ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಟಿವಿಯಲ್ಲಿ ಭಾವನಾ ಆಟ, ಅಭಿಮಾನಿಗಳ ಸಂಕಟ ನಿವಾರಣೆ (Bhavana | Godrej adi life change madi | Udaya TV | Kannada star)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಚಿತ್ರ ತಾರೆಯರನ್ನು ಬಳಸಿಕೊಂಡು ನಾನಾ ರಿಯಾಲಿಟಿ ಶೋ ಆರಂಭಿಸುವುದು ಕನ್ನಡ ಕಿರುತೆರೆಯ ನಾನಾ ವಾಹಿನಿಗಳಲ್ಲಿ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ಇತ್ತೀಚೆಗೆ 'ಹಳ್ಳಿ ಹೈದ ಪ್ಯಾಟೇಗ್ ಬಂದ' ಮೂಲಕ ನಟಿ ರಾಧಿಕಾ ಪಂಡಿತ್ ಕಿರುತೆರೆಗೆ ಆಗಮಿಸಿದ್ದರು. ಇದೀಗ ಅವರ ಬೆನ್ನಿಗೆ ನಟಿ ಭಾವನಾ ಆಗಮನವೂ ಆಗಿದೆ. ಹೌದು, ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಉದಯ ಟಿವಿಯಲ್ಲಿ ಆರಂಭವಾಗಿರುವ 'ಗೋದ್ರೆಜ್ ಆಡಿ ಲೈಫ್ ಚೇಂಜ್ ಮಾಡಿ' ಹೆಸರಿನ ರಿಯಾಲಿಟಿ ಶೋಗೆ ಭಾವನಾ ನಿರೂಪಕಿಯಾಗಿ ಆಗಮಿಸಿದ್ದಾರೆ.

ಹಿಂದಿ ಚಿತ್ರರಂಗದವರೆಗೂ ಹೋಗಿ ಬಂದಿರುವ ಈ ತಾರೆ ಇದೀಗ ಬಿಡುವಿಲ್ಲದ ತನ್ನದೇ ಕೆಲಸಗಳ ನಡುವೆಯೂ ಕಿರುತೆರೆಗೆ ಲಗ್ಗೆ ಇಟ್ಟಿದ್ದಾರೆ. ಗೋದ್ರೆಜ್ ಸಂಸ್ಥೆ ಪ್ರಾಯೋಜಕತ್ವದಲ್ಲಿ ಆರಂಭವಾಗಿರುವ ಈ ರಿಯಾಲಿಟಿ ಶೋ ಪ್ರತಿ ಶನಿವಾರ ರಾತ್ರಿ 9ರಿಂದ ಒಂದು ಗಂಟೆ ಕಾಲ ಪ್ರದರ್ಶನವಾಗುತ್ತಿದೆ.

ಇದುವರೆಗೂ ಚಲನಚಿತ್ರದಲ್ಲಿ ಕಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಭಾವನಾ ಇನ್ನು ಕಿರುತೆರೆ ಮೂಲಕವೂ ವಾರಕ್ಕೊಮ್ಮೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮಾತ್ರ ನೋಡಿ ಆನಂದಿಸುತ್ತಿದ್ದ, ಇತ್ತೀಚೆಗೆ ಅಪರೂಪವಾಗಿರುವ ಭಾವನಾಭಿಮಾನಿಗಳಿಗೆ ನಿರಾಸೆ ಕಾಡುತ್ತಿತ್ತು. ಹೆಚ್ಚು ಚಿತ್ರಗಳು ಭಾವನಾ ಕೈಲಿ ಇರದಿದ್ದುದರಿಂದ ಅಭಿಮಾನಿಗಳು ಹಳೆ ಚಿತ್ರವನ್ನು ನೋಡಿಕೊಂಡೇ ಚಂದ್ರಮುಖಿ, ಪ್ರಾಣಸಖಿ ಅನ್ನುತ್ತಿದ್ದರು.

ಆದರೆ ಇದೀಗ ಅಭಿಮಾನಿಗಳ ಅದೃಷ್ಟ ಖುಲಾಯಿಸಿದೆ. ಈಗಾಗಲೇ ಈ ಕಾರ್ಯಕ್ರಮ ಹಿಂದಿಯಲ್ಲಿ ಸಾಕಷ್ಟು ಯಶ ಕಂಡಿದ್ದು, ಸ್ಥಳೀಯ ಭಾಷೆಗಳಲ್ಲೂ ಆರಂಭಿಸಲು ಗೋದ್ರೆಜ್ ಸಂಸ್ಥೆ ಮುಂದಾಗಿದೆ. ಸದ್ಯ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಈ ಕಾರ್ಯಕ್ರಮ ಏಕಕಾಲಕ್ಕೆ ಆರಂಭವಾಗಿದೆ. ಮನೆ ಮಾದರಿಯ ಸೆಟ್ ಬಳಸಿ ಇಲ್ಲಿ ಕಾರ್ಯಕ್ರಮ ನೀಡಲಾಗುತ್ತದೆ.

ಒಟ್ಟಾರೆ ಈ ಕಾರ್ಯಕ್ರಮದಿಂದಾಗಿ ಭಾವನಾರನ್ನು ಜನರಿಗೆ ನೋಡುವ ಅವಕಾಶ ಸಿಕ್ಕಿದ್ದಂತೂ ಸುಳ್ಳಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾವನಾ, ಗೋದ್ರೆಜ್ ಆಡಿ ಲೈಫ್ ಚೇಂಜ್ ಮಾಡಿ, ಉದಯ ಟಿವಿ