ಸುದೀಪ್ ನಿರ್ದೇಶನದ ವೀರ ಮದಕರಿ ಚಿತ್ರ ರಾಜ್ಯಾದ್ಯಂತ ಎಂಟು ಭಾಗಗಳಲ್ಲಿ ಯಶಸ್ವಿ ನೂರು ದಿನ ಪೂರೈಸಿ ಇನ್ನೂ ಹಲವು ಉತ್ತರ ಕರ್ನಾಟಕ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಇನ್ನೂ ಭರ್ಜರಿ ಪ್ರದರ್ಶನ ನಡೆಯುತ್ತಿದೆ. ಚಿತ್ರ ಬಿಡುಗಡೆ ಸಂದರ್ಭ ಸುದೀಪ್ ಅಭಿಮಾನಿಗಳು ಕುರಿಗಳನ್ನು ಬಲಿಕೊಡಲಾಗಿತ್ತು.
ಸುದೀಪ್ ಸದ್ಯ ಸಕಲೇಶಪುರದಲ್ಲಿ ನಡೆಯುತ್ತಿರುವ ಮಾತು ಮಾತಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ರಮ್ಯಾ ನಾಯಕಿ ಸುದೀಪ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಸೈಕೋ ಚಿತ್ರದ ಸಂಗೀತ ನಿರ್ದೇಶಕನದ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಗುರುದತ್ ನಿರ್ದೇಶನ, ಸುದೀಪ್ ರಮ್ಯಾ ಜೋಡಿಯಾಗಿ ಅಭಿನಯಿಸುತ್ತಿರುವ ಕಿಚ್ಚ ಹುಚ್ಚದ ಚಿತ್ರಿಕರಣ ಕೂಡ ಭರದಿಂದ ಸಾಗುತ್ತಿದೆ. ಹಾಗೆ ರಮೇಶ್ ಯಾದವ್, ಸುದೀಪ್ ನಡುವೆ ಇದ್ದ ಭಿನ್ನಾಭಿಪ್ರಾಯಕ್ಕೂ ತೆರೆ ಬಿದ್ದು ಸುದೀಪ್ ಸದ್ಯ ನಿರಾಳವಾಗಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.