ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೇಲ್ಮನೆ ಚುನಾವಣೆ; ಕಾಂಗ್ರೆಸ್ 10, ಜೆಡಿಎಸ್ 05, ಬಿಜೆಪಿ 10 (Congress | BJP | Legislative council | Karnataka)
Bookmark and Share Feedback Print
 
ರಾಜ್ಯ ವಿಧಾನಪರಿಷತ್ ಚುನಾವಣೆಯ ಮತಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಮೇಲುಗೈ ಸಾಧಿಸಿದೆ. ಆಡಳಿತಾರೂಢ ಬಿಜೆಪಿ 10 ಸ್ಥಾನಗಳನ್ನು ತನ್ನ ಬಗಲಿಗೆ ಹಾಕಿಕೊಂಡಿದೆ. ಆದರೆ ಒಟ್ಟಾರೆ ಲೆಕ್ಕಾಚಾರದಲ್ಲಿ ಪ್ರತಿಷ್ಠೆಯ ಕಣವಾಗಿದ್ದ ಮೇಲ್ಮನೆ ಕದನದಲ್ಲಿ ಕಾಂಗ್ರೆಸ್ 9 (ಈ ಮೊದಲು 19ಸ್ಥಾನ ಪಡೆದಿತ್ತು) ಸ್ಥಾನಗಳಲ್ಲಿ ನಷ್ಟ ಅನುಭವಿಸಿದೆ. ಬಿಜೆಪಿ ನಾಲ್ಕರಿಂದ ತನ್ನ ಬಲವನ್ನು 10ಕ್ಕೆ ಏರಿಸಿಕೊಂಡಿದ್ದರೆ, ಜೆಡಿಎಸ್ ಹೊಂದಿದ್ದ 1 ಸ್ಥಾನವನ್ನು 5ಕ್ಕೆ ಏರಿಸಿಕೊಂಡಂತಾಗಿದೆ.

ಡಿಸೆಂಬರ್ 18ರಂದು 23 ಸ್ಥಾನಗಳಿಗಾಗಿ ನಡೆದ ಮತದಾನದ ಮತಎಣಿಕೆ ಸೋಮವಾರ ಬೆಳಿಗ್ಗೆ ಆರಂಭಗೊಂಡಿತ್ತು. ಕಾಂಗ್ರೆಸ್ 10, ಭಾರತೀಯ ಜನತಾ ಪಕ್ಷ-10 ಹಾಗೂ ಜೆಡಿಎಸ್ 05 ಸ್ಥಾನಗಳಲ್ಲಿ ಜಯಭೇರಿ ಗಳಿಸಿದೆ.

ಸ್ಥಳೀಯ ಸಂಸ್ಥೆಗಳಿಗೆ ನಡೆಯಬೇಕಾಗಿದ್ದ ಚುನಾವಣೆಯಲ್ಲಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ಕಾರಣ 23 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿತ್ತು. ಮಂಗಳೂರು ಕ್ಷೇತ್ರದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಕ್ಷೇತ್ರದ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದರು.

ಈ ಚುನಾವಣೆ ಜನಾದೇಶವಲ್ಲದಿದ್ದರೂ ಕೂಡ ಸಾಮಾನ್ಯವಾಗಿ ಎಲ್ಲ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷವೇ ಮೇಲುಗೈ ಸಾಧಿಸುತ್ತಿದ್ದುದು ಸ್ಪಷ್ಟ. ಆದರೆ ಈ ಬಾರಿ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ಹಿನ್ನೆಡೆ ಸಾಧಿಸಿದಂತಾಗಿದೆ. ಮೈತ್ರಿಯ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ಬಲಿಷ್ಠವಾಗಿ ಹೊರಹೊಮ್ಮಿದ್ದರೂ ಸಹ ವೈಯಕ್ತಿಕ ನೆಲೆಯಲ್ಲಿ ಜೆಡಿಎಸ್‌ಗೆ ಬಹುತೇಕ ಲಾಭವಾಗಿದೆ.

ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗಿದ್ದ ತುಮಕೂರು, ಚಿಕ್ಕಮಗಳೂರು, ಕಾರವಾರ, ಕೊಡಗು ಕ್ಷೇತ್ರಗಳಲ್ಲಿ ಬಿಜೆಪಿ ಸೋಲುಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದ್ದರೂ ಕಾಂಗ್ರೆಸ್ 10ಸ್ಥಾನಗಳಲ್ಲಷ್ಟೇ ಜಯಸಾಧಿಸುವಲ್ಲಿ ಶಕ್ತವಾಗಿ ಮೇಲ್ಮನೆಯಲ್ಲಿ ತನ್ನ ಬಲವನ್ನು ಕುಗ್ಗಿಸಿಕೊಂಡಿದೆ. ಸಿದ್ದರಾಮಯ್ಯ ಪ್ರಾಬಲ್ಯ ಹೊಂದಿದ್ದ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿ, ತಮ್ಮ ಖಾತೆಯನ್ನು ತೆರೆದಿದೆ. ಆದರೆ ಈ ಮೊದಲು ಮೇಲ್ಮನೆಯಲ್ಲಿ ಕೇವಲ ನಾಲ್ಕು ಸ್ಥಾನ ಹೊಂದಿದ್ದ ಬಿಜೆಪಿ ಈ ಬಾರಿ 10ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಬಲವನ್ನು ವೃದ್ಧಿಸಿಕೊಂಡಿದೆ.

ಮತಎಣಿಕೆಯ ಪೂರ್ಣ ಫಲಿತಾಂಶ ವಿವರ ಇಲ್ಲಿದೆ...

ಕ್ಷೇತ್ರಗೆದ್ದವರುಸೋತವರುಕಾಂಗ್ರೆಸ್ಬಿಜೆಪಿಜೆಡಿಎಸ್
ಮಂಗಳೂರುಶ್ರೀನಿವಾಸ ಪೂಜಾರಿ----------01---
ಉಡುಪಿಪ್ರತಾಪಚಂದ್ರ ಶೆಟ್ಟಿ----------10---
ಕೊಡಗುಟಿ.ಜಾನ್ಎಸ್.ಜಿ. ಮೇದಪ್ಪ10---
ಬೆಂಗಳೂರು ನಗರದಯಾನಂದ ರೆಡ್ಡಿಎಚ್.ಎಸ್. ಗೋಪಿನಾಥ್10---
ಮಂಡ್ಯಜಿ. ರಾಮಕೃಷ್ಣಜಿ.ಟಿ. ಶಿವಕುಮಾರ್001
ಶಿವಮೊಗ್ಗಆರ್.ಕೆ. ಸಿದ್ಧರಾಮಣ್ಣಮಹಿಮಾ ಪಟೇಲ್01---
ಉತ್ತರ ಕನ್ನಡಎಸ್.ಎಲ್. ಘೋಟ್ನೇಕರ್ವಿನೋದ್ ಮಾಧವಪ್ರಭು10---
ಹಾಸನಪಟೇಲ್ ಶಿವರಾಂಎಚ್.ಆರ್. ನಾರಾಯಣ್---01
ತುಮಕೂರುಎಂ.ಆರ್. ಹುಲಿನಾಯ್ಕರ್ಬಿ.ಡಿ. ಗೋಪಾಲಕೃಷ್ಣ---01
ಚಿಕ್ಕಮಗಳೂರುಗಾಯತ್ರಿ ಶಾಂತೇಗೌಡಎಂ.ಎಸ್. ಭೋಜೇ ಗೌಡ10---
ಕೋಲಾರನಜೀರ್ ಅಹ್ಮದ್ಸುರೇಂದ್ರ ಗೌಡ10---
ಬಿಜಾಪುರ-1ಎಸ್.ಆರ್.ಪಾಟೀಲ್----------10---
ಬಿಜಾಪುರ-2ಜಿ.ಎಸ್. ನ್ಯಾಮಗೌಡ----------01-
ಮೈಸೂರು-1ಸಂದೇಶ್ ನಾಗರಾಜ್----------001
ಮೈಸೂರು-2ಕೆ.ಆರ್. ಮಲ್ಲಿಕಾರ್ಜುನಪ್ಪ----------010
ಚಿತ್ರದುರ್ಗಜಿ.ಎಚ್. ತಿಪ್ಪಾ ರೆಡ್ಡಿಬಿ.ಟಿ. ಸಿದ್ಧೇಶ್---10
ಬಳ್ಳಾರಿಮೃತ್ಯುಂಜಯ ಜಿನಗವೆಂಕಟರಾವ್ ಘೋರ್ಪಡೆ01---
ರಾಯಚೂರುಹಾಲಪ್ಪ ಆಚಾರ್ಬಸವರಾಜ ಪಾಟೀಲ್01---
ಗುಲ್ಬರ್ಗಾಅಲ್ಲಮಪ್ರಭು ಪಾಟೀಲ್ಸುಭಾಷ್ ಬಿರದಾರ್10---
ಬೀದರ್ಬಸವರಾಜ ಪಾಟೀಲ್ಚಂದ್ರಶೇಖರ ಪಾಟೀಲ್01---
ಬೆಂಗಳೂರು ಗ್ರಾಮಾಂತರಇ. ಕೃಷ್ಣಪ್ಪಗೋಪಾಲ ಗೌಡ001
ಧಾರವಾಡ-1ಶ್ರೀನಿವಾಸ ಮಾನೆಎಂ.ಆರ್. ಪಾಟೀಲ್10---
ಧಾರವಾಡ-2ಶಿವರಾಜ್ ಸಜ್ಜನರ್ಡಿ.ಎಂ. ಸಾಲಿ---10
ಬೆಳಗಾವಿ-1ಮಹಾಂತೇಶ ಕವಟಗಿಮಠಲಿಂಗರಾಜ ಪಾಟೀಲ್---10
ಬೆಳಗಾವಿ-2ವೀರಕುಮಾರ್ ಪಾಟೀಲ್----------10---
ಒಟ್ಟು (25)------------------------10105

ಸಂಬಂಧಿತ ಮಾಹಿತಿ ಹುಡುಕಿ