ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬರಲಿದೆ ವರ್ಮಾರಿಂದ ಸ್ವಾಮಿ ನಿತ್ಯಾನಂದನ ಸಿನಿಮಾ 'ಗಾಡ್ ಅಂಡ್ ಸೆಕ್ಸ್'! (Swami Nithyananda | RGV | God And Sex | Ram Gopal Varma | Bollywood)
ಸುದ್ದಿ/ಗಾಸಿಪ್
Bookmark and Share Feedback Print
 
PR
ಬಾಲಿವುಡ್ಡಿನ ಹೆದರಿಸುವ ನಿರ್ದೇಶಕ ಅಂತಾನೇ ಹೆಸರು ಪಡೆದ ಹಿರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಹೊಸತೊಂದು ಪ್ರಾಜೆಕ್ಟಿಗೆ ಕೈ ಹಾಕಿದ್ದಾರೆ. ಅದು ಅಂತಿಂಥ ಪ್ರಾಜೆಕ್ಟ್ ಅಂತೂ ಖಂಡಿತಾ ಅಲ್ಲ. ಚಿತ್ರದ ಹೆಸರು ಗಾಡ್ ಅಂಡ್ ಸೆಕ್ಸ್!

ಹೌದು. ರಾಮ್ ಗೋಪಾಲ್ ವರ್ಮಾ ತಮಿಳು ನಟಿ ರಂಜಿತಾ ಜೊತೆ ಪಲ್ಲಂಗವೇರಿ ಜಗಜ್ಜಾಹೀರಾಗಿ ಈಗಷ್ಟೇ ಬಂಧಿತನಾಗಿರುವ ನಿತ್ಯಾನಂದ ಸ್ವಾಮಿಯ ಕುರಿತು ಸಿನಿಮಾ ನಿರ್ಮಿಸಲು ಹೊರಟಿದ್ದಾರೆ. ಹಿಂದಿ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರವನ್ನು ನಿರ್ಮಿಸುವ ಉದ್ದೇಶವನ್ನೂ ಹೊಂದಿದ್ದಾರೆ ವರ್ಮಾ.

ಆದರೆ ವರ್ಮಾ ಮಾತ್ರ ಇದು ಸಂಪೂರ್ಣವಾಗಿ ನಿತ್ಯಾನಂದ ಸ್ವಾಮಿಯ ಜೀವನಾಧಾರಿತ ಕಥೆಯಲ್ಲ. ಆಧರೆ ನಿತ್ಯಾನಂದನ ಕಥೆಯಿಂದ ಪ್ರೇರಿತವಾಗಿ ಅಂಥದ್ದೇ ವಿಚಾರಗಳಿರುವ ಆಶ್ರಮಗಳಲ್ಲೂ ನಡೆಯುವ ಕೆಲವು ರಹಸ್ಯ ವಿಚಾರಗಳ ಮೇಲೆ ಚಿತ್ರದಲ್ಲಿ ಬೆಳಕು ಚೆಲ್ಲಲಾಗುತ್ತದೆ ಎನ್ನುತ್ತಾರೆ.

IFM
ಆದರೂ, ಆಶ್ರಮದೊಳಗೆ ನಡೆಯುವ ರಹಸ್ಯ ವಿಚಾರಗಳನ್ನು ಸಿನಿಮಾದಲ್ಲಿ ತರೋದು ಕೊಂಚ ರಿಸ್ಕಲ್ಲವೇ ಎಂದು ವರ್ಮಾಗೆ ಮರುಪ್ರಶ್ನೆ ಹಾಕಿದರೆ ವರ್ಮಾ, ನಾನು ಪತ್ರಕರ್ತರಂತೆ ತುಂಬ ಬೋಲ್ಡ್ ಹಾಗೂ ಧೈರ್ಯವಂತ. ಪತ್ರಕರ್ತರು ಯಾವುದೇ ಭಯವಿಲ್ಲದೆ, ನಿತ್ಯಾನಂದನ ಕಾಮಕಾಂಡವನ್ನು ಜಗಜ್ಜಾಹೀರು ಮಾಡಿದಂತೆ, ನನಗೂ ಸಿನಿಮಾ ಮೂಲಕ ಸ್ಪಷ್ಟ ವಿಚಾರವನ್ನು ನೇರವಾಗಿ ಹೇಳಲು ಭಯವಿಲ್ಲ. ಹಾಗಾಗಿ ನಾನು ಗಾಡ್ ಎಂಡ್ ಸೆಕ್ಸ್ ಮಾಡಿಯೇ ತೀರುತ್ತೇನೆ. ಆದರೆ ಈ ಚಿತ್ರ ನಿತ್ಯಾನಂತದ ರಾಸಲೀಲೆಯಿಂದ ಪ್ರಭಾವಿತವಾದುದು ಎಂದು ಮಾತ್ರ ಹೇಳಬಲ್ಲೆ ಎಂದು ವರ್ಮಾ ಹೇಳಿದ್ದಾರೆ.

ಅಂದಹಾಗೆ ಇನ್ನೂ ಚಿತ್ರದ ತಾರಾಗಣದ ಬಗ್ಗೆ ತೀರ್ಮಾನವಾಗಿಲ್ಲ. ವರ್ಮಾ ತಲೆಯಲ್ಲಿ ಯಾರಿದ್ದಾರೆ ಅನ್ನೋ ಗುಟ್ಟು ಇನ್ನೂ ರಟ್ಟಾಗಿಲ್ಲ. ಆದರೂ, ಬಾಲಿವುಡ್ಡಿನ ಗಲ್ಲಿ ಗಲ್ಲಿಗಳಲ್ಲಿ ಮಾತ್ರ ರಂಜಿತಾಳನ್ನೇ ನಾಯಕಿ ಮಾಡಿ ಅಂತ ಪುಕ್ಕಟೆ ಸಲಹೆ ಕೊಡುತ್ತಿದ್ದಾರಂತೆ. ಇನ್ನೂ ಕೆಲವರು ನಿತ್ಯಾನಂದರನ್ನೇ ಯಾಕೆ ಒಂದು ಕೈ ನೋಡಬಾರದು ಅಂತಾನೂ ಹೇಳುತ್ತಿದ್ದಾರಂತೆ. ಅದಕ್ಕೇ, ವರ್ಮಾ ಮಾತ್ರ ಇವರ್ಯಾರ ಉಸಾಬರಿಯೂ ಬೇಡ ಅಂತ ನಟನಟಿಯರ ಹುಡುಕಾಟದಲ್ಲಿದ್ದಾರಂತೆ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಾಡ್ ಅಂಡ್ ಸೆಕ್ಸ್, ರಾಮ್ ಗೋಪಾಲ್ ವರ್ಮಾ, ಸ್ವಾಮಿ ನಿತ್ಯಾನಂದ, ಬಾಲಿವುಡ್