ಕಿಟ್ಟಿ ಮುಖದಲ್ಲಿ ಮಂದಹಾಸ
![](/img/cm/searchGlass_small.png)
ಸವಾರಿಯ ಅಭೂಪೂರ್ವ ಯಶಸ್ಸು ಹಾಗೂ ಒಲವೇ ಜೀವನ ಲೆಕ್ಕಾಚಾರದ ಸಾಧಾರಣ ಯಶಸ್ಸಿನ ತರುವಾಯ ಕನ್ನಡದ ಸ್ಪುರದ್ರೂಪಿ ನಟ ಶ್ರೀನಗರ ಕಿಟ್ಟಿಗೆ ಅವಕಾಶಗಳ ಸಂತೆಯೇ ಹರಿದು ಬರುತ್ತಿದೆಯಂತೆ.ನಿರ್ದೇಶಕ ಎಸ್.ಎ ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ಬಿಡುಗಡೆ ಉತ್ತಮ ಪ್ರದರ್ಶನ ಕಾಣುತ್ತಿರುವ 'ಮಳೆ ಬರಲಿ ಮಂಜೂ ಇರಲಿ' ಚಿತ್ರ ಕೂಡಾಚಿತ್ರೋದ್ಯಮದಲ್ಲಿ ಉತ್ತಮ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿರುವುದು ಕಿಟ್ಟಿಯ ಆತ್ಮವಿಶ್ವಾಸಕ್ಕೆ ಇನ್ನಷ್ಟು ಗರಿ ಮೂಡಿದೆ. '
ಇಂತಿ ನಿನ್ನ ಪ್ರೀತಿಯ...' ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆಯಿಟ್ಟುಕೊಂಡಿದ್ದೆ. ಆದ್ರೆ ಆ ಚಿತ್ರ ಅಂಥಾ ಯಶಸ್ಸನ್ನು ಕಾಣದೇ ಹೋದದ್ದು ಈಗಲೂ ತುಂಬ ಬೇಸರವೆನಿಸುತ್ತದೆ. ಉತ್ತಮ ಚಿತ್ರಗಳನ್ನು ಪ್ರೇಕ್ಷಕ ಸ್ವೀಕರಿಸದೆ ಹೋದಾಗ ಆಗುವಂಥ ನೋವು ಅಪಾರ. ಈಗಲೂ ಚಿತ್ರದ ಸೋಲಿಗೆ ಕಾರಣ ಹುಡುಕಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಕಿಟ್ಟಿ.ಆಯ್ಕೆ ವಿಷಯದಲ್ಲಿ ದುಡುಕುವ ಸ್ವಭಾವ ನನ್ನಲ್ಲಿಲ್ಲ. ಆದ್ರೆ ಪ್ರೇಕ್ಷಕನ ಮನೋಸ್ಥಿತಿ ಅರ್ಥೈಸಿಕೊಳ್ಳುವುದೇ ಕಷ್ಟ ಎನ್ನುವ ಕಿಟ್ಟಿ, ಸದ್ಯ ಕೈಲಿರುವ ಚಿತ್ರಗಳಲ್ಲಿ ನಟಿಸತ್ತೇನೆ. ಈ ಪ್ರಾಜೆಕ್ಟ್ ಮುಗಿಯುವವರೆಗೂ ಬೇರೆ ಚಿತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ.