ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡದ ಹೆಮ್ಮೆಯ ರಾಮಚಂದ್ರರ ಪುಟಾಣಿ ಪಾರ್ಟಿ (Putaani Party | P.N.Ramachanda | 57th National Film awards)
ಸುದ್ದಿ/ಗಾಸಿಪ್
Bookmark and Share Feedback Print
 
ಮಕ್ಕಳ ಚಿತ್ರ ಮನರಂಜನೆಗೆ ಮಾತ್ರ ಸೀಮಿತವಲ್ಲ. ಇವು ಸಂದೇಶವನ್ನೂ ನೀಡಬಲ್ಲವು, ಗೆಲ್ಲಿಸಿಕೊಡಬಲ್ಲವು ಹಾಗೂ ಇವು ದೊಡ್ಡವರಿಗೂ ಸಂದೇಶ ನೀಡುವ ಮಾದರಿ ಚಿತ್ರಗಳು ಅನ್ನುವುದನ್ನು 'ಪುಟಾಣಿ ಪಾರ್ಟಿ' ಸಾಬೀತು ಪಡಿಸುತ್ತದೆ.

ಹೌದು. ಪಿ.ಎನ್. ರಾಮಚಂದ್ರ ನಿರ್ದೇಶನದ ಪುಟಾಣಿ ಪಾರ್ಟಿ ಚಿತ್ರ ಸ್ವರ್ಣ ಕಮಲವನ್ನು ತನ್ನದಾಗಿಸಿಕೊಂಡಿದೆ. ಇದರ ಹಿಂದೆ ರಾಮಚಂದ್ರರ ಶ್ರಮ ಅಪಾರವಾಗಿದೆ. ಚಿಲ್ತ್ರನ್ಸ್ ಫಿಲಂ ಸೊಸೈಟಿ ನಿರ್ಮಾಣದ ಈ ಚಿತ್ರದಲ್ಲಿ ತಮ್ಮ ಎರಡನೇ ಚಿತ್ರ ನಿರ್ಮಿಸಿದ ರಾಮಚಂದ್ರ ಅವರು ಕಡಿಮೆ ಅವಧಿಯಲ್ಲೇ ಉತ್ತಮ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕನ ಪಟ್ಟಕ್ಕೇರಿದ್ದಾರೆ. ಇವರು ಈ ಹಿಂದೆ ಅಂದರೆ 2007ರಲ್ಲಿ ಸುಧಾ ಎನ್ನುವ ಹೆಸರಿನ ಚಿತ್ರವನ್ನು ನಿರ್ದೇಶಿಸಿದ್ದರು.

ಧಾರವಾಡ ಜಿಲ್ಲೆಯ ಹೊನ್ನಾಪುರ ಗ್ರಾಮದ ಸ್ಥಳೀಯ ರಂಗ ಕಲಾವಿದರು ಹಾಗೂ ಮಕ್ಕಳನ್ನು ಬಳಸಿಕೊಂಡು ಈ ಚಿತ್ರ ನಿರ್ಮಿಸಲಾಗಿದೆ. ಸಮೀರ್ ಮಹಾಜನ್ ಛಾಯಾಗ್ರಾಹಕರಾಗಿದ್ದು, ವಿಜಯ್ ಪ್ರಕಾಶ್ ಸಂಗೀತ ನೀಡಿದ್ದರು. ಮಕ್ಕಳ ಹಕ್ಕು, ಸಾಮಾಜಿಕ ನ್ಯಾಯಕ್ಕಾಗಿ ಮಕ್ಕಳು ಹೋರಾಡುವ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಕಿತ್ತು ಹಾಕಲು ಇವರು ಪಡುವ ಶ್ರಮವೇ ಚಿತ್ರದ ಮೂಲ ಕಥಾವಸ್ತು.

ಹೆಚ್ಚಿನವರು ಮಕ್ಕಳ ಚಿತ್ರ ಅಂದರೆ ಅದು ಮನರಂಜನೆಗೆ ಅಂತ ಭಾವಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ನಾನು ಮಕ್ಕಳನ್ನು ಸಮಾಜವನ್ನು ಕೆಡಿಸುತ್ತಿರುವ ಒಂದು ಪಿಡುಗನ್ನು ಇವರಿಂದಲೇ ನಿವಾರಿಸುವ ಕಥಾವಸ್ತುವನ್ನು ಬಳಸಿಕೊಂಡು ಮಕ್ಕಳನ್ನು ಹೀರೋ ಆಗಿಸಿದ್ದೇನೆ. ಇವರೇ ಭವಿಷ್ಯದ ಅಸ್ತ್ರವಾಗಿದ್ದು, ಪಿಡುಗುಗಳನ್ನು ಇವರ ಮನಸ್ಸಿನಲ್ಲಿ ಮೂಡಿಸಿದರೆ ಮಾತ್ರ ನಾಳಿನ ಯಶಸ್ಸು ಸಾಧ್ಯ ಎನ್ನುವುದನ್ನು ಅರಿತು ಈ ಕಾರ್ಯ ಮಾಡಿದ್ದೇನೆ ಎನ್ನುತ್ತಾರೆ ನಿರ್ದೇಶಕ ರಾಮಚಂದ್ರ.

ತಮ್ಮ ಯತ್ನದಿಂದ ಒಂದಿಷ್ಟು ಮಕ್ಕಳು ಪ್ರಾಮಾಣಿಕತೆಯ ಮಾರ್ಗಕ್ಕೆ ಬಂದು, ಸಮಾಜದ ಅನಿಷ್ಠವನ್ನು ತೊಡೆದುಹಾಕಲು ಯತ್ನಿಸಿದರೆ ಅಷ್ಟೇ ಸಾಕು. ಪ್ರಶಸ್ತಿ ಬಂದಿದ್ದು ಖುಷಿ ಆಗಿದೆ. ನಮ್ಮ ಶ್ರಮಕ್ಕೆ ಈ ರೂಪದಲ್ಲಿ ಫಲ ಸಿಕ್ಕಿದೆ ಎನ್ನುತ್ತಾರೆ ರಾಮಚಂದ್ರ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪುಟಾಣಿ ಪಾರ್ಟಿ, ಪಿಎನ್ರಾಮಚಂದ್ರ, ಸ್ವರ್ಣಕಮಲ, ರಾಷ್ಟ್ರಪ್ರಶಸ್ತಿ