ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಓಂಪ್ರಕಾಶ್ ಪೌರೋಹಿತ್ಯದಲ್ಲಿ ದರ್ಶನ್-ನಿಖಿತಾಗೆ ಮದುವೆ (Om Prakash Rao | Darshan | Nikhita | Prince)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿ ನಿಖಿತಾರನ್ನು ವಿವಾಹವಾಗುತ್ತಿದ್ದಾರೆ.

ಇದೇನು ಚಿತ್ರಕ್ಕೆ ನಾಯಕಿಯಾದವಳನ್ನು ಮನದನ್ನೆಯಾಗಿಸಿಕೊಂಡು ಬಿಟ್ಟರಾ ದರ್ಶನ್. ಅಬ್ಬಬ್ಬಾ ಎಂತಾ ಹುಡುಗ ನೋಡ್ರಿ, ನಿನ್ನೆ ನಿನ್ನೆಯವರೆಗೂ ಮಳ್ಳಿ ತರ ನಡಕೊಂತಿದ್ದ, ಇವತ್ತು ಒಬ್ಬ ಹೆಂಡತಿ ಸಾಲದು ಅಂತ ಇನ್ನೊಂದು ಕಟ್ಟಿಕೊಂಡಿದ್ದಾನೆ ಅಂತೆಲ್ಲಾ ಗೊಣಗಬೇಡಿ. ಇದೇನು ನಿಖಿತಾ ಮದುವೆ ಆಗಿ ಬಿಟ್ಟರಲ್ಲಾ ಅಂತ ಅವರ ಅಭಿಮಾನಿಗಳು ಬೇಸರ ಪಟ್ಟುಕೊಳ್ಳಬೇಡಿ. ವಿಷಯ ಬೇರೆಯೇ ಇದೆ.

ಇವರ ವಿವಾಹ ಆಗಿದ್ದಂತೂ ನಿಜ. ಆದರೆ ಅಸಲಿಯಾಗಿ ಅಲ್ಲ. ಬದಲಾಗಿ 'ಪ್ರಿನ್ಸ್' ಚಿತ್ರಕ್ಕಾಗಿ. ಹೌದು, 'ಪ್ರಿನ್ಸ್' ಚಿತ್ರದ ನಾಯಕ-ನಾಯಕಿಯಾಗಿ ಇವರು ವಿವಾಹ ಆಗಿದ್ದಾರೆ, ಅಷ್ಟೆ. ಚಿತ್ರದಲ್ಲಿ ಇದರ ಅಗತ್ಯ ಬಂದ ಸಂದರ್ಭದಲ್ಲಿ ಅದ್ದೂರಿ ಸೆಟ್ ಹಾಕಿಸಿ ಅಸಲಿ ಮದುವೆ ಎಂದೇ ಭಾಸವಾಗುವ ರೀತಿ ಚಿತ್ರದಲ್ಲಿ ಶೂಟಿಂಗ್ ನಡೆಸಲಾಗಿದೆ.

ಇವರಿಬ್ಬರ ಮದುವೆ ಸನ್ನಿವೇಶಕ್ಕೆ ಕ್ಲಾಪ್ ಮಾಡಿದವರು ನಿರ್ದೇಶಕ ಓಂ ಪ್ರಕಾಶ್ ರಾವ್. ಉತ್ತಮ ಸೆಟ್ ಹಾಗೂ ಸೇರಿದ್ದ ಜನರನ್ನು ನೋಡಿದಾಗ, ಅವರ ಸಂಭಾಷಣೆ ಆಲಿಸಿದಾಗ ಅಲ್ಲೊಂದು ಅಸಲಿ ಮದುವೆಯೇ ನಡೆದು ಹೋಗಿದೆಯೇನೋ ಅನ್ನುವಂತೆ ಭಾಸವಾಗುತ್ತಿತ್ತು.

ಚಿತ್ರವನ್ನು ಅತ್ಯಂತ ನೈಜವಾಗಿ ತೆಗೆಯುವ ಆಸೆಯಿಂದ ಓಂ ಪ್ರಕಾಶ್ ರಾವ್ ಯತ್ನಿಸಿದ್ದು ಮುಂಬೈನಲ್ಲಿ ನಡೆಸಿದ ಶೂಟಿಂಗ್ ಸುದ್ದಿ ಗಾಂಧಿನಗರದಲ್ಲಿ ಬಲೇ ದೊಡ್ಡದಾಗಿ ಗುಲ್ಲಾಗಿರುವುದು ಇವರಿಗೆ ಸಂತೋಷ ತಂದಿದೆ. ಶೂಟಿಂಗ್ ಇಷ್ಟು ಸುದ್ದಿಯಾದರೆ ಚಿತ್ರ ಇನ್ನೆಷ್ಟು ಆಗಲ್ಲ ಅನ್ನುತ್ತಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಓಂ ಪ್ರಕಾಶ್ ರಾವ್, ದರ್ಶನ್, ನಿಖಿತಾ, ಪ್ರಿನ್ಸ್