ವಿಷ್ಣುವರ್ಧನ್ ಅವರ 60ನೇ ಜನ್ಮದಿನದ ಪ್ರಯುಕ್ತ ಅವರ ಕುಟುಂಬ ಹಮ್ಮಿಕೊಂಡಿರುವ 'ಸಿಂಹಾವಲೋಕನ'- ವಿಷ್ಣುವರ್ಧನ್ ಚಲನಚಿತ್ರೋತ್ಸವ ಇಂದಿನಿಂದ (ಸೆ.17) ಆರಂಭಗೊಂಡಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಚಲನಚಿತ್ರೋತ್ಸವದ ಮೂಲಕ ವಿಷ್ಣು ಅಭಿಮಾನಿಗಳು ಉಚಿತಾಗಿ ಅವರ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದಾಗಿದೆ. ಐನಾಕ್ಸ್, ಗರುಡಾ ಮಾಲ್‌ನಂತಹ ಪ್ರದೇಶಗಳಲ್ಲಿ ಆಯೋಜಿಸಿದ್ದ ಪ್ರದರ್ಶನ ಇದೀಗ ಸಾಮಾನ್ಯ ಜನರಿಗೂ ತಲುಪಿಸುವ ಸಲುವಾಗಿ ಐನಾಕ್ಸ್ ಜೊತೆಗೆ ಗಾಂಧಿನಗರದ ಥಿಯೇಟರುಗಳಲ್ಲೂ ಪ್ರದರ್ಶನಗೊಳ್ಳಲಿದೆ. ಚಿತ್ರ ವೀಕ್ಷಿಸಲು ಉಚಿತ ಪಾಸ್‌ಗಳು ಆಯಾ ಚಿತ್ರಮಂದಿರಗಳಲ್ಲಿ ಪ್ರದರ್ಶನದ ದಿನ ಲಭ್ಯವಿರುತ್ತವೆ. ಐನಾಕ್ಸ್‌ನಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳ ಪಾಸ್ ಐನಾಕ್ಸ್‌ನಲ್ಲೇ ಈಗಾಗಲೇ ಲಭ್ಯವಿದೆ.
ಉಚಿತ ಚಿತ್ರಪ್ರದರ್ಶನದ ವಿವರಗಳು ಹೀಗಿವೆ.
ಕಪಾಲಿ ಚಿತ್ರಮಂದಿರ ಸೆ.17- ಸಂಜೆ 7.30- ಭೂತಯ್ಯನ ಮಗ ಅಯ್ಯ ಸೆ.18- ಸಂಜೆ 7.30- ನಾಗರಹಾವು
ಪ್ರಸನ್ನ ಚಿತ್ರಮಂದಿರ ಸೆ.18- ಸಂಜೆ 4.30- ಬಂಧನ
ಐನಾಕ್ಸ್ ಚಿತ್ರಮಂದಿರ, ಗರುಡಾ ಮಾಲ್ ಸೆ.17- ಬೆಳಿಗ್ಗೆ 10.15- ನಾಗರಹಾವು ಸೆ.17 - ಮಧ್ಯಾಹ್ನ 1.30- ಮಲಯ ಮಾರುತ ಸೆ.17- ಸಂಜೆ 4.30- ಸುಪ್ರಭಾತ ಸೆ.17- ಸಂಜೆ 7.30- ವೀರಪ್ಪ ನಾಯಕ
ಸೆ.18- ಬೆಳಿಗ್ಗೆ 10.35- ಬಂಧನ ಸೆ.18- ಮದ್ಯಾಹ್ನ 1.35- ಸಿಂಹಾದ್ರಿಯ ಸಿಂಹ ಸೆ.18- ಸಂಜೆ 4.30- ದಿಗ್ಗಜರು ಸೆ.18- ಸಂಜೆ 7.30- ಕರ್ಣ
ಸೆ.19- ಬೆಳಿಗ್ಗೆ 10.30- ಯಜಮಾನ ಸೆ.19- ಮಧ್ಯಾಹ್ನ 1.35- ಮುತ್ತಿನ ಹಾರ ಸೆ.19- ಸಂಜೆ 4.35- ಬಂಗಾರದ ಜಿಂಕೆ ಸೆ.19- ಸಂಜೆ 7.30- ಲಾಲಿ