀರು ಪೂರೈಸುವ ಮೂಲಕ ಗ್ರಾಮಸ್ಥರು ಮಾನವೀಯತೆ ಮೆರೆದರು. ಕೊಳವೆ ಬಾವಿ ಇರುವ ಜಮೀನು ಮಾಲಿಕ ರಾಮಚಂದ್ರಪ್ಪ ಡೊಳ್ಳಿ ಎಂಬಾತನ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮಂಗಳವಾರ ಆತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ಬಂಧಿಸುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಆತನನ್ನು ನಂತರ ಬಿಡಲಾಯಿತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ