ಭೈರಪ್ಪಗೆ ಹಿಂದುತ್ವದ ರೋಗ ಯಾಕೆ ತಗುಲಿದೆ?: ಮರುಳಸಿದ್ದಪ್ಪ
ಬೆಂಗಳೂರು, ಸೋಮವಾರ, 18 ಜನವರಿ 2010( 11:43 IST )
ಕನ್ನಡ ಸಾಹಿತ್ಯ ರಂಗದಲ್ಲಿಯೇ ಅಪಾರ ಓದುಗ ವಲಯನ್ನು ಪಡೆದಿರುವ ಸಾಹಿತಿ ಎಸ್.ಎಲ್.ಭೈರಪ್ಪ ಹಾಗೂ ಸಂಶೋಧಕ ಎಂ.ಚಿದಾನಂದ ಮೂರ್ತಿಯವರಿಗೆ ಈ ಇಳಿವಯಸ್ಸಿನಲ್ಲಿ ಹಿಂದುತ್ವದ ರೋಗ ಯಾಕೆ ತಗುಲಿದೆಯೋ ತಿಳಿಯುತ್ತಿಲ್ಲ ಎಂದು ನಾಟಕಕಾರ ಡಾ.ಕೆ.ಮರುಳಸಿದ್ದಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.
ಖ್ಯಾತ ಸಂಶೋಧಕರಾಗಿರುವ ಚಿಮೂ ಅವರು 15ದಿನಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಕ್ರೈಸ್ತ ಹಾಗೂ ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಅವರು ಅದ್ಯಾಕೆ ಹಾಗೆ ಮಾಡುತ್ತಿದ್ದಾರೆಂಬುದೇ ತಿಳಿಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಅದೇ ರೀತಿ ಭೈರಪ್ಪ ಅವರೊಬ್ಬ ಉತ್ತಮ ಕೃತಿಗಳನ್ನು ರಚಿಸಿರುವ ಸಾಹಿತಿ, ಆದರೆ ಅವರು ಬೌದ್ಧಿಕರಾಗಿ ಬೆಳೆದಿಲ್ಲ. ಭೈರಪ್ಪ ಅವರ ವಿಚಾರವಾದ ಹಿಂಸೆ ಮತ್ತು ಕೋಮುದ್ವೇಷಕ್ಕೆ ಎಡೆಮಾಡಿಕೊಡುವಷ್ಟು ಅಪಾಯಕಾರಿಯಾಗಿದೆ ಎಂದು ಮರುಳಸಿದ್ದಪ್ಪ ಕಿಡಿಕಾರಿದರು.
ಭೈರಪ್ಪ ಅವರ ಸಿದ್ದಾಂತ, ತತ್ವ ಹಾಗೂ ಇತ್ತೀಚೆಗೆ ಅವರು ಪತ್ರಿಕೆಗಳಲ್ಲಿ ಬರೆಯುವ ಲೇಖನ ಕ್ರಿಶ್ಚಿಯನ್,ಮುಸ್ಲಿಮರ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ಬರೆಯುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಭೈರಪ್ಪ ತಮ್ಮನ್ನೇ ತಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.