ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ್ ಗಿಮಿಕ್; 'ಜೋಗಯ್ಯ'ದಲ್ಲಿ ರಜನಿಕಾಂತ್ ನಟಿಸ್ತಾರಂತೆ! (Rajinikanth | Sandalwood | Shivaraj Kumar | Jogayya)
ಸುದ್ದಿ/ಗಾಸಿಪ್
Bookmark and Share Feedback Print
 
ಸದಾ ಗಿಮಿಕ್‌ಗಳನ್ನು ಮಾಡುತ್ತಾ ಭಾರೀ ಹೈಪ್ ಸೃಷ್ಟಿ ಮಾಡುವುದರಲ್ಲಿ ಗಾಂಧಿನಗರದಲ್ಲಿ ಪ್ರೇಮ್‌ರನ್ನು ಮೀರಿಸುವ ಇನ್ನೊಬ್ಬ ನಿರ್ದೇಶಕರಿಲ್ಲ. ಅದೇ ನಿಟ್ಟಿನಲ್ಲಿ ಈಗ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ, ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕರಾಗಿರುವ 'ಜೋಗಯ್ಯ'ದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಗಿದೆ.
PR

ಶಿವಣ್ಣನ 100ನೇ ಚಿತ್ರ ಜೋಗಯ್ಯದಲ್ಲಿ ರಜನಿ ಕಾಣಿಸಿಕೊಳ್ಳಲಿರುವುದು ಅತಿಥಿ ಪಾತ್ರದಲ್ಲಿ. ಐದು ನಿಮಿಷಗಳ ಕಾಲ ತೆರೆಯ ಮೇಲಿರುತ್ತಾರೆ ಎಂದು ಗಾಂಧಿನಗರದಲ್ಲಿ ಸುದ್ದಿಯನ್ನು ತೇಲಿ ಬಿಡಲಾಗಿದೆ. ಮೂಲಗಳ ಪ್ರಕಾರ ಇದು ಪ್ರೇಮ್ ಗಿಮಿಕ್. ಅವರ ಹುಡುಗರೇ ಇಂತಹ ಸುದ್ದಿಯನ್ನು ಹಬ್ಬಿಸಿದ್ದಾರೆ. ಖಂಡಿತಾ ರಜನಿ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುವುದು ಅಸಂಭವ ಎಂಬ ಮಾತು ಕೇಳಿ ಬರುತ್ತಿದೆ.

ಆದರೂ ರಜನಿಯ ನಡೆಯನ್ನು ಊಹಿಸುವುದು ಅಸಾಧ್ಯ. ರಾಜ್‌ಕುಮಾರ್ ಕುಟುಂಬದ ಜತೆ ಅತ್ಯುತ್ತಮ ಸಂಬಂಧ ಹೊಂದಿರುವುದು ಮತ್ತು 'ಜೋಗಿ' ಚಿತ್ರವನ್ನು ನೋಡಿದ್ದ ರಜನಿ, ನಿರ್ದೇಶಕ ಪ್ರೇಮ್‌ರ ಬೆನ್ನು ತಟ್ಟಿದ್ದನ್ನು ನೆನಪಿಸಿಕೊಂಡರೆ, ಸುದ್ದಿ ನಿಜವಾಗಿರಲೂ ಬಹುದು.

ಪ್ರೇಮ್ ನಿರ್ದೇಶನದಲ್ಲಿ ನಟಿಸಲು ಸಿದ್ಧನಿದ್ದೇನೆ ಎಂಬ ಅರ್ಥದ ಮಾತುಗಳನ್ನು ಅಂದು ಹೇಳಿದ್ದ ರಜನಿಯ ಹಿಂದೆ ಬಿದ್ದು, ಪಾತ್ರಕ್ಕೆ ಒಪ್ಪಿಸಿದ್ದಾರೆ. ಚಿತ್ರಕಥೆಗೆ ಒಬ್ಬ ಪ್ರಭಾವಿ ವ್ಯಕ್ತಿತ್ವದವರು ಬೇಕಾಗಿತ್ತು. ಪಾತ್ರ ಚಿಕ್ಕದಾದರೂ, ಪವರ್‌ಫುಲ್ ಆಗಿದೆ. ಹಾಗಾಗಿ ನೀವೇ ಬೇಕೆಂದು ಪ್ರೇಮ್ ದುಂಬಾಲು ಬಿದ್ದಿರುವುದಕ್ಕೆ ರಜನಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ವಾಸ್ತವದ ತಟ್ಟೆಯಲ್ಲಿಟ್ಟು ಈ ವಿಚಾರವನ್ನು ನೋಡುವಾಗ ರಜನಿ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುವುದು ಸುಲಭದ ಮಾತಲ್ಲ. ಅವರ ಆರಂಭದ ದಿನಗಳಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಗ ಪರಿಸ್ಥಿತಿ ಈಗಿನಂತಿರಲಿಲ್ಲ. ಈಗ ಅವರು ಯಾವುದೇ ಹೆಜ್ಜೆಯನ್ನಿಟ್ಟರೂ, ಅದಕ್ಕೆ ಸಾವಿರ ಕಥೆಗಳನ್ನು ಕಟ್ಟಲಾಗುತ್ತದೆ.

ಎಲ್ಲವೂ ಸ್ಪಷ್ಟವಾಗಬೇಕಾದರೆ ಸ್ವತಃ ಪ್ರೇಮ್ ಈ ಬಗ್ಗೆ ಮಾತನಾಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಜನಿಕಾಂತ್, ಶಿವರಾಜ್ ಕುಮಾರ್, ಜೋಗಯ್ಯ, ಪ್ರೇಮ್