ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಜಯಲಕ್ಷ್ಮೀಗೆ ಪತಿಯ ಮೇಲೆ ಅನುಕಂಪ, ರಾಜಿಯಾದ್ರೆ ದರ್ಶನ್ ಬಚಾವ್ (Darshan Arrest | Challenging Star Darshan | Wife Beating | Kannada Film News)
WD
ಪತ್ನಿಗೆ ಪಿಸ್ತೂಲು ತೋರಿಸಿ ಮಾರಣಾಂತಿಕ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಸಿನಿಮಾ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಮೇಲೆ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದ್ದು, ಅವರಿಗೆ ಜಾಮೀನು ದೊರೆಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಲಾಗಿದೆ. ಇದೇ ವೇಳೆ, ತಮಗೆ ಮುಂದೆಂದೂ ಈ ರೀತಿ ತೊಂದರೆಯಾಗದಂತೆ ಭರವಸೆ ಕೊಟ್ಟರೆ ಕೇಸು ವಾಪಸ್ ತೆಗೆದುಕೊಳ್ಳಲು ಸಿದ್ಧ ಎಂದು ಪತ್ನಿಯ ಕಡೆಯಿಂದ ದರ್ಶನ್‌ಗೆ ಸಂದೇಶ ಹೋಗಿದೆ.
ಬಂಧನದ ಸಮಗ್ರ ವಿವರ ಇಲ್ಲಿದೆ
ಹಲವರಿಗೆ ಮಾದರಿಯಾಗಿರುವ, ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರ ವಿಚಾರಣೆಯು ವಿಜಯನಗರ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದ್ದು, ಶೀಘ್ರವೇ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ.

ಪತ್ನಿ ವಿಜಯ ಲಕ್ಷ್ಮಿ ಅವರನ್ನು ಮಹಿಳಾ ಹಕ್ಕುಗಳ ಆಯೋಗದ ಅಧ್ಯಕ್ಷೆ ಶುಕ್ರವಾರ ಆಸ್ಪತ್ರೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದರ್ಶನ್ ಮತ್ತು ಪತ್ನಿಯ ಸಂಸಾರ ಏಳು ವರ್ಷಗಳಿಂದ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ದರ್ಶನ್ ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದರು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ತಿಳಿಸಿದ್ದಾರೆ.

ವಿಜಯಲಕ್ಷ್ಮಿ ಏನಾದರೂ ರಾಜಿ ಸಂಧಾನಕ್ಕೆ ಒಪ್ಪಿ, ಕೇಸು ವಾಪಸ್ ತೆಗೆದುಕೊಂಡರೆ, ದರ್ಶನ್ ಬಚಾವ್ ಆಗುವ ಸಾಧ್ಯತೆಗಳಿವೆ. ಸದ್ಯಕ್ಕೆ ತೀವ್ರ ನಿಗಾ ಘಟಕ (ಐಸಿಯು)ನಲ್ಲಿರುವ ಪತ್ನಿ ವಿಜಯಲಕ್ಷ್ಮಿಗೆ ದರ್ಶನ್ ಬಗ್ಗೆ ಅನುಕಂಪ ಇದ್ದು, ಇನ್ನು ಮುಂದೆ ಏನೂ ತೊಂದರೆಯಾಗದಂತೆ ಭರವಸೆ ಕೊಟ್ಟರೆ ರಾಜಿಗೆ ಸಿದ್ಧ ಎಂದು ವಿಜಯಲಕ್ಷ್ಮಿಯ ತಾಯಿ ಹೇಳಿದ್ದಾರೆ. ವಿಜಯಲಕ್ಷ್ಮಿ ಮೈಯಲ್ಲಿ ಸಾಕಷ್ಟು ಗಾಯಗಳಾಗಿವೆ. ಎಡಗೈ ಪೂರ್ತಿ ಬ್ಯಾಂಡೇಜ್ ಆಗಿದೆ. ಆಕೆ ಏನು ಹೇಳುತ್ತಾರೆ ಎಂಬುದರ ಆಧಾರದ ಮೇಲೆ ಈ ಕೇಸು ನಿಂತಿದೆ ಎಂದಿರುವ ಮಂಜುಳಾ, ತಾಯಿ ಮತ್ತು ಮಗುವಿನ ರಕ್ಷಣೆಯ ಹೊಣೆಯನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ದರ್ಶನ್ ಅವರು ಪತ್ನಿಗೆ ಕುಡಿದು ಹಲ್ಲೆ ಮಾಡಿದ್ದು, ಯದ್ವಾತದ್ವಾ ಬಾರಿಸಿದ್ದಾರೆ. ಸಿನಿಮಾದಲ್ಲಿ ಫೈಟ್ ಮಾಡುವಂತೆಯೇ ಹೊಡೀತಾ ಇದ್ರು. ಕನ್ನಡದ ಪ್ರಸಿದ್ಧ ನಟನ ಹೆಸರು ಹಾಳಾಗಬಾರದೆಂಬ ಕಾರಣಕ್ಕೆ ಈ ಹಿಂದೆ ಮೂರ್ನಾಲ್ಕು ಬಾರಿ ತನಗೆ ಹೊಡೆದಾಗಲೂ ಪತ್ನಿಯು ಇದರ ಬಗ್ಗೆ ರಂಪ ಮಾಡಿರಲಿಲ್ಲ ಎಂದು ಮಂಜುಳಾ ಅವರು ವಿವರಿಸಿದ್ದಾರೆ.
ಇವನ್ನೂ ಓದಿ