ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 1993- ಸುದೀಪ್ ನಿರ್ದೇಶನದಲ್ಲಿ ಶಿವರಾಜ್-ಲೂಸ್ ಮಾದ (1993 | Sudeep | Shivaraj Kumar | Lose Mada Yogish)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇದುವರೆಗೆ ತಾನು ನಾಯಕನಾಗಿದ್ದ ಚಿತ್ರಗಳನ್ನಷ್ಟೇ ನಿರ್ದೇಶಿಸುತ್ತಾ ಬಂದಿದ್ದ ಸುದೀಪ್ ಮೊತ್ತ ಮೊದಲ ಬಾರಿಗೆ ಇನ್ನೊಬ್ಬರ ಚಿತ್ರ ನಿರ್ದೇಶನಕ್ಕೆ ಹೊರಟಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನೇ ಇದಕ್ಕಾಗಿ ಆರಿಸಿಕೊಂಡಿರುವುದು ವಿಶೇಷ. ಜತೆಗೆ ಲೂಸ್ ಮಾದ ಯೋಗೀಶ್ ಕೂಡ ಮುಖ್ಯ ಪಾತ್ರವೊಂದನ್ನು ಮಾಡುತ್ತಿದ್ದಾರೆ.

ಚಿತ್ರದ ಹೆಸರು '1993'. ಸುದೀಪ್ ತಾವೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಅದ್ಭುತ ಚಿತ್ರಕಥೆ ಬರೆದಿದ್ದೇನೆ; ಖಂಡಿತಾ ಶಿವರಾಜ್ ಮತ್ತು ಯೋಗೀಶ್ ಅವರು ತಮ್ಮ ಚಿತ್ರ ಜೀವನದಲ್ಲೇ ಸಂಪೂರ್ಣವಾಗಿ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವೂ ಸುದೀಪ್ ಅವರಲ್ಲಿದೆ.

'ಮೈ ಅಟೋಗ್ರಾಫ್' ಮೂಲಕ (ರಿಮೇಕ್) ನಿರ್ದೇಶಕನಾದ ಸುದೀಪ್ ಮೊದಲ ಚಿತ್ರದಲ್ಲೇ ಗಮನ ಸೆಳೆದವರು. ಅವರ ಎರಡನೇ ಚಿತ್ರ 'ನಂ.73 ಶಾಂತಿನಿವಾಸ' ಪ್ರಶಂಸೆ (ರಿಮೇಕ್) ಪಡೆಯಿತಾದರೂ ಬಾಕ್ಸಾಫೀಸಿನಲ್ಲಿ ಎಡವಿತ್ತು. ವೀರ ಮದಕರಿಯೂ (ರಿಮೇಕ್) ಇದರಿಂದ ಹೊರತಾಗಿರಲಿಲ್ಲ. ತನ್ನ ಮೊದಲ ಸ್ವಮೇಕ್ ಚಿತ್ರ 'ಜಸ್ಟ್ ಮಾತ್ ಮಾತಲ್ಲಿ' ಕೂಡ ಶ್ಲಾಘನೆಗೆ ಸೀಮಿತವಾಗಿತ್ತು.
MOKSHA

ಜನಪ್ರಿಯ ಚಿತ್ರ 'ಅಂತ'ದ ಅಂಬರೀಷ್ ಪಾತ್ರವನ್ನೇ ಚಿತ್ರ ಮಾಡಲು ಹೊರಟಿರುವ ಸುದೀಪ್ ಪ್ರಸಕ್ತ 'ಕನ್ವರ್‌ಲಾಲ್' ನಿರ್ದೇಶನದಲ್ಲಿ ಬ್ಯುಸಿ. ಜತೆಗೆ ದ್ವಾರಕೀಶ್ ನಿರ್ದೇಶನದ 'ವಿಷ್ಣುವರ್ದನ' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಮಣಿ ನಾಯಕಿಯಾಗಿದ್ದರೆ, ಸೋನು ಸೂದ್ ಖಳ. ಇತ್ತೀಚೆಗಷ್ಟೇ ಕನಕಪುರದ ಮನೆಯೊಂದರಲ್ಲಿ ಚಿತ್ರೀಕರಣ ನಡೆದಿದೆ.

ಉಗ್ರರ ವಿರುದ್ಧ ಶಿವಣ್ಣ ಹೋರಾಟ...
ರಾಘವ ಲೋಕಿ ನಿರ್ದೇಶನದ ಶಿವರಾಜ್ ಕುಮಾರ್ 101ನೇ ಚಿತ್ರದಲ್ಲಿ ಪ್ರಿಯಾಮಣಿ ನಾಯಕಿಯಾಗಿ ನಟಿಸುತ್ತಿರುವ ಸುದ್ದಿ ಹಳತು. ಕ್ರಾಂತಿಕಾರಿ ಚಿತ್ರವಿದು, ಶಿವಣ್ಣನಿಗೆ ವಿಭಿನ್ನ ಗೆಟಪ್ ಇರುತ್ತದೆ ಎಂದು ನಿರ್ದೇಶಕರು ಹೇಳಿದ್ದರು.

ಆದರೆ ಈ ಚಿತ್ರ ಭಯೋತ್ಪಾದನೆಯ ವಿರುದ್ಧ ಹೋರಾಡುವ ಕಥೆಯನ್ನು ಒಳಗೊಂಡಿದೆ ಎಂದು ಮುಂಬೈ ದಾಳಿಗೆ ಎರಡು ವರ್ಷ ತುಂಬಿದ ನವೆಂಬರ್ 26ರಂದು ಬಹಿರಂಗಗೊಂಡಿದೆ.

ಇನ್ನೂ ಹೆಸರಿಡದ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಚಿತ್ರವನ್ನು ಆಂಧ್ರಪ್ರದೇಶದ ರವಿ ಮತ್ತು ಭಾಸ್ಕರ್ ನಿರ್ಮಿಸುತ್ತಿದ್ದಾರೆ. ತಾರಾಗಣದಲ್ಲಿ ರಂಗಾಯಣ ರಘು, ಅವಿನಾಶ್, ದಿಲೀಪ್ ಮತ್ತು ಕೋಮಲ್ ಮಂತಾದವರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 1993, ಸುದೀಪ್, ಶಿವರಾಜ್ ಕುಮಾರ್, ಲೂಸ್ ಮಾದ ಯೋಗೀಶ್