ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮತ್ತೆ ಒಂದಾದ ದೀಪಿಕಾ ರಣಬೀರ್ ಜೋಡಿ! (Deepika Padukone | Ranbir Kapoor | Housefull | Bollywood)
ಸುದ್ದಿ/ಗಾಸಿಪ್
Bookmark and Share Feedback Print
 
IFM
ಬಾಲಿವುಡ್ಡಿನ ಸದ್ಯದ ಹಾಟ್ ಹಾಗೂ ಬಹುಬೇಡಿಕೆಯ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಕ್ರಿಕೆಟ್‌ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಹುರ್ರೇ ಎಂದು ಕೂಗುತ್ತಾ ಮಲ್ಯ ಕುಟುಂಬದ ರಾಜಕುಮಾರ ಸಿದ್ಧಾರ್ಥ್ ಮಲ್ಯ ಜೊತೆ ಸುತ್ತಾಡಿದ್ದು ಸದ್ಯದ ಹೊಸ ಕಥೆ. ಅದಕ್ಕಿಂತಲೂ ಹೊಸ ಕಥೆಯೊಂದು ಇದೀಗ ಬಾಲಿವುಡ್ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ. ದೀಪಿಕಾಳ ಮಾಜಿ ಪ್ರಿಯಕರ ರಣಬೀರ್ ಕಪೂರ್ ಮತ್ತೆ ಈ ದೀಪಿಕಾಳನ್ನೇ ತನ್ನ ತೆಕ್ಕೆಗೆಳೆದಿದ್ದಾನೆ ಎಂಬ ಹೊಸ ಹಾಟ್ ಸುದ್ದಿಯ ಗಾಳಿ ನೇರವಾಗಿ ಮುಂಬೈನಿಂದ ಬೀಸಿದೆ.

ಅಂದೊಮ್ಮೆ ದೀಪಿಕಾ ಹಾಗೂ ರಣಬೀರ್ ವರುಷಗಳ ಕಾಲ ಜೋಡಿ ನಂ.1 ನಾವೇ ಎಂಬಂತೆ ಕಾಣಿಸಿಕೊಂಡಿದ್ದು ಜಗಜ್ಜಾಹೀರು. ಅದ್ಯಾಕೋ ಈ ಜೋಡಿ ತುಂಬ ಸಮಯ ಒಟ್ಟಿಗಿರಲು ಸಾಧ್ಯವಾಗಲೇ ಇಲ್ಲ. ಯಾವ ಹುಡುಗಿಯ ದೆಸೆಯಿಂದಲೋ ಗೊತ್ತಿಲ್ಲ, ದೀಪಿಕಾಗೆ ರಣಬೀರ್ ವರ್ತನೆಯಿಂದ ಬೇಸರವಾಯಿತೆಂದು ಆತನಿಗೆ ಗುಡ್ ಬೈ ಹೇಳಿದಳು. ರಣಬೀರ್ ಏನೂ ಆಗಿಲ್ಲವೆಂಬಂತೆ, ಕತ್ರಿನಾ ಎಂಬ ಸುಂದರಿ ಜೊತೆ ಡ್ಯುಯೆಟ್ ಹಾಡತೊಡಗಿದ. ಇತ್ತ ಕತ್ರಿನಾ ಸಲ್ಮಾನ್ ಖಾನ್ ನನ್ನ ಗಾಡ್ ಫಾದರ್ ಎಂದು ಹೊಗಳುತ್ತಲೇ ರಣಬೀರ್ ಜೊತೆ ಅಜಬ್ ಪ್ರೇಮ್ ಕೀ ಗಜಬ್ ಕಹಾನಿ ಶುರು ಮಾಡಿದಳು. ಇಷ್ಟೆಲ್ಲ ನಡೆಯುತ್ತಿದ್ದರೂ ಅತ್ತ ರಣಬೀರ್‌ಗೆ 'ವಿರಹಾ.. ನೂರು ನೂರು ತರಹಾ..' ಅಂಥ ಅನಿಸುತ್ತಿತ್ತಂತೆ ಎಂಬುದು ರಣಬೀರ್ ಕ್ಲೋಸ್ ಪಟಲಾಮಿನ ಮಂದಿ ಹೇಳುವ ಮಾತು.
IFM


ಇದೀಗ ಈ ಇಬ್ಬರು ಜೋಡಿ ಮ್ತತೆ ಒಂದಾಗಿದ್ದಾರೆ ಎಂಬ ಮಾತು ಚಾಲ್ತಿಯಲ್ಲಿದೆ. ದೀಪಿಕಾ ಖುಲ್ಲಂಖುಲ್ಲಾ ಆಗಿ ಇತ್ತೀಚೆಗೆ ಅಕ್ಷಯ್ ಕುಮಾರ್ ಜೊತಗೆ ಹೌಸ್‌ಫುಲ್ ಎಂಬ ಚಿತ್ರದಲ್ಲಿ ನಟಿಸಿದ್ದಳು. ಮೊನ್ನೆ ಶುಕ್ರವಾರವಷ್ಟೆ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಲು ದೀಪಿಕಾ ಹಾಗೂ ರಣಬೀರ್ ಸೊಂಟ ಬಳಸುತ್ತಾ ಮುಂಬೈನ ಸಿನಿಮಾ ಥಿಯೇಟರಿಗೆ ರಾತ್ರಿ 10.30ರ ಶೋಗೆ ಬಂದಿದ್ದರಂತೆ. ಇಬ್ಬರೂ ಸಾಕಷ್ಟು ನಗುನಗುತ್ತಾ ಹರಟುತ್ತಿದ್ದರಂತೆ. ಜೊತೆಗೇ ಅಕ್ಕಪಕ್ಕ ಕುಳಿತ ಈ ಜೋಡಿ ಸಿನಿಮಾದುದ್ದಕ್ಕೂ ಹರಟೆ ಹೊಡೆಯುತ್ತಿದ್ದರಂತೆ!

ಇದನ್ನು ನೋಡಿದವರಿಗೆ ಆಶ್ಚರ್ಯವೋ ಆಶ್ಚರ್ಯ. ಮೊನ್ನೆಯಷ್ಟೆ ಹಾವು ಮುಂಗುಸಿಯಂತೆ ಕಿತ್ತಾಡಿ ಬೇರೆಯಾಗಿದ್ದ ಇವರು ಇಷ್ಟು ಸಹಜವಾಗಿ ಪ್ರೇಮಿಗಳಂತೆ ಮಾತಾಡುತ್ತಿದ್ದಾರಲ್ಲಾ ಎಂದು ಮೂಗಿನ ಮೇಲೆ ಬೆರಳಿಟ್ಟರಂತೆ!

IFM
ಇದಕ್ಕೂ ಮೊದಲು ಮೂರು-ನಾಲ್ಕು ತಿಂಗಳ ಹಿಂದಷ್ಟೆ ರಣಬೀರ್‌ ಹೊರದೇಶದಲ್ಲಿ ಶೂಟಿಂಗ್‌ನಲ್ಲಿದ್ದಾಗಲೂ ರಾತ್ರಿಯಿಡೀ ದೀಪಿಕಾಗೆ ಎಸ್‌ಎಂಎಸ್ ಕಳುಹಿಸಿ ಮತ್ತೆ ಒಂದಾಗುವ ಆಸೆ ವ್ಯಕ್ತಪಡಿಸಿದ್ದ ಎಂದೂ ಹೇಳಲಾಗುತ್ತಿದೆ. ಆದರೆ ದೀಪಿಕಾ ಮಾತ್ರ ಈ ಒಂದಾಗುವಿಕೆಯತ್ತ ತಟಸ್ಥವಾಗಿದ್ದು, ರಣಬೀರ್ ತಾನಾಗಿಯೇ ಹುಡುಕಿಕೊಂಡು ಬರಲಿ ಎಂಬಂತೆ ಸುಮ್ಮನಿದ್ದಾರೆ ಎಂಬುದು ಬಲ್ಲ ಮೂಲಗಳ ಮಾತು. ಅಷ್ಟೇ ಅಲ್ಲ. ಇತ್ತೀಚೆಗೆ ತಿಂಗಳ ಹಿಂದೆ ಪಾರ್ಟಿಯೊಂದರಲ್ಲಿ ಭೇಟಿಯಾದ ಸಂದರ್ಭ ದೀಪಿಕಾ ಹಾಗೂ ರಣಬೀರ್ ಪರಸ್ಪರ ಚೆನ್ನಾಗೇ ಮಾತಾಡುತ್ತಿದ್ದರು ಎನ್ನಲಾಗಿದೆ. ಜೊತೆಗೆ, ರಣಬೀರ್ ಕೆಲವೇ ತಿಂಗಳ ಹಿಂದೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ಹಾಗೂ ದೀಪಿಕಾ ಮತ್ತೆ ಮೊದಲಿನಂತಾಗುತ್ತೇವೆ ಎಂಬ ನಂಬಿಕೆಯಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಆದರೆ ವಿಶೇಷವೆಂದರೆ, ದೀಪಿಕಾ ಮಾತ್ರ ಇವೆಲ್ಲವಕ್ಕೂ ಮಗುಮ್ಮಾಗಿ ಕುಳಿತಿದ್ದಾಳೆ. ಸಾರ್ವಜನಿಕವಾಗಿ ಯಾವ ಹೇಳಿಕೆಯನ್ನೂ ನೀಡಲು ಮುಂದೆ ಬಂದಿಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಹಿಂದೆ ಈ ಜೋಡಿಗಳ ಪೈಕಿ ರಣಬೀರ್ ಕಪೂರ್ ಸ್ವತಃ ತನಗೀಗ ಲವ್ ಗಿವ್ ಎಲ್ಲ ಬೇಡ, ನನಗೆ ಮೊದಲು ಕೆರಿಯರ್ ಬೇಕು. ಚೆನ್ನಾಗಿ ನಟಿಸಬೇಕು ಎಂಬಾಸೆಯಿಂದ ಲವ್‌ಗೆ ಗುಡ್ ಬೈ ಹೇಳಿದ್ದೇನೆ. ಲವ್‌ನಲ್ಲಿನ ಕಮಿಟ್‌ಮೆಂಟ್ ನನ್ನ ಕೆರಿಯರ್‌ಗೆ ತೊಂದರೆಯಾಗುತ್ತದೆ. ತೀರಾ ಪೊಸೆಸಿವ್‌ನೆಸ್ ನನಗೆ ಇಷ್ಟವಿಲ್ಲ ಎಂದಿದ್ದರು. ಅದಕ್ಕಾಗಿ ದೀಪಿಕಾ ಸಹವಾಸವನ್ನೇ ಬಿಟ್ಟಿದ್ದರು. ಆದರೆ ದೂರಾದ ಮೇಲೆ ಯಾಕೋ ರಣಬೀರ್‌ಗೆ ಮತ್ತೆ ದೀಪಿಕಾ ಸನಿಹ ಬೇಕೆನಿಸುತ್ತಿದೆಯಂತೆ. ಅದಕ್ಕಾಗಿಯೇ ಏನೋ, ತಾನಾಗಿಯೇ ಹೋದ ಗೆಳೆಯ ಮತ್ತೆ ತಾನಾಗಿಯೇ ನನ್ನ ಬಳಿ ಬರಲಿ ಎಂದು ದೀಪಿಕಾ ಮಾತ್ರ ಸೈಲೆಂಟಾಗಿಯೇ ಕೂತಿದ್ದಾಳೆ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಬಾಲಿವುಡ್, ಕತ್ರಿನಾ