ನಿಮಗೆಲ್ಲಾ ಮಸ್ತ್ ಮಜಾ ಮಾಡಿ ಎಂಬ ಹೆಸರಿನ ಒಂದು ಕಾಮಿಡಿ ಚಿತ್ರ ನೆನಪಿರಲೇ ಬೇಕು. ಅದೇ ಚಿತ್ರವನ್ನು ನಿರ್ಮಿಸಿದ್ದ ಸೌಂದರ್ಯ ಜಗದೀಶ್ ಈಗ ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ.
ಹೌದು. ಬಹು ದಿನದಿಂದ ಸುದ್ದಿಯಾಗುತ್ತಿರುವ ಅಪ್ಪು ಪಪ್ಪು ಚಿತ್ರಕ್ಕೆ ಕೊನೆಗೂ ಬಿಡುಗಡೆಯ ದಿನ ಹತ್ತಿರವಾಗಿದೆ. ಇದೇ ಶುಕ್ರವಾರ ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಮಗ ಮಾಸ್ಟರ್ ಸ್ನೇಹಿತ್‌ಗಾಗಿ ಈ ಚಿತ್ರ ಸಿದ್ಧಪಡಿಸಿರುವ ಜಗದೀಶ್ ಬಹಳ ನಿರೀಕ್ಷೆಯನ್ನು ಈ ಚಿತ್ರದ ಮೇಲೆ ಇರಿಸಿಕೊಂಡಿದ್ದಾರೆ ಅಂದರೂ ತಪ್ಪಾಗಲಾರದು.
ದೂರದ ದೇಶಕ್ಕೆ ಹೋಗಿ ವರಾಂಗೊಟನ್ ಎಂಬ ಜಾತಿಯ ಚಿಂಪಾಂಜಿ ಜೊತೆ ನಟಿಸಿ ಮಗ ಅಥವಾ ಚಿತ್ರದ ಬಾಲ ನಾಯಕ ಸ್ನೇಹಿತ್ ಜತೆ ಬಿಟ್ಟು ಚಿತ್ರ ತೆಗೆದಿರುವ ಜಗದೀಶ್ ನಿಜಕ್ಕೂ ಸಾಹಸಿ. ಒಂದು ವಿಭಿನ್ನ ಪ್ರಯತ್ನ ಮಾಡಿದ್ದು ಅದರ ಫಲ ಇನ್ನು ಕೆಲವೇ ಗಂಟೆಯಲ್ಲಿ ತಿಳಿಯಲಿದೆ. ಸಾಕಷ್ಟು ಪ್ರಚಾರ ಪಡೆದುಕೊಂಡಿರುವ ಈ ಚಿತ್ರ ಗೆಲುವು ಸಾಧಿಸುವ ಸಾಧ್ಯತೆ ಇದೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಕಾಂಬೋಡಿಯಾ ದೇಶದಲ್ಲಿ ಚಿಂಪಾಂಜಿ ಜೊತೆಗೆ ಚಿತ್ರದ ಚಿತ್ರೀಕರಣ ಮಾಡಿರುವ ಜಗದೀಶ್, ಈ ಚಿತ್ರಕ್ಕಾಗಿ ಹೇರಳ ಹಣ ಸುರಿದಿದ್ದಾರೆ. ಒಂದು ಮಕ್ಕಳ ಚಿತ್ರವಾಗಿ ಮಾತ್ರವಲ್ಲ, ಕೌಟುಂಬಿಕ ಚಿತ್ರವಾಗಿಯೂ ಇದು ಸಿದ್ಧವಾಗಿದೆ ಎನ್ನುತ್ತಾರೆ.
ವರಾಂಗೊಟನ್ ಚಿಂಪಾಂಜಿಯ ಹೆಸರು ಜ್ಯೂಡಿ ಅಂತೆ. ಈ ಚಿತ್ರದ ಶೂಟಿಂಗ್ ಅರಂಭದಲ್ಲಿ ಈ ಪ್ರಾಣಿ ಚಿತ್ರೀಕರಣ ತಂಡದೊಂದಿಗೆ ಕೊಂಚ ಅಸಹಕರಿಸಿತು. ಗೊಂದಲದಲ್ಲಿ ಒಂದಿಷ್ಟು ಮಳ್ಳಾಟ ಆಡಿತು, ಆದರೆ ಕೊನೆ ಕೊನೆಗೆ ಮನುಷ್ಯರ ಜತೆ ಬೆರೆತು ನಮ್ಮಂತೆ ವರ್ತಿಸಿತು. ಕಾಂಬೋಡಿಯಾ ದೇಶದ ಇದು ಇಲ್ಲಿನ ಮಂದಿಯೊಂದಿಗೆ ಹೊಂದಿಕೊಂಡು ಅದು ನೀಡಿದ ಸಹಕಾರ ಮರೆಯಲಾಗದು. ಚಿತ್ರದಲ್ಲಿ ಇದರ ಪಾತ್ರ ಅತ್ಯಂತ ಪ್ರಧಾನವಾದುದು ಎನ್ನುತ್ತಾರೆ ಜಗದೀಶ್.