ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ ರಾಜ್- ದಿ ಶೋ ಮ್ಯಾನ್ ಚಿತ್ರ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ನಿರೀಕ್ಷೆಯ ಮಟ್ಟ ತಲುಪದಿದ್ದರೂ, ಚಿತ್ರದ ಬಗ್ಗೆ ಹ್ಯಾಪಿಯಾಗಿರುವುದಂತೂ ನಿಜ. ಆದರೆ, ಅವರಿಗೆ ಚಿತ್ರದ ಸನ್ನಿವೇಶವೊಂದು ನೋವನ್ನೂ ಉಂಟು ಮಾಡಿದೆಯಂತೆ.
ನಮ್ಮ ಅಪ್ಪು ಯಾಕೆ ತಪ್ಪು ಮಾಡಿದ ಎಂದು ಪ್ರೀತಿಯಿಂದ ಪುನೀತ್‌ಗೆ ಅಭಿಮಾನಿಗಳು ಗದರಿದ್ದಾರೆ. ಇದು ಪುನೀತ್‌ಗೂ ಬೇಜಾರಾಗಿದೆಯಂತೆ. ಅದಕ್ಕಾಗಿ ಕ್ಷಮೆ ಕೇಳಿದ್ದಾನೆ. ಒಬ್ಬ ನಟನಾಗಿ ಇದನ್ನು ನೋಡಿದಾಗ ಏನೂ ಅನಿಸಿರಲಿಲ್ಲ. ಆದರೆ ಈಗ ಅಭಿಮಾನಿಗಳಿಗೆ ಈ ದೃಶ್ಯದಿಂದ ನೋವಾಗಿದ್ದಾರೆ ಕ್ಷಮೆ ಇರಲಿ ಎಂದಿದ್ದಾರೆ.
ಹಾಗಾದರೆ ಅದ್ಯಾವ ದೃಶ್ಯ ಎಂದು ನೀವು ಕೇಳಬಹುದು. ಚಿತ್ರದ ಆರಂಭದಲ್ಲಿ ನಾಯಕ ಮುತ್ತುರಾಜ್ ಜೈಲಲ್ಲಿ ಕೈದಿಯಾಗಿ ಮಲಗುವಾಗ ಜೈಲಿನಲ್ಲಿರುವ ರೌಡಿ ಕೈದಿಯೊಬ್ಬ ಆತನ ತಲೆಯ ಹತ್ತಿರ ಮೂತ್ರ ವಿಸರ್ಜಿಸುವ ದೃಶ್ಯವಿದೆ. ಇದು ಅಪ್ಪು ಅಭಿಮಾನಿಗಳಿಗೆ ಸರಿ ಬಂದಿಲ್ಲ. ಆದರೆ ಇದು ಜೈಲಿನಲ್ಲಿ ನಡೆಯುತ್ತಿರುವ ಶೋಷಣೆ ತೋರಿಸಲು ಈ ದೃಶ್ಯ ಅನಿವಾರ್ಯವಾಗಿತ್ತು ಎಂಬುದು ನಿರ್ದೇಶಕ ಪ್ರೇಮ್ ಅಂಬೋಣ.
ಅದೇನೇ ಇರಲಿ. ಇದನ್ನು ಪುನೀತ್ ಅಭಿಮಾನಿಗಳು ಒಪ್ಪಲು ಸಿದ್ಧರಿಲ್ಲ. ನಮ್ಮ ನೆಚ್ಚಿನ ನಟನಿಗೆ ಅವಮಾನ ಆಗುವುದನ್ನು ಸಹಿಸುವುದಿಲ್ಲ ಎನ್ನುತ್ತಾರೆ.