ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಪ್ತರಕ್ಷಕ ಚಿತ್ರದಲ್ಲಿ ಮಾಜಿ ಸುಂದರಿ (Aptharakshaka | Sandhya | Vimala Raman | Vishnuvardhan)
ಸುದ್ದಿ/ಗಾಸಿಪ್
Feedback Print Bookmark and Share
 
ಭರತನಾಟ್ಯ ಕಲಾವಿದೆ ಮತ್ತು ಮಾಜಿ ಸುಂದರಿ ವಿಮಲ ರಾಮನ್. ಈಕೆ 2004 ನಡೆದ ಮಿಸ್ ಇಂಡಿಯಾ ಆಸ್ಟ್ತ್ರೇಲಿಯಾ ಸ್ಪರ್ಧೆಯಲ್ಲಿ ಅತ್ಯಂತ ಸುಂದರಿ ಎಂಬ ಕೀರೀಟವನ್ನು ಮುಡಿಗೇರಿಸಿಕೊಂಡಿದ್ದರು. ಇವರ ಇತ್ತೀಚಿನ ಹೊಸ ಸುದ್ದಿ ಏನೆಂದರೆ ವಿಷ್ಣುವರ್ಧನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಆಪ್ತರಕ್ಷಕ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪಿ. ವಾಸು ನಿರ್ದೇಶನದ ಈ ಚಿತ್ರಕ್ಕೆ ಕೃಷ್ಣಕುಮಾರ್ ನಿರ್ಮಾಪಕರು. ಹಾಗೆ ಚಿತ್ರದಲ್ಲಿ ಸಂಧ್ಯಾ, ಭಾವನ ಮತ್ತು ಲಕ್ಷ್ಮಿ ಗೋಪಾಲಸ್ವಾಮಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ದಕ್ಷಿಣ ಭಾರತದಲ್ಲೇ ವಿಮಲಾ ರಾಮನ್ ಬಹು ಬೇಡಿಕೆ ನಟಿಯಾಗಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ಕೆಲ ದಿನಗಳಲ್ಲೇ ಈಕೆ ಬಾರಿ ಯಶಸ್ಸು ಕಂಡಿದ್ದಾರೆ. ವಿಮಲಾ ಮಲಯಾಳಂ, ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇವರ ಅಭಿನಯದ ಮೊದಲು ತೆಲಗು ಚಿತ್ರ ಇವರೇನ ಇಪುಡೇನ ಚಿತ್ರ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ತಮಿಳು ಚಿತ್ರದ ಮೂಲಕ ಫಿಲಂ ಫೀಲ್ಡ್ಗೆ ಕಾಲಿಟ್ಟ ಈಕೆ ಮೊದಲು ನಟಿಸಿದ್ದು ಬಾಲಚಂದ್ರ ನಿರ್ದೇಶನದ ಪೊಯ್ ಚಿತ್ರದಲ್ಲಿ. ಇದೀಗ ವಿಮಲಾ ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದು ಆಪ್ತರಕ್ಷಕ ಚಿತ್ರದ ಕೊನೆ ಹಂತದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ತಮಿಳು, ಮಲಯಾಳಂ ಮತ್ತು ತೆಲುಗಿನಲ್ಲಿ ಪ್ರೇಕ್ಷಕರ ಮನ ಕದಡಿದ ಈ ಸುಂದರಿಯನ್ನು ಕನ್ನಡ ಪ್ರೇಕ್ಷಕ ಒಪ್ಪಿಕೊಳ್ಳುತ್ತಾನಾ ಅನ್ನೋದನ್ನು ಚಿತ್ರ ಬಿಡುಗಡೆಯಾಗೋವರೆಗೂ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಪ್ತರಕ್ಷಕ, ವಿಮಲ ರಾಮನ್, ವಿಷ್ಣುವರ್ಧನ್, ಸಂಧ್ಯಾ