ಮಾಧ್ಯಮಗಳಿಂದ ಕಟು ವಿಮರ್ಶೆ ಬಂದ ಹೊರತಾಗಿಯೂ ರಾಜ್ ಚಿತ್ರ ಸೃಷ್ಟಿಸಿದ್ದ ಅಲೆಯಲ್ಲೇ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆಯೇ ಮೂಡಿಬಂದಿದೆ. ರಾಜ್ ಹೆಸರಿಗೇ ಅಂತಹ ಮೋಡಿಯಿದೆ ಎಂದು ಹಲವರು ಈ ಹಿಂದೆಯೇ ಭವಿಷ್ಯ ನುಡಿದಿದ್ದೂ ಕೂಡಾ ಸುಳ್ಳಾಗಿಲ್ಲ. ಇಂತಿಪ್ಪ ರಾಜ್ ಚಿತ್ರಕ್ಕೆ ಆ ಹೆಸರನ್ನು ಇಟ್ಟಿದ್ದಾದರೂ ಯಾರು ಅಂತೀರಾ. ಅದು ಇನ್ಯಾರೋ ಅಲ್ಲ. ಸ್ವತಃ ಪುನೀತ್ ರಾಜ್ ಕುಮಾರ್ ಅಣ್ಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್!
ಹೌದು. ಇದು ನಿಜ. ಪುನೀತ್ ಹೇಳುವಂತೆ, ರಾಜ್ -ದಿ ಶೋಮ್ಯಾನ್ ಎಂದು ಹೆಸರಿಟ್ಟಿದ್ದು ನನ್ನಣ್ಣ ಶಿವಣ್ಣ. ಪ್ರೇಮ್ ನನ್ನಣ್ಣ ಶಿವರಾಜ್ ಕುಮಾರ್ ಅವರಿಗೆ ಚಿತ್ರದ ಕಥೆಯನ್ನು ವಿವರಿಸಿದಾಗ ರಾಜ್ ಎಂದು ಹೆಸರಿಡಲು ಶಿವಣ್ಣ ಸೂಚಿಸಿದರು. ಈ ಹೆಸರನ್ನು ಪ್ರತಿಯೊಬ್ಬರೂ ಇಷ್ಟಪಟ್ಟಿದ್ದಾರೆ. ಅಲ್ಲದೆ ಶಿವಣ್ಣ ಈ ಹಿಂದೆ ನನ್ನ ಹಲವು ಚಿತ್ರಗಳಿಗೆ ಹೆಸರು ಸೂಚಿದ್ದಾರೆ. ಅಪ್ಪು, ಅಕಾಶ್, ಅರಸು.. ಎಲ್ಲವೂ ಶಿವಣ್ಣ ಇಟ್ಟ ಹೆಸರುಗಳು. ಶಿವಣ್ಣ ಹೆಸರಿಟ್ಟ ಚಿತ್ರಗಳು ನನ್ನ ಚಿತ್ರದ ಯಶಸ್ಸಿನಲ್ಲಿ ಪಾಲು ಪಡೆಯತ್ತದೆ ಎನ್ನುತ್ತಾರೆ.
PR
ರಾಜ್- ದಿ ಶೋಮ್ಯಾನ್ ಚಿತ್ರದ ಕಥೆಯೇ ಚೆನ್ನಾಗಿಲ್ಲ, ಪ್ರೇಮ್ ಒಬ್ಬ ಗಿಮಿಕ್ ನಿರ್ದೇಶಕ ಎಂದೆಲ್ಲ ಜರಿದರೂ, ಪುನೀತ್ ಮಾತ್ರ ಪ್ರೇಮ್ ಒಬ್ಬ ಅತ್ಯುತ್ತಮ ಸ್ಪರ್ಧಾತ್ಮತೆ ರೂಢಿಸಿಕೊಂಡಿರುವ ನಿರ್ದೇಶಕ. ಅವರೊಬ್ಬ ಪರ್ಫೆಕ್ಷನಿಸ್ಟ್. ರಾಜ್ ಚಿತ್ರ ಈಗ ಬಿಡುಗಡೆಯಾಗಲು ತಂತ್ರಜ್ಞರು ಹಗಲಿರುರುಳು ದುಡಿದಿದ್ದಾರೆ ಎನ್ನುತ್ತಾರೆ.
ರಾಜ್ ವಿಷಯ ಹಾಗಿರಲಿ. ಪುನೀತ್ ನಟಿಸಿದ ಹೆಚ್ಚಿನ ಎಲ್ಲವೂ ಹಿಟ್ ಚಿತ್ರಗಳಾದರೂ ಕಡಿಮೆ ಚಿತ್ರಗಳಲ್ಲಿ ನಟಿಸುವುದು ಯಾಕೆ ಎಂದರೆ ಪುನೀತ್, ನಾನು ಯಾವತ್ತೂ ನನ್ನ ಆಟಿಟ್ಯೂಡ್‌ಗೆ ಸರಿಹೊಂದುವ ಪಾತ್ರಗಳಲ್ಲಿ ಮಾತ್ರ ನಟಿಸುತ್ತೇನೆ. ನಾನು ನನ್ನ ಇತರ ಸಹೋದರರಂತೆ ಎನರ್ಜೆಟಿಕ್ ಅಲ್ಲ. ಅವರು ನಿರ್ವಹಿಸಿದಂಥ ಪಾತ್ರಗಳಲ್ಲಿ ನಾನು ನಿರ್ವಹಿಸಲು ಹೊರಟರೆ ಆಗೋದಿಲ್ಲ. ಕಥೆಗಳ ಆಯ್ಕೆಗೂ ನಾನು ನನ್ನ ಅಣ್ಣ ರಾಘುವಿನ ಸಹಾಯ ಪಡೆಯುತ್ತೇನೆ. ಶಿವಣ್ಣ ಡೈನಮೋ ಇದ್ದ ಹಾಗೆ. ಆದರೆ ನಾನು ಚಿತ್ರಗಳು ತಾಂತ್ರಿಕತೆಯಲ್ಲಿ ಸದ್ದುಮಾಡುವ, ಕೌಟುಂಬಿಕ ಮನರಂಜನೆಯನ್ನು ನೀಡುವ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡುತ್ತೇನೆ. ಹಾಗಾಗಿ ನಾನು ನನಗೊಪ್ಪುವ ಪಾತ್ರಗಳ ಆಯ್ಕೆ ಮಾಡಬೇಕಾದ ಕಾರಣ ಚ್ಯೂಸಿಯಾಗುತ್ತೇನೆ ಎನ್ನುತ್ತಾರೆ.
ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ ವಲಯದಲ್ಲೂ ಮೆಚ್ಚುಗೆ ಗಳಿಸಬೇಕೆಂದರೆ, ಅವು ಅದ್ದೂರಿಯಾಗಿರುವಷ್ಟೇ ತಾಂತ್ರಿಕ ಗುಣಮಟ್ಟದಿಂದ ಕೂಡಿರಬೇಕು. ಜತೆಗೆ ಅದ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಕೆಟ್ ಮಾಡುವ ಚತತುರತೆಯೂ ನಮಗೆ ಬೇಕು. ನಾನು ನನ್ನ ಆಕಾಶ್ ಚಿತ್ರವನ್ನು ಆಷ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ಗಳಲ್ಲಿ ಬಿಡುಗಡೆ ಮಾಡಲು ಸಾಕಷ್ಟು ಶ್ರಮಪಟ್ಟಿದ್ದೆ. ಈಗ ಕನ್ನಡ ಚಿತ್ರರಂಗದಲ್ಲಿ ಆ ಟ್ರೆಂಡ್ ಮುಂದುವರಿದಿದೆ. ನನ್ನ ಚಿತ್ರಗಳೂ ಸೇರಿದಂತೆ ಹಲವು ಕನ್ನಡ ಚಿತ್ರಗಳೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೊಂಡಿದೆ ಎನ್ನುತ್ತಾರೆ ಪುನೀತ್.