'ಸೂಪರ್' ಬಗ್ಗೆ ಅಂಬಿ, ಸುದೀಪ್, ದರ್ಶನ್, ಗಣೇಶ್ ಏನಂತಾರೆ?
PR
ವಿಜಯ ರಾಘವೇಂದ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭಕ್ಕಾಗಿ ಗೋವಾಕ್ಕೆ ಹೋಗುತ್ತಿರುವುದರಿಂದ ಸೂಪರ್ ಚಿತ್ರವನ್ನು ಮೊದಲ ದಿನ ನೋಡಲು ಸಾಧ್ಯವಾಗುತ್ತಿಲ್ಲ. ಆದರೂ ಬೆಂಗಳೂರಿಗೆ ವಾಪಸ್ಸಾದ ಕೂಡಲೇ ಖಂಡಿತಾ ನೋಡುತ್ತೇನೆ. ನಾನು ಉಪ್ಪಿ ಸಾರ್ ಅವರ ದೊಡ್ಡ ಅಭಿಮಾನಿ, ಅವರ ಚಿತ್ರಗಳನ್ನು ನೋಡುತ್ತಲೇ ಬೆಳೆದವನು. ಅವರ ಭಾವ ತೀವ್ರತೆ ಮತ್ತು ಶೈಲಿಯನ್ನು ಕೇವಲ ಶಬ್ಧಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅವರು ಯಾವತ್ತೂ ಟ್ರೆಂಡ್ ಹಿಂದೆ ಬಿದ್ದವರಲ್ಲ. ಅವರು ದೇಶದಲ್ಲೇ ಉನ್ನತ ನಿರ್ದೇಶಕ ಎಂಬ ಖ್ಯಾತಿಯನ್ನು ಗಳಿಸುವ ವಿಶ್ವಾಸ ನನ್ನದು.
PR
ಶ್ರೀ ಮುರಳಿ ಒಬ್ಬ ನಟ, ನಿರ್ದೇಶಕನಾಗಿ ನಾನು ಉಪ್ಪಿ ಸರ್ ಅವರನ್ನು ಬಹುವಾಗಿ ಮೆಚ್ಚುತ್ತೇನೆ. ಖಂಡಿತಾ ಸೂಪರ್ ಚಿತ್ರವನ್ನು ನೋಡುವುದನ್ನು ಮಿಸ್ ಮಾಡಿಕೊಳ್ಳಲಾರೆ. ಉಪ್ಪಿಯವರ ಓಂ, ಎ ಮತ್ತು ಉಪೇಂದ್ರ ಚಿತ್ರಗಳು ನನ್ನನ್ನು ಬಹುವಾಗಿ ಕಾಡಿದ ಚಿತ್ರಗಳು. ಅವರು ನಿರ್ದೇಶನಕ್ಕೆ ವಾಪಸ್ ಬರುತ್ತಿರುವುದನ್ನು ಕಾತರದಿಂದ ಕಾಯುತ್ತಿದ್ದವನು ನಾನು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಬೇಕು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು ಎನ್ನುವುದು ನನ್ನ ಬಯಕೆ.
PR
ಯಶ್ ಉಪೇಂದ್ರ ಸಾರ್ ಅವರ ಸೂಪರ್ ಚಿತ್ರಕ್ಕಾಗಿ ಕಾಯುತ್ತಿರುವುದು ಅವರ ಉನ್ಮಾದಗೊಂಡಿರುವ ಅಭಿಮಾನಿಗಳು ಮಾತ್ರವಲ್ಲ, ನನ್ನಂತಹ ದೊಡ್ಡ ಅಭಿಮಾನಿಗಳು ಕೂಡ. ಶನಿವಾರ ನಾನು ಬೆಂಗಳೂರಿಗೆ ಬಂದ ಕೂಡಲೇ ಆ ಚಿತ್ರವನ್ನು ನೋಡುತ್ತೇನೆ. ಸೂಪರ್ ನೋಡುವಾಗ ಜತೆಗಿರುವಂತೆ ಗೆಳೆಯರಾದ ಯೋಗಿ, ಚಿರು ಮುಂತಾದವರಿಗೆ ಹೇಳಿದ್ದೇನೆ. ಬಹುಶಃ ಯೋಗಿ ಮೊದಲೇ ನೋಡುತ್ತಾನೆ, ಮತ್ತೆ ನನ್ನ ಜತೆ ಬರಬಹುದು.
PR
ಎಸ್. ನಾರಾಯಣ್ ಉಪೇಂದ್ರ ಮರಳಿ ನಿರ್ದೇಶನಕ್ಕೆ ಬರಬೇಕು ಎಂದು ಆಗಾಗ ಹೇಳುತ್ತಿದ್ದವರಲ್ಲಿ ನಾನೂ ಒಬ್ಬ. ಎರಡು-ಮೂರು ವರ್ಷಕ್ಕೆ ಒಂದು ಚಿತ್ರ ನಿರ್ದೇಶಿಸಿದರೂ ಸಾಕು. ಆದರೆ ಹತ್ತು ವರ್ಷಗಳಷ್ಟು ಸುದೀರ್ಘ ಅಂತರ ನೀಡುವುದು ಸರಿಯಲ್ಲ ಎಂದಿದ್ದೆ. ನನ್ನಂತಹ ಹಲವು ನಿರ್ದೇಶಕರಿಗೆ ಉಪೇಂದ್ರ ಒಂದು ಮಾದರಿ, ಸ್ಫೂರ್ತಿ.
PR
ಶಶಾಂಕ್ ಉಪ್ಪಿ ಸಾರ್ ಮಾಮೂಲಿ ವಿಚಾರಗಳಲ್ಲಿ ಸಿನಿಮಾಗಳನ್ನು ಮಾಡಿದವರಲ್ಲ. ಅವರು ಯಾವತ್ತೂ ಡಿಫರೆಂಟ್. ಏನೇನೋ ಹೇಳದೆ ಅವರು ಪರದೆಯಲ್ಲಿ ತನ್ನ ಭಿನ್ನತೆಯನ್ನು ಮೆರೆದವರು. ಈ ವಿಚಾರದಲ್ಲಿ ನಿಜಕ್ಕೂ ಅವರು ಸೂಪರ್ ನಿರ್ದೇಶಕ. ಖಂಡಿತಾ ಮೊದಲ ದಿನ ಮೊದಲ ಪ್ರದರ್ಶನದಲ್ಲೇ ಸೂಪರ್ ಚಿತ್ರವನ್ನು ನೋಡುತ್ತೇನೆ. ನಾನೂ ಸೇರಿದಂತೆ ಅಭಿಮಾನಿಗಳ ನಿರೀಕ್ಷೆಯನ್ನು ಅವರು ತಣಿಸಲಿದ್ದಾರೆ ಎಂಬ ಭರವಸೆ ನನ್ನಲ್ಲಿದೆ.
PR
ಯೋಗರಾಜ್ ಭಟ್ ಈ ಹಿಂದೆ ಹೇಳಿದ್ದನ್ನೇ ಮತ್ತೆ ಹೇಳುತ್ತಿದ್ದೇನೆ. ಉಪ್ಪಿ ಸಾರ್ ನನ್ನ ಗುರು ಮತ್ತು ಸ್ಫೂರ್ತಿ. ಚಲನಚಿತ್ರ ಪ್ರೇಕ್ಷಕರ ವಾತಾವರಣ, ಪೀಳಿಗೆ ಬದಲಾಗಿರುವ ಈ ಹೊತ್ತಿನಲ್ಲಿ ಅವರು ತನ್ನ ಚಿತ್ರವನ್ನು ಹೇಗೆ ಮಾಡಿರುತ್ತಾರೆ ಎಂಬುದನ್ನು ನೋಡಲು ನಾನು ಭಾರೀ ಕುತೂಹಲದೊಂದಿಗೆ ಚಿತ್ರ ನೋಡಲು ಕಾಯುತ್ತಿದ್ದೇನೆ. ಖಂಡಿತಾ ಅವರು ಮೋಸ ಮಾಡಲಾರರು. ನೀವು ನವೆಂಬರ್ 19ರಂದು ಆಡಿಯೋ ಬಿಡುಗಡೆ ಮಾಡದಿದ್ದರೆ ನಾನು ನಿಮ್ಮ ಮನೆ ಎದುರು ಧರಣಿ ಮಾಡುತ್ತೇನೆ ಎಂದು ಅವರಿಗೆ ಕೆಲ ದಿನಗಳ ಹಿಂದೆ ಎಸ್ಎಂಎಸ್ ಮಾಡಿದ್ದೆ. ಅಷ್ಟು ಕುತೂಹಲ ನನ್ನಲ್ಲಿದೆ.
PR
ದುನಿಯಾ ಸೂರಿ ಉಪ್ಪಿ ಸಾರ್ ಕಳೆದ ಹತ್ತು ವರ್ಷಗಳಲ್ಲಿ ಯಾವ ರೀತಿಯಾಗಿ ಬದಲಾಗಿದ್ದಾರೆ ಎಂಬುದನ್ನು ಸೂಪರ್ ಚಿತ್ರದಲ್ಲಿ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಕನ್ನಡ ಚಿತ್ರಗಳ ಪ್ರೇಕ್ಷಕರ ಅಭಿರುಚಿ ಮತ್ತು ನಿರೀಕ್ಷೆಗಳು, ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳು ಸಾಕಷ್ಟು ಬದಲಾವಣೆ ಕಂಡಿವೆ. ಅವರ ಓಂ ಮತ್ತು ಉಪೇಂದ್ರ ಚಿತ್ರಗಳನ್ನು ಅಪಾರವಾಗಿ ಮೆಚ್ಚಿದ್ದೆ. ಆದಷ್ಟು ಬೇಗ ಸೂಪರ್ ನೋಡುತ್ತೇನೆ.
PR
ಡಿ. ರಾಜೇಂದ್ರ ಬಾಬು ಉಪೇಂದ್ರ ನಾಯಕರಾಗಿದ್ದ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಅವರ ಸೂಪರ್ ಕುತೂಹಲ ಹುಟ್ಟಿಸಿದೆ. ಕ್ರಾಂತಿಕಾರಿ ಯೋಚನೆಗಳು ಮತ್ತು ತಾಜಾ ಕಲ್ಪನೆಗಳ ಮೂಲಕ ಉಪ್ಪಿ ಒಬ್ಬ ಅದ್ಭುತ ನಿರ್ದೇಶಕ ಎನ್ನುವುದು ಪ್ರತಿಯೊಬ್ಬ ಕನ್ನಡ ಚಿತ್ರಾಭಿಮಾನಿಗೂ ಗೊತ್ತು. ಅವರ ನಟನೆ ಮತ್ತು ನಿರ್ದೇಶನ -- ಎರಡರ ಕುರಿತೂ ನಾನು ತೀವ್ರ ಆಸಕ್ತಿ ಹೊಂದಿದ್ದೇನೆ.