ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯಡಿಯೂರಪ್ಪ ರಾಜಕಾರಣ ಮುಗೀತು, ಈಗ ಸಿನಿಮಾ ಸರದಿ? (Bhooloka Rakshakan | BS Yeddyurappa | Vijeesh Mani | Sri Ayyappan)
ಸುದ್ದಿ/ಗಾಸಿಪ್
Bookmark and Share Feedback Print
 
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಕೀಯ ಅತಂತ್ರತೆಯನ್ನು ಎದುರಿಸುತ್ತಿರುವ ನಡುವೆಯೇ ಬಂದಿರುವ ಸುದ್ದಿಯಿದು. ರಾಜಕಾರಣದಿಂದ ನಿವೃತ್ತಿಯಾಗಲಿದ್ದಾರೆಯೇ ಎನ್ನುವುದು ಖಚಿತವಿಲ್ಲ, ಆದರೆ ಚಿತ್ರರಂಗ ಪ್ರವೇಶಿಸುತ್ತಿರುವುದಂತೂ ನಿಜ. ಹೌದು, 'ಭೂಲೋಕ ರಕ್ಷಕ'ನಾಗಿ ಅವರು ನಟಿಸಲಿದ್ದಾರೆ.

ಅವರಿಗೆ ದೈವಾಂಶ ಸಂಭೂತರ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ವಿಶೇಷ. ಈ ಚಿತ್ರ ಶಬರಿಮಲೆ ಅಯ್ಯಪ್ಪ ಮತ್ತು ಬಾಬರ (ವಾವರ) ನಡುವಿನ ಸಂಬಂಧದ ಕುರಿತಾಗಿದೆಯಂತೆ. ಇದರೊಂದಿಗೆ ರಾಮಕೃಷ್ಣ ಹೆಗಡೆ ನಂತರ ಕರ್ನಾಟಕದ ಮುಖ್ಯಮಂತ್ರಿಯೊಬ್ಬರು ನಟಿಸುವ ದಾಖಲೆಯೂ ನಿರ್ಮಾಣವಾಗಲಿದೆ.
MOKSHA

ಈಗ ಯಡಿಯೂರಪ್ಪ ನಟಿಸಲಿರುವ ಚಿತ್ರದ ಹೆಸರು 'ಭೂಲೋಕ ರಕ್ಷಕನ್'. ಮಲಯಾಳಂ ಸೇರಿದಂತೆ ಒಟ್ಟು 35 ಭಾಷೆಗಳಲ್ಲಿ ಈ ಚಿತ್ರ ತಯಾರಾಗುತ್ತಿದೆ. ಮೊದಲೇ ಅಪಾರ ಭಕ್ತರಾಗಿರುವ ಯಡಿಯೂರಪ್ಪನವರು ಇಂತಹ ಅವಕಾಶವನ್ನು ದೇವರ ಸೇವೆಯಂದೇ ಭಾವಿಸಿದ್ದಾರೋ, ಏನೋ?

ಅವರು ಮಾಡುತ್ತಿರುವ ಪಾತ್ರ ಶಬರಿಮಲೆ ಧರ್ಮಾಧಿಕಾರಿಯ ಮಗನದ್ದು. ಪಾತ್ರದ ಹೆಸರು ಬ್ರಹ್ಮದತ್ತನ್. ಪಂದಳದ ರಾಜ ರಾಜಶೇಖರನ್ ಪುತ್ರನೇ ಈ ಬ್ರಹ್ಮದತ್ತನ್.

ಮಕ್ಕಳಿಲ್ಲದೆ ಕೊರಗುತ್ತಿದ್ದ ರಾಜಶೇಖರನ್ ತನ್ನ ದಂಡಿನೊಂದಿಗೆ ಬೇಟೆಗೆಂದು ಹೋಗಿದ್ದಾಗ ಮಣಿಕಂಠ ಕಾಡಿನಲ್ಲಿ ಸಿಕ್ಕಿರುತ್ತಾನೆ. ಆದರೆ ಕೆಲ ಸಮಯದ ನಂತರ ರಾಣಿ ಗಂಡು ಮಗುವೊಂದಕ್ಕೆ ಜನ್ಮ ನೀಡುತ್ತಾಳೆ. ಆತನೇ ಬ್ರಹ್ಮದತ್ತನ್. ಈತನೇ ನಿಜವಾದ ಮಗ ಎಂದು ಮಂತ್ರಿಯೊಬ್ಬ ರಾಣಿಯ ಕಿವಿ ಹಿಂಡುತ್ತಾನೆ. ಅಯ್ಯಪ್ಪನಿಗೆ ನಡೆಯಬೇಕಿದ್ದ ಪಟ್ಟಾಭಿಷೇಕವನ್ನು ತಪ್ಪಿಸಲು ಯತ್ನಿಸುತ್ತಾನೆ.

ರಾಣಿಗೆ ಹೊಟ್ಟೆನೋವೆಂದು ಹುಲಿ ಹಾಲು ತರಲು ಅಯ್ಯಪ್ಪನನ್ನು ಕಾಡಿಗೆ ಹೋಗುವಂತೆ ನೋಡಿಕೊಳ್ಳುತ್ತಾಳೆ.

ಇದೇ ಕಥೆಯನ್ನು ವಿಸ್ತೃತ ರೂಪದಲ್ಲಿ 'ಭೂಲೋಕ ರಕ್ಷಕನ್' ಚಿತ್ರದಲ್ಲಿ ತೋರಿಸಲಾಗುತ್ತದೆ. ಚಿತ್ರವನ್ನು ನಿರ್ದೇಶಿಸುತ್ತಿರುವುದು ವಿಜೇಶ್ ಮಣಿ. ಈ ಹಿಂದೆ 'ಸ್ವಾಮಿ' ಎಂಬ ಚಿತ್ರದ ಮೂಲಕ ಗಮನ ಸೆಳೆದವರು ಇವರು.

ಅಯ್ಯಪ್ಪನ ಪಾತ್ರಧಾರಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಕಲಾಭವನ್ ಮಣಿ, ಕೌಶಿಕ್ ಬಾಬು, ಸುಧೀಶ್, ಸುಮನ್ ಮುಂತಾದವರು ಚಿತ್ರದಲ್ಲಿ ಇರಲಿದ್ದಾರೆ. ವಿದೇಶಿ ನಟರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಕರ್ನಾಟಕದ ಇತರ ಕೆಲವರು ಕೂಡ ನಟಿಸುವ ಸಾಧ್ಯತೆಗಳಿವೆ.

ಇದಕ್ಕೆ ಪೂರಕವೆನಿಸಿರುವುದು ಮುಹೂರ್ತ ಕಾರ್ಯಕ್ರಮದಲ್ಲಿ ಕರ್ನಾಟಕದ ಕೆಲವು ರಾಜಕಾರಣಿಗಳು, ಉದ್ಯಮಿಗಳು ಭಾಗವಹಿಸಿರುವುದು. ಡಾ. ಬಿ.ಆರ್. ಶೆಟ್ಟಿ, ಸುಧೀರ್ ಶೆಟ್ಟಿ, ರಾಜಮೋಹನ್, ಕೃಷ್ಣಪ್ರಸಾದ್, ಸುರೇಶ್, ಮಲ್ಲಿಕಾರ್ಜುನ್, ಬಿ.ಎಲ್. ಶಂಕರ್, ಮಂಜುನಾಥ ಭಂಡಾರಿ, ಅತುಕಲ್ ರಾಜೇಶ್, ಸತೀಶ್ ಜಿ. ಪಿಳ್ಳೈ ಮುಂತಾದವರು ಕಾಣಿಸಿಕೊಂಡಿದ್ದರು.

ಮಲಯಾಳಂ, ತಮಿಳು, ಕನ್ನಡ, ತೆಲುಗು, ಒರಿಯಾ, ಪಂಜಾಬಿ, ಭೋಜಪುರಿ, ಗುಜರಾತಿ, ಇಂಗ್ಲೀಷ್, ಇರಾನಿ, ಮಲಯ, ಚೈನೀಸ್, ಉರ್ದು, ಪಶ್ತೋ, ಕಾಶ್ಮೀರಿ, ಸಂಸ್ಕೃತ, ಅರೇಬಿಕ್, ಜಪಾನೀಸ್, ಜರ್ಮನ್, ಗ್ರೀಕ್, ರಷ್ಯನ್, ಸ್ಪಾನಿಷ್, ಫ್ರೆಂಚ್, ಇಟಾಲಿಯನ್, ಐರಿಷ್, ಪೋರ್ಚುಗೀಸ್ ಸೇರಿದಂತೆ ಭಾರತದ 18 ಭಾಷೆಗಳು ಮತ್ತು 17 ವಿದೇಶಿ ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ಇನ್ನು ಗೀತೆರಚನೆ ವಿಚಾರದಲ್ಲೂ ವಿಶೇಷತೆಗಳಿವೆ. 50 ಮಂದಿಯ ತಂಡ ಇದಕ್ಕೆ ಸಾಹಿತ್ಯ ಒದಗಿಸಲಿದೆಯಂತೆ. ಬರೋಬ್ಬರಿ 200 ಗಾಯಕರು ತಮ್ಮ ಕಂಠಸಿರಿಯನ್ನು ವಿವಿಧ ಭಾಷೆಗಳಲ್ಲಿ ಚಿತ್ರದ ಹಾಡುಗಳಿಗಾಗಿ ನೀಡಲಿದ್ದಾರೆ. ಇದು ಗಿನ್ನೆಸ್ ದಾಖಲೆ ಕೂಡ ಹೌದಂತೆ. ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಖ್ಯಾತ ಡ್ರಮ್ಮರ್ ಶಿವಮಣಿ.

ಚಿತ್ರೀಕರಣ ಆರಂಭವಾಗುವುದು ಮೈಸೂರಿನಲ್ಲಿ ಎನ್ನುವುದು ಮತ್ತೊಂದು ವಿಶೇಷ. ಡಿಸೆಂಬರಿನಲ್ಲಿ ಆರಂಭವಾಗಲಿದೆ. ನಂತರ ಮಾನಸ ಸರೋವರ, ಕೈಲಾಸ, ಬದರೀನಾಥ, ಟಿಬೆಟ್, ನೇಪಾಳ, ಕಾಶ್ಮೀರ, ಜೈಪುರ, ಕಾಶಿ, ಶಬರಿಮಲೆ, ಈಜಿಪ್ಟ್ ಮತ್ತು ಒಮನ್‌ಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭೂಲೋಕ ರಕ್ಷಕ, ಬಿಎಸ್ ಯಡಿಯೂರಪ್ಪ, ವಿಜೇಶ್ ಮಣಿ, ಶ್ರೀ ಅಯ್ಯಪ್ಪನ್