ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಫಿಲಂಫೇರ್: 17 ಪ್ರಶಸ್ತಿಗಳನ್ನು ಕೊಳ್ಳೆಹೊಡೆದ ತ್ರಿ ಈಡಿಯಟ್ಸ್ (Filmfare Awards 2010 | Three Idiots | Love Aaj Kal | Kareena Kapoor | Vidya Balan | Amitabh Bachchan)
ಸುದ್ದಿ/ಗಾಸಿಪ್
Bookmark and Share Feedback Print
 
IFM
55ನೇ ಫಿಲಂಫೇರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಶ್ರೀಲಂಕಾದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು. 17 ಪ್ರಶಸ್ತಿಗಳನ್ನು ಗೆದ್ದುಕೊಂಡ ತ್ರಿ ಈಡಿಯಟ್ಸ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತು. ಅಮಿತಾಬ್ ಬಚ್ಚನ್ ಅತ್ಯುತ್ತಮ ನಟನಾದರೆ, ಅತ್ಯುತ್ತಮ ನಟಿಯಾಗಿ ವಿದ್ಯಾಬಾಲನ್ ಹಾಗೂ ಕರಿನಾ ಕಪೂರ್ ಪಡೆದುಕೊಂಡರು.

ಇದೇ ವೇಳೆ, ತಮಿಳರ ಮೇಲೆ ದೌರ್ಜನ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಜನೀಕಾಂತ್, ಕಮಲ ಹಾಸನ್ ನೇತೃತ್ವದ ತಮಿಳು ನಟರು ಶ್ರೀಲಂಕಾದಲ್ಲಿ ನಡೆಯುತ್ತಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಹಿಷ್ಕಾರ ಹಾಕಿದ ಹಿನ್ನೆಲೆಯಲ್ಲಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಸೇರಿದಂತೆ ಹಲವರು ಪಾಲ್ಗೊಳ್ಳಲಿಲ್ಲ. ಆದರೆ ಸಲ್ಮಾನ್ ಖಾನ್, ಕರೀನಾ ಕಪೂರ್, ಸೈಫ್ ಅಲಿ ಖಾನ್, ಬಿಪಾಶಾ ಬಸು ಸೇರಿದಂತೆ ಬಹುತೇಕರು ಸಮಾರಂಭದ್ಲಲಿ ಪಾಲ್ಗೊಂಡರು.

ಪ್ರಶಸ್ತಿಯ ವಿವರ ಹೀಗಿದೆ:

ಅತ್ಯುತ್ತಮ ಚಿತ್ರ- ತ್ರಿ ಈಡಿಯಟ್ಸ್
ಅತ್ಯುತ್ತಮ ನಟ- ಅಮಿತಾಬ್ ಬಚ್ಚನ್ (ಪಾ)
ಅತ್ಯುತ್ತಮ ನಟಿ- ಕರೀನಾ ಕಪೂರ್ (ತ್ರಿ ಈಡಿಯಟ್ಸ್) ಹಾಗೂ ವಿದ್ಯಾ ಬಾಲನ್ (ಪಾ)
ಅತ್ಯುತ್ತಮ ನಿರ್ದೇಶನ- ರಾಜ್ ಕುಮಾರ್ ಹಿರಾನಿ (ತ್ರಿ ಈಡಿಯಟ್ಸ್)
ಅತ್ಯುತ್ತಮ ಹಾಸ್ಯ ನಟ- ಸಂಜಯ್ ದತ್ (ಆಲ್ ದಿ ಬೆಸ್ಟ್)
ಅತ್ಯುತ್ತಮ ಖಳನಟ- ಬೋಮನ್ ಇರಾನಿ (ತ್ರಿ ಈಡಿಯಟ್ಸ್)
ಅತ್ಯುತ್ತಮ ಪೋಷಕ ನಟ- ಶರ್ಮಾನ್ ಜೋಷಿ (ತ್ರಿ ಈಡಿಯಟ್ಸ್)
ಅತ್ಯುತ್ತಮ ಪೋಷಕ ನಟಿ- ದಿವ್ಯಾ ದತ್ತ (ಡೆಲ್ಲಿ 6)
ಅತ್ಯುತ್ತಮ ಚೊಚ್ಚಲ ನಟ- ಓಮಿ ವೈದ್ಯ (ತ್ರಿ ಈಡಿಯಟ್ಸ್) ಹಾಗೂ ಜಾಕಿ ಬಾಗ್ನಾನಿ (ಕಲ್ ಕಿಸ್ನೇ ದೇಖಾ)
ಅತ್ಯುತ್ತಮ ಚೊಚ್ಚಲ ನಟಿ- ಜಾಕ್ವಿಲೀನ್ ಫೆರ್ನಾಂಡಿಸ್ (ಅಲಾದಿನ್) ಹಾಗೂ ಮಾಹಿ ಗಿಲ್ (ದೇವ್ ಡಿ)

IFM
ಅತ್ಯುತ್ತಮ ಹಿನ್ನೆಲೆ ಗಾಯಕಿ- ಕವಿತಾ ಸೇಥ್ (ವೇಕ್ ಅಪ್ ಸಿದ್)
ಅತ್ಯುತ್ತಮ ಹಿನ್ನೆಲೆ ಗಾಯಕ- ಶಾನ್ (ತ್ರಿ ಈಡಿಯಟ್ಸ್)
ಅತ್ಯುತ್ತಮ ಸಂಗೀತ ನಿರ್ದೇಶಕ- ಪ್ರೀತಂ (ಲವ್ ಆಜ್ ಕಲ್)
ಅತ್ಯುತ್ತಮ ಗೀತ ಸಾಹಿತ್ಯ- ಸ್ವಾನಂದ್ ಕ್ರಿಕ್ರಿರೆ (ತ್ರಿ ಈಡಿಯಟ್ಸ್)
ಅತ್ಯುತ್ತಮ ಕಥೆ- ತ್ರಿ ಈಡಿಯಟ್ಸ್ (ಅಭಿಜಿತ್ ಜೋಶಿ, ರಾಜ್ ಕುಮಾರ್ ಹಿರಾನಿ, ವಿಧು ವಿನೋದ್ ಛೋಪ್ರಾ)
ಮಾನವೀಯತೆಯ ರಾಯಭಾರಿತ್ವ- ಸಲ್ಮಾನ್ ಖಾನ್
ಹಿಂದಿ ಚಿತ್ರರಂಗಕ್ಕೆ ಅಸಾಧಾರಣ ಕೊಡುಗೆ (ಪುರುಷ ವಿಭಾಗ)- ಓಂ ಪ್ರಕಾಶ್
ಹಿಂದಿ ಚಿತ್ರರಂಗಕ್ಕೆ ಅಸಾಧಾರಣ ಕೊಡುಗೆ (ಮಹಿಳಾ ವಿಭಾಗ)- ಝೀನತ್ ಅಮನ್
ಅಂತಾರಾಷ್ಟ್ರೀಯ ವಲಯದಲ್ಲಿ ಅಸಾಧಾರಣ ಸಾಧಕ- ಅನಿಲ್ ಕಪೂರ್ (ಸ್ಲಂ ಡಾಗ್ ಮಿಲಿಯನೇರ್)
ಗ್ರೀನ್ ಗ್ಲೋಬಲ್ ಪ್ರಶಸ್ತಿ- ವಿವೇಕ್ ಒಬೆರಾಯ್

ತಾಂತ್ರಿಕ ವಿಭಾಗ:

ಅತ್ಯುತ್ತಮ ಚಿತ್ರಕಥೆ- ಅಭಿಜಿತ್ ಜೋಶಿ, ರಾಜ್ ಕುಮಾರ್ ಹಿರಾನಿ, ವಿಧು ವಿನೋದ್ ಛೋಪ್ರಾ (ತ್ರಿ ಈಡಿಯಟ್ಸ್)
ಅತ್ಯುತ್ತಮ ಛಾಯಾಗ್ರಹಣ- ಸಿ.ಕೆ.ಮುರಳೀಧರನ್ (ತ್ರಿ ಈಡಿಯಟ್ಸ್)
ಅತ್ಯುತ್ತಮ ಸಂಭಾಷಣೆ- ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ (ತ್ರಿ ಈಡಿಯಟ್ಸ್)
ಅತ್ಯುತ್ತಮ ಹಿನ್ನೆಲೆ ಸಂಗೀತ- ಸಂಜಯ್ ವಾಡೇಕರ್, ಅತುಲ್ ರಾನಿಂಗಾ, ಶಂತನು ಮೊಯಿತ್ರಾ (ತ್ರಿ ಈಡಿಯಟ್ಸ್)
ಅತ್ಯುತ್ತಮ ಸಂಕಲನ- ರಾಜ್ ಕುಮಾರ್ ಹಿರಾನಿ (ತ್ರಿ ಈಡಿಯಟ್ಸ್)
ಅತ್ಯುತ್ತಮ ಸೌಂಡ್ ರೆಕಾರ್ಡಿಂಗ್- ವಿಶ್ವದೀಪ್ ಚಟರ್ಜಿ, ನಿಹಾಲ್ ರಂಜನ್ ಸಮೇಲ್ (ತ್ರಿ ಈಡಿಯಟ್ಸ್)
ಅತ್ಯುತ್ತಮ ಸಾಂಗ್ ರೆಕಾರ್ಡಿಂಗ್- ವಿಶ್ವದೀಪ್ ಚಟರ್ಜಿ, ಸಚಿ ಕೆ.ಸಾಂಘ್ವಿ (ತ್ರಿ ಈಡಿಯಟ್ಸ್)
ಅತ್ಯುತ್ತಮ ರಿ-ರೆಕಾರ್ಡಿಂಗ್- ಅನೂಪ್ ದೇವ್ (ತ್ರಿ ಈಡಿಯಟ್ಸ್)
ಅತ್ಯುತ್ತಮ ನೃತ್ಯ ನಿರ್ದೇಶನ- ಬಾಸ್ಕೋ ಮಾರ್ಟಿಸ್, ಕೇಸರ್ ಗೊಂನ್ಸಾಲ್ವಿಸ್ (ಲವ್ ಆಜ್ ಕಲ್)
ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನಿಂಗ್- ಅನಾಹಿತಾ ಶಾರೋಫ್ ಅದಾಜಾನಿಯಾ, ಡಾಲಿ ಅಹ್ಲುವಾಲಿಯಾ (ಲವ್ ಆಜ್ ಕಲ್)
ಅತ್ಯುತ್ತಮ ಕಲಾ ನಿರ್ದೇಶನ- ಜಾಬು ಸಿರಿಲ್ (ಅಲಾದಿನ್)
ಅತ್ಯುತ್ತಮ ಸ್ಪೆಷಲ್ ವಿಷುವಲ್ ಎಫೆಕ್ಟ್- ಐಕ್ಯೂಬ್ ಲ್ಯಾಬ್ಸ್‌ನ ಚಾರ್ಲ್ಸ್ ಡಾರ್ಬೆ (ಅಲಾದಿನ್)
ಅತ್ಯುತ್ತಮ ಸಾಹಸ- ಶ್ಯಾಮ್ ಕೌಶಲ್ (ಕಮೀನೇ)
ಅತ್ಯುತ್ತಮ ಮೇಕಪ್ ಆರ್ಟಿಸ್ಟ್- ಕ್ರಿಸ್ಟಿನ್ ಟಿನ್‌ಸ್ಲೇ, ಡೋಮಿನಿ ಟಿಲ್ (ಪಾ)
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫಿಲಂಫೇರ್, ತ್ರಿ ಈಡಿಯಟ್ಸ್, ಪಾ, ಲವ್ ಆಜ್ ಕಲ್, ಕರೀನಾ, ವಿದ್ಯಾ ಬಾಲನ್, ಅಮಿತಾಬ್ ಬಚ್ಚನ್