ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಾಸಿಪ್‌ಗೆ ಅಂಜಿ ಮದುವೆಗೆ ಹೊರಟರಾ ನಿಖಿತಾ? (Nikhitha | Darshan | Sudeep | Gun)
ಸುದಿಪ್ ನಾಯಕನಾಗಿದ್ದ 'ಮಹಾರಾಜ' ಚಿತ್ರದ ಮೂಲಕ ಕನ್ನಡ ಚಿತರಂಗಕ್ಕೆ ಪ್ರವೇಶ ಪಡೆದ ಬೆಡಗಿ ನಿಖಿತಾ ಈಗೀಗ ಮುಕ್ತ ಮನಸ್ಸಿನಿಂದ ಎಲ್ಲಾ ರೀತಿಯ ಪಾತ್ರಗಳನ್ನೂ ಅಭಿನಯಿಸುತ್ತಾ ಬಹಳಷ್ಟು ಬ್ಯುಸಿಯಾಗಿದ್ದಾರೆ. ರಸಿಕರ ಕಣ್ಮಣಿಯಾಗಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿರುವ ಈಕೆ ಈ ಸಂದರ್ಭದಲ್ಲೇ ದಾಂಪತ್ಯ ಜೀವನಕ್ಕೆ ಪ್ರವೇಶಿಸಲು ತೀರ್ಮಾನಿಸಿದ್ದಾರಂತೆ.
PR

ಮುಂಬೈಯಲ್ಲಿ ನೆಲೆಸಿದ್ದ ತಂದೆ ಹೃದಯಾಘಾತದಿಂದ ನಿಧನರಾದುದರಿಂದ ತಂದೆಯನ್ನು ಕಳಕೊಂಡ ನಿಖಿತಾ ಮಾನಸಿಕವಾಗಿ ಕುಸಿದು ಹೋಗಿದ್ದಾರೆ. 'ಅಪ್ಪ ಹೋದ ಮೇಲೆ ತುಂಬಾ ಡಿಪ್ರೆಸ್ ಆಗಿಬಿಟ್ಟೆ. ಇದರ ನಡುವೆ ಇಲ್ಲ ಸಲ್ಲದ ಲವ್ ಅಫೇರ್ ವದಂತಿಗಳಿಂದ ತಲೆ ಚಿಟ್ಟು ಹಿಡಿದಿದೆ. ಅದಕ್ಕೇ ಬೇಗ ಮದುವೆ ಮಾಡಿಕೊಂಡು ಬಿಡೋಣ ಅಂತ ತೀರ್ಮಾನಿಸಿದ್ದೀನಿ' ಎಂದಿರುವ ನಿಖಿತಾ, ಮದುವೆ ಆಗುವ ವ್ಯಕ್ತಿ ಯಾರೆಂಬುದನ್ನು ಬಹಿರಂಗಪಡಿಸುವುದಿಲ್ಲ. 'ನನ್ನ ಗಂಡನಾಗುವ ವ್ಯಕ್ತಿ ಅಪ್ಪಟ ಭಾರತೀಯ, ದೈವಭಕ್ತ. ನನಗೂ ದೇವರಲ್ಲಿ ನಂಬಿಕೆ ಇದೆ' ಎಂದಷ್ಟೇ ಹೇಳಿದ್ದಾರೆ.

ನಾಯಕ ನಟ ದರ್ಶನ್ ಮತ್ತು ನಿಖಿತಾ ನಡುವೆ ಗಾಢ ಲವ್ ಇದೆ. ಸದ್ಯದಲ್ಲೇ ಅವರ ಮದುವೆ ನಡೆಯಲಿದೆ ಎಂಬ ವದಂತಿಗಳು ಈ ಹಿಂದೆ ದಟ್ಟವಾಗಿ ಕೇಳಿಬಂದಿದ್ದವು. ಆದರೆ ಅವುಗಳನ್ನೆಲ್ಲ ನಿಖಿತಾ ಸಾರಾಸಗಟಾಗಿ ನಿರಾಕರಿಸಿರುವುದರಿಂದ ಆಕೆ ಇನ್ನು ಕೈ ಹಿಡಿಯಲಿರುವ ಯುವಕ ಯಾರು ಎಂಬುದೇ ಎಲ್ಲರೂ ಕೇಳುವ ಪ್ರಶ್ನೆ.

ಸುದಿಪ್ ನಾಯಕನಾಗಿರುವ 'ಮಹಾರಾಜ' ಚಿತ್ರದ ಬಳಿಕ ನಿಖಿತಾ ಪುನೀತ್ ಜತೆ 'ವಂಶಿ' ಚಿತ್ರದಲ್ಲಿ, ನಂತರ ರವಿಚಂದ್ರನ್‌ಗೆ ನಾಯಕಿಯಾಗಿ 'ಹೋಳಿ' ಚಿತ್ರದಲ್ಲಿ ನಟಿಸಿದ್ದರು. ಆ ನಂತರ ದರ್ಶನ್ ಜತೆ ಸಾಲು ಸಾಲಾಗಿ 'ಯೋಧ', 'ಪ್ರಿನ್ಸ್' ಮತ್ತು 'ಗನ್' ಈ ಮೂರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುತ್ತಾರೆ. ಭರದಿಂದ ಚಿತ್ರೀಕರಣ ಸಾಗಿರುವ ಬಹುನಿರೀಕ್ಷೆಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲೂ ನಿಖಿತಾ ನಟಿಸಿದ್ದಾರೆ. ಈ ಎಲ್ಲಾ ಪಾತ್ರಗಳೂ ದರ್ಶನ್ ಮತ್ತು ನಿಖಿತಾ ನಡುವಿನ ವದಂತಿಗಳಿಗೆ ಪುಷ್ಟಿ ನೀಡಿದ ಅಂಶಗಳು.

ಜತೆಗೆ ಆದಿತ್ಯ ನಾಯಕನಾಗಿರುವ ಓಂಪ್ರಕಾಶ್ ಅವರ 'ಕಾಟನ್‌ಪೇಟೆ' ಗೂ ಇವರೇ ನಾಯಕಿಯಾಗಿ ಆಯ್ಕೆಯಾಗಿರುವುದು ಹೊಸ ಸುದ್ದಿ.
ಇವನ್ನೂ ಓದಿ