ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರಿಯಮಣಿಗೆ ಕನ್ನಡದಲ್ಲಿ ತಾನೇ ಡಬ್ಬಿಂಗ್ ಮಾಡುವಾಸೆ! (Priyamani | Puneeth | Raam | Kannada Film)
ಸುದ್ದಿ/ಗಾಸಿಪ್
Feedback Print Bookmark and Share
 
Priyamani
WD
ಹುಟ್ಟಿದ್ದು ಕೇರಳದಲ್ಲಾದರೂ ಬೆಳೆದಿದ್ದು ಬೆಂಗಳೂರಿನಲ್ಲಾದ್ದರಿಂದ ಪ್ರಿಯಮಣಿಗೆ ಚೆನ್ನಾಗಿ ಕನ್ನಡ ಮಾತನಾಡಲು ಬರುತ್ತದಂತೆ. ಕನ್ನಡವೇಕೆ? ತಮಿಳು, ಹಿಂದಿ, ಇಂಗ್ಲೀಷ್, ತೆಲುಗು, ಮಳಯಾಳಂಗಳಲ್ಲೂ ಅಷ್ಟೇ ಸುಲಲಿತವಾಗಿ ಮಾತನಾಡಬಲ್ಲ ನಟಿ ಪ್ರಿಯಮಣಿ. ಬೆಂಗಳೂರಿನಲ್ಲಿ ಬೆಳೆದರೂ ಅವಕಾಶ ಒಲಿದಿದ್ದು ತಮಿಳು, ತೆಲುಗು, ಮಳಯಾಳಂಗಳಲ್ಲಿ. ಆದರt, ಇದೀಗ ಈ ಪ್ರಿಯಮಣಿ ಕನ್ನಡಕ್ಕೆ ರಾಮ್ ಚಿತ್ರದ ಮೂಲಕ ಮತ್ತೆ ಬೆಂಗಳೂರಿಗೆ ಬಂದಿದ್ದಾಳೆ. ಕನ್ನಡ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಪ್ರಿಯಮಣಿಗೆ ಮೊದಲೇ ಇತ್ತಂತೆ. ಆದರೂ ಈಗ ಪುನೀತ್ ರಾಜ್‌ಕುಮಾರ್ ಜತೆಗೆ ನಾಯಕಿಯಾಗಲು ಅವಕಾಶ ಸಿಕ್ಕ ಮೇಲೂ ಈಕೆಯ ಮನದಲ್ಲಿ ಪುಟ್ಟ ಬೇಸರ. ಕಾರಣ ಯಾಕಂತೀರಾ?

ಕಾರಣ ಇಷ್ಟೇ. ತನ್ನ ಚಿತ್ರದ ತನ್ನ ಪಾತ್ರಕ್ಕೆ ಧ್ವನಿಯನ್ನೂ (ಅರ್ಥಾತ್ ಡಬ್ಬಿಂಗ್) ತಾನೇ ನೀಡಬೇಕೆಂಬುದು ಈಕೆಯ ಆಸೆ. ಆದರೆ, ಅದು ರಾಮ್ ಚಿತ್ರದಲ್ಲಿ ಸಾಧ್ಯವಾಗುತ್ತಿಲ್ಲ ಎಂಬುದು ಈಕೆಗೆ ಬೇಸರ ತರಿಸಿದೆಯಂತೆ. ಪ್ರಿಯಮಣಿ ಹೇಳುವಂತೆ, ನನಗೆ ಕನ್ನಡ ತುಂಬ ಚೆನ್ನಾಗಿ ಮಾತನಾಡಲು ಗೊತ್ತು. ಯಾಕೆಂದರೆ ಸಣ್ಣದಿರುವಾಗಿಂದಲೂ ನಾನು ಓದಿದ್ದು ಬೆಂಗಳೂರಿನಲ್ಲೇ. ಈಗಲೂ ನಾನಿರುವುದು ಬನಶಂಕರಿ. ಅದು ಕನ್ನಡ ಮಾತನಾಡುವವರೇ ವಾಸಿಸುವ ಪ್ರದೇಶ. ರಾಮ್ ಚಿತ್ರದ ಶೂಟಿಂಗ್‌ನಲ್ಲೂ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಆದರೂ ನನಗೆ ಡಬ್ಬಿಂಗ್ ಅವಕಾಶ ಸಿಕ್ಕಿಲ್ಲ. ನಾನು ನಿರ್ದೇಶಕರಲ್ಲಿ ನಾನೇ ಡಬ್ಬಿಂಗ್ ಮಾಡುತ್ತೇನೆಂದರೂ ಅವರು ಬೇಡವೆಂದರು. ನ್ನನ ಪಾತ್ರಕ್ಕೆ ನನ್ನ ಸ್ವರ ಸೂಟ್ ಆಗುವುದಿಲ್ಲ ಎಂಬುದು ಅವರ ವಾದ. ಹೀಗಾಗಿ ನಾನು ಕೊನೆಗೆ ಒಪ್ಪಿಕೊಂಡೆ ಎನ್ನುತ್ತಾರೆ ಪ್ರಿಯಮಣಿ.

Priyamani
WD
ಪ್ರಿಯಮಣಿ ಇನ್ನು ಮುಂದೆ ತನ್ನೆಲ್ಲ ಚಿತ್ರಗಳಿಗೂ ತಾನೇ ಡಬ್ಬಿಂಗ್ ಮಾಡಲು ನಿರ್ಧರಿಸಿದ್ದಾರಂತೆ. ನಾನು ಪ್ರತಿಸಲವೂ ನನ್ನ ಸಿನಿಮಾಗಳಿಗೆ ನಾನೇ ಡಬ್ಬಿಂಗ್ ಮಾಡಬೇಕೆಂದು ಬಯಸುತ್ತೇನೆ. ಆದರೆ ನನ್ನ ಸ್ವರವನ್ನು ಬಳಸಿಕೊಳ್ಳುವುದು ನಿರ್ದೇಶಕರಿಗೆ ಬಿಟ್ಟಿದ್ದು. ಆದರೆ ತೆಲುಗಿನಲ್ಲೂ ನಾನು ಈವರೆಗೆ ನನ್ನ ಚಿತ್ರಗಳಿಗೆ ಡಬ್ಬಿಂಗ್ ಮಾಡಿಲ್ಲ. ಪ್ರತಿ ಬಾರಿಯೂ ನನ್ನ ಸಿನಿಮಾದ ನನ್ನ ಪಾತ್ರಗಳಿಗೆ ನನ್ನ ಸ್ವರ ಸೂಟ್ ಆಗೋದಿಲ್ಲವೆಂದು ನಿರ್ದೇಶಕರು ಹೇಳುತ್ತಾರೆ. ನನ್ನದು ಸ್ವಲ್ಪ ಗಡಸು ಸ್ವರವೆಂದು ಪ್ರತಿ ಬಾರಿಯೂ ನಿರ್ದೇಶಕರು ಡಬ್ಬಿಂಗ್ ಬೇಡವೆಂದು ಹೇಳುತ್ತಾರೆ. ಆದರೆ, ಹಿಂದಿ ಸಿನಿಮಾಗಳಲ್ಲಿ ಇಂತಹ ಸ್ವರವಿದ್ದರೂ ಡಬ್ಬಿಂಗ್ ಸ್ವತಃ ಮಾಡಲು ಅವಕಾಶ ನೀಡುತ್ತಾರೆ. ರಾಣಿ ಮುಖರ್ಜಿಗೂ ನನ್ನಂತಹುದೇ ಸ್ವರವಿದ್ದರೂ, ಆಕೆಯೇ ಆಕೆಯ ಪಾತ್ರಗಳಿಗೆ ಡಬ್ಬಿಂಗ್ ಮಾಡುತ್ತಾರೆ. ಹಾಗಾಗಿ ನನ್ನ ಸ್ವರ ಬಳಸಿಕೊಳ್ಳಬಹುದೆಂದು ನನಗನಿಸುತ್ತದೆ. ಆದರೆ, ಬಳಸುವುದು ನಿರ್ದೇಶಕರಿಗೆ ಬಿಟ್ಟಿದ್ದು. ನಾನವರಿಗೆ ಒತ್ತಡ ಹೇರೋದಿಲ್ಲ ಎನ್ನುತ್ತಾರೆ ಪ್ರಿಯಮಣಿ.

ರಾಮ್ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಎರಡು ಹಾಡುಗಳ ಚಿತ್ರೀಕರಣ ವಿದೇಶದಲ್ಲಿ ನಡೆಯುತ್ತಿದೆ. ಅದು ಬಿಟ್ಟರೆ ಡಬ್ಬಿಂಗ್ ಕಾರ್ಯ ಕೂಡಾ ಮುಗಿದಿದೆ. ರಾಮ್ ಚಿತ್ರದ ನಿರ್ಮಾಪಕ ಆದಿತ್ಯ ಬಾಬು ಹೇಳುವಂತೆ, ಪ್ರಿಯಮಣಿ ತುಂಬ ಚೆನ್ನಾಗಿ ಕನ್ನಡ ಮಾತಾಡುತ್ತಾರೆ. ಆದರೆ, ನಿರ್ದೇಶಕ ಮಾದೇಶ್ ಅವರ ಪ್ರಕಾರ ಆಕೆಯ ಸ್ವರ ಪಾತ್ರ್ಕಕೆ ಹೊಂದಿಕೆಯಾಗೋದಿಲ್ಲ. ಪ್ರಿಯಮಣಿಗೆ ಈ ಚಿತ್ರದಲ್ಲಿ ತುಂಬ ಶ್ರೀಮಂತ ಮನೆತನದ ತುಂಟ ಹುಡುಗಿಯ ಪಾತ್ರ. ಸಾಮಾನ್ಯ ಮನೆತನದ ತಮಾಷೆಯ ಹುಡುಗನನ್ನು ಶ್ರೀಮಂತ ಹುಡುಗಿ ಪ್ರೀತಿಸುವ ಕಥಾನಕ. ಇದರಲ್ಲಿ ಪ್ರಿಯಮಣಿಯ ಪಾತ್ರಕ್ಕೆ ಗಟ್ಟಿಯಾದ ಸ್ವರ ಬೇಕು. ಹಾಗಾಗಿ ಪ್ರಿಯಮಣಿಯನ್ನು ಡಬ್ಬಿಂಗ್‌ಗೆ ಬೇರೆಯವರ್ನು ಬಳಸುತ್ತೇವೆಂದು ಒಪ್ಪಿಸಿದ್ದೇವೆ ಎನ್ನುತ್ತಾರೆ ಆದಿತ್ಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಿಯಮಣಿ, ರಾಮ್, ಕನ್ನಡ ಸಿನಿಮಾ, ಪುನೀತ್