ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಿವಣ್ಣನ ರಜತ ಮಹೋತ್ಸವ; ಎಲ್ಲರಿಗೂ ಸನ್ಮಾನ-ಆಹ್ವಾನ (Shivaraj Kumar | Kannada film | Geetha | Muthuraj Shivaputswamy)
ಶಿವಣ್ಣ ನುಡಿದಂತೆ ನಡೆಯಲಿದ್ದಾರೆ. ಮುತ್ತುರಾಜ್ ಶಿವಪುಟ್ಟಸ್ವಾಮಿ ಈಗ ಶಿವರಾಜ್ ಕುಮಾರ್ ಎಂಬ ದೈತ್ಯಶಕ್ತಿಯಾಗಿ ಬೆಳೆದ ರೀತಿಯನ್ನು ಅವರು ನೆನಪಿಸಿಕೊಳ್ಳಲಿದ್ದಾರೆ. ಕಳೆದ 25 ವರ್ಷಗಳ ಅವರ ಚಿತ್ರ ಜೀವನದಲ್ಲಿ ಬಂದು ಹೋದ ಪ್ರಮುಖರನ್ನು ಗೌರವಿಸಲಿದ್ದಾರೆ. ಇದೆಲ್ಲ ನಡೆಯಲಿರುವುದು ಮಾರ್ಚ್ 2ರಂದು.

ತನ್ನ 100ನೇ ಚಿತ್ರ, ಪ್ರೇಮ್ ನಿರ್ದೇಶನದ 'ಜೋಗಯ್ಯ'ದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ಈ ಸಂಬಂಧ ಹಲವು ವಿವರಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಗೀತಾ ಕೂಡ ಜತೆಗಿದ್ದರು.
PR

ಜೋಗಯ್ಯ ಚಿತ್ರದ ಧ್ವನಿಸುರುಳಿ ಫೆಬ್ರವರಿ 19ರಂದು ಬಿಡುಗಡೆಯಾಗಲಿದೆ. ಆದರೆ ಇದರ ಅಧಿಕೃತ ಬಿಡುಗಡೆ ಮಾರ್ಚ್ 2ರಂದು. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಎಲ್ಲಾ ನಿರ್ಮಾಪಕರು, ನಿರ್ದೇಶಕರು ಮತ್ತು ಕಲಾವಿದರನ್ನು ಸನ್ಮಾನಿಸಲಾಗುತ್ತದೆ.

1985ರ ಹೊತ್ತಿಗೆ ತನ್ನ ಜತೆಗೆ ಚಿತ್ರರಂಗ ಪ್ರವೇಶಿಸಿದ ಕ್ರೇಜಿ ಸ್ಟಾರ್ ರವಿಚಂದ್ರನ್, ನವರಸ ನಾಯಕ ಜಗ್ಗೇಶ್ ಮತ್ತು ರಮೇಶ್ ಅರವಿಂದ್ ಅವರನ್ನು ಕೂಡ ಸನ್ಮಾನಿಸಲಾಗುತ್ತದೆ.

'2011ರ ಫೆಬ್ರವರಿ 19ಕ್ಕೆ ನಾನು ಕನ್ನಡ ಚಿತ್ರರಂಗ ಪ್ರವೇಶಿಸಿ 25 ವರ್ಷಗಳು ತುಂಬಲಿವೆ. ಚಿತ್ರರಂಗ ಪ್ರವೇಶಿಸಿದ ವರ್ಷವೇ ನಾನು ಗೀತಾಳನ್ನು ಮದುವೆಯಾಗಿದ್ದೆ. ಹಾಗಾಗಿ ನನಗೆ ಮತ್ತು ನನ್ನ ಪತ್ನಿಗೆ ಇಬ್ಬರಿಗೂ ಆ ದಿನ ಬೆಳ್ಳಿಹಬ್ಬ' ಎಂದು 50ರ ಹೊಸ್ತಿಲಿನಲ್ಲಿರುವ ಶಿವಣ್ಣ ಖುಷಿಯಿಂದ ಹೇಳಿಕೊಂಡರು.

ಮೊದಲ ಚಿತ್ರದ ನಿರ್ಮಾಪಕಿ ನನ್ನ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಂದ ಹಿಡಿದು 100ನೇ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್‌ವರೆಗೆ ಎಲ್ಲಾ ನಿರ್ಮಾಪಕರನ್ನು ಮಾರ್ಚ್ 2ರಂದು ಸನ್ಮಾನ ಮಾಡಿ ಗೌರವಿಸುತ್ತೇನೆ. ಈ ಕಾರ್ಯಕ್ರಮ ರಂಗುರಂಗಾಗಿರುವಂತೆ ಹರ್ಷ, ನಾಗೇಶ್, ಕಲಾಯಿ, ಇಮ್ರಾನ್ ಸರ್ದಾರಿಯಾ ಮುಂತಾದ ನೃತ್ಯ ನಿರ್ದೇಶಕರು ಸಾಥ್ ನೀಡುತ್ತಿದ್ದಾರೆ. ನನ್ನ ಸಹ ನಟರೆಲ್ಲರನ್ನೂ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದೇನೆ ಎಂದಿರುವ ಶಿವಣ್ಣ, ಅಭಿಮಾನಿಗಳು ಮತ್ತು ಸಾರ್ವಜನಿಕರೂ ಕಾರ್ಯಕ್ರಮಕ್ಕೆ ಬರಬಹುದು. ಉಚಿತ ಪ್ರವೇಶ ಎಂದರು.

ಅದೇ ಹೊತ್ತಿಗೆ ಕರ್ನಾಟಕ ಬಿಟ್ಟು ಹೊರಗಿನ ಯಾರೊಬ್ಬರನ್ನೂ ಕಾರ್ಯಕ್ರಮಕ್ಕೆ ಅತಿಥಿಗಳನ್ನಾಗಿ ಆಹ್ವಾನಿಸಿಲ್ಲ. ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿ ಎಂದು ಯಾರೂ ಇರುವುದಿಲ್ಲ. ಎಲ್ಲರೂ ನನಗೆ ಅತಿಥಿಗಳೇ. ಬನ್ನಿ, ಹಾರೈಸಿ ಎಂದೂ ಶಿವಣ್ಣ ವಿನಯತೆಯಿಂದ ಕೇಳಿಕೊಂಡಿದ್ದಾರೆ.

ಅಂದ ಹಾಗೆ, ವರನಟ ಡಾ. ರಾಜ್‌ಕುಮಾರ್ ಹುಟ್ಟಹಬ್ಬದ ದಿನವಾದ ಏಪ್ರಿಲ್ 24ರಂದೇ ಜೋಗಯ್ಯನನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆಯಂತೆ.
ಸಂಬಂಧಿತ ಲೇಖನಗಳು