ನಿರ್ಮಾಪಕರಾದ ಪರಮೇಶ್ ಹಾಗೂ ಪ್ರೇಮ್ ಕುಮಾರ್ ಜೀವದ ಗೆಳೆಯರು ಇಬ್ಬರು ಒಟ್ಟಿಗೆ ಸೇರಿ ನಿರ್ಮಿಸುತ್ತಿರುವ ಚಿತ್ರ ಜೀವಾ. ಈ ಚಿತ್ರ ನಟ ಪ್ರಜ್ವಲ್ಗೆ ಉತ್ತಮ ಇಮೇಜ್ ಕೊಡಲಿದೆ, ಅಲ್ಲದೆ ಹೊಸ ನಾಯಕಿ ಋತುವಾಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಲಿದೆ ಎನ್ನುತ್ತಾರೆ ಜೀವದ ಗೆಳೆಯರು.
ಈ ಹಿಂದೆ ಇದೇ ನಿರ್ಮಾಪಕರ ಜೋಡಿ ಓ ಗುಲಾಬಿ ಹಾಗೂ ಪಲ್ಲಕ್ಕಿಯಂತಹ ಸದಭಿರುಚಿಯ ಚಿತ್ರಗಳನ್ನು ನೀಡಿದ್ದಾರೆ. ಖ್ಯಾತ ನಟನಟಿಯರನ್ನು ಇಟ್ಟುಕೊಂಡು ಚಿತ್ರ ಮಾಡುವುದಕ್ಕಿಂತ ಉತ್ತಮವಾದ ಕಥೆಯನ್ನು ಇಟ್ಟುಕೊಂಡು ಚಿತ್ರ ಮಾಡುವುದು ನಮ್ಮ ಉದ್ದೇಶ ಎನ್ನುತ್ತಾರೆ ನಿರ್ಮಾಪಕ ಪರಮೇಶ್.
ಸಿನೆಮಾಗೆ ಬೇಕಾದ ಸೌಕರ್ಯಗಳನ್ನು ನಾವು ಸಂಪೂರ್ಣವಾಗಿ ಒದಗಿಸಿದ್ದೇವೆ. ಸಿನೆಮಾ ಎಲ್ಲಿಯೂ ಬೋರ್ ಆಗದಂತೆ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಜೀವಾದಲ್ಲಿ ಲವ್, ಸೆಂಟಿಮೆಂಟ್, ಸಾಹಸಗಳನ್ನು ಹೊಂದಿದೆ ಎನ್ನತ್ತಾರೆ ಅವರು.
ಗುರುಕಿರಣ್ ಕಥೆ ಕೇಳಿ ಸಮಯಾವಕಾಶ ತೆಗೆದುಕೊಂಡು ಸಂಗೀತ ನೀಡಿದ್ದಾರೆ. ಚಿತ್ರದ ಮೊದಲಾರ್ಧ ತಮಾಷೆಯಲ್ಲಿ ಸಾಗುತ್ತದೆ ಹಾಗೂ ದ್ವಿತೀಯಾರ್ಧ ಪ್ರೇಕ್ಷಕರಿಗೆ ಕುತೂಹಲ ಕೆರಳಿಸುತ್ತಾ ಹೋಗುತ್ತದೆ ಎನ್ನುತ್ತಾರೆ ನಿರ್ದೇಶಕರು.
ಹಲವು ತೋಪುಗಳ ಸರಮಾಲೆಯನ್ನೇ ನೀಡಿದ ಪ್ರಜ್ವಲ್ ಈ ಜೀವಾ ಚಿತ್ರದಲ್ಲಿ ನಿಜಕ್ಕೂ ಜೀವ ಕೈಯಲ್ಲಿ ಹಿಡಿದೇ ನಟಿಸಿದ್ದಾರೆ. ಪ್ರಜ್ವಲ್ ಜೀವ ಈ ಚಿತ್ರದಲ್ಲಿದೆ. ಚಿತ್ರ ಇಂದು ಬಿಡುಗಡೆಯನ್ನೂ ಕಂಡಿದೆ. ಚಿತ್ರ ಯಶಸ್ವಿಯಾದರೆ ಪ್ರಜ್ವಲ್ಗೆ ಮರುಜೀವ ಬಂದಂತೆ ಎಂದರೆ ತಪ್ಪಾಗಲಾರದೇನೋ.