ಸಿ.ವಿ.ಆರ್. ಪ್ರೊಡಕ್ಷನ್ ಲಾಂಛನದಲ್ಲಿ ಶ್ವೇತಾ ಎಂ.ಸಿ. ನಿರ್ಮಿಸಿರುವ ಹ.ಸೂ.ರಾಜಶೇಖರ್, ನಿರ್ದೇಶನದ ಚಾಣಾಕ್ಷ ಚಿತ್ರವು ಶೀಘ್ರ ಬಿಡುಗಡೆಯಾಗಲಿದೆ.
ಕಥೆ, ಚಿತ್ರಕಥೆಯನ್ನು ಸಿ.ವಿ.ರಾಜು ಬರೆದಿದ್ದಾರೆ. ಸಂಭಾಷಣೆ ಕೆ.ರಾಮನಾರಾಯಣ್ ಅವರದು. ಸಂಗೀತ ನೀಡಿದ್ದಾರೆ ಎಸ್.ಪಿ.ಚಂದ್ರಕಾಂತ್. ಗೀತಪ್ರಿಯ, ಶ್ರೀರಂಗ, ಕೆ.ರಾಮನಾರಾಯಣ್, ಕವಿರಾಜ್ ಸಾಹಿತ್ಯವಿದೆ. ಸಹನಿರ್ದೇಶನ ರವಿ ಪೂಜಾರಿಯವರದು. ಛಾಯಾಗ್ರಹಣ ಎಂ.ಆರ್.ಸೀನು ಅವರದ್ದು. ಸುರೇಶ್ ಬಾಬು, ಸಂಕಲನ ನಾಗೇಂದ್ರ ಅರಸ್, ಸಂಜೀವರೆಡ್ಡಿ. ಕೆ.ಡಿ.ವೆಂಕಟೇಶ್, ರವಿವರ್ಮ, ಜಲಿಬಾಸ್ಟಿನ್, ನಂಜುಂಡಿ ನಾಗರಾಜ್ ಸಾಹಸ ಸಂಯೋಜಿಸಿದ್ದಾರೆ. ಮದನ್ ಹರಿಣಿ ನೃತ್ಯ ನಿರ್ದೇಶಿಸಿದ್ದಾರೆ.
ತಾರಾಗಣದಲ್ಲಿ ಸಚಿನ್ ಸುವರ್ಣ, ಅಂಜಲಿ ಪಾಂಡೆ, ನಿಖಿತಾ, ಜಯಂತಿ, ಉಷಾ ಉತುಪ್, ಶೋಭರಾಜ್, ರಂಗಾಯಣ ರಘು, ಟೆನ್ನಿಸ್ ಕೃಷ್ಣ, ಬುಲೆಟ್ ಪ್ರಕಾಶ್, ತಬಲಾ ನಾಣಿ, ಸತ್ಯಜಿತ್ ಸುರೇಶ್, ದಿವಾಕರ್, ಕಾರ್ತಿಕ್ ಕೃಷ್ಣಕುಮಾರ್, ದೊಡ್ಡಯ್ಯ, ರಾಮಮೂರ್ತಿ, ಕವನ, ಸುಜಿ, ಜ್ಯೋತಿ ಮೊದಲಾದವರಿದ್ದಾರೆ.
ಇನ್ನೊಂದು ಚಿತ್ರ 'ಮೊದಲ ಸಲ' ಕರ್ನಾಟಕ ಟಾಕೀಸ್ ಅವರ ಚೊಚ್ಚಲ ಕಾಣಿಕೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಯು' ಅರ್ಹತಾಪತ್ರ ನೀಡಿದೆ. ಚಿತ್ರ ಡಿಸೆಂಬರಿನಲ್ಲಿ ತೆರೆಗೆ ಬರಲಿದೆ.
ನವಗ್ರಹ, ಜೊತೆಜೊತೆಯಲಿ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ್ ಗದಗ ಪ್ರಥಮ ಬಾರಿಗೆ ಸಾಫ್ಟ್‌ವೇರ್ ಮಿತ್ರ ಯೋಗೀಶ್ ನಾರಾಯಣ್ ಜತೆ ಈ ಚಿತ್ರ ನಿರ್ಮಿಸಿದ್ದಾರೆ. ವೆಂಕಟೇಶ್ ನಾಯಕ್, ಜಗದೀಶ್ ಕಾಳಗಿ, ಮಯೂರ್ ಮತ್ತು ಮಹೇಶ್ ಪಟೇಲ್ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ಪುರುಷೋತ್ತಮ್ ಈ ಚಿತ್ರದ ನಿರ್ದೇಶಕರು. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ, ವಿ.ನಾಗೇಂದ್ರ ಪ್ರಸಾದ್ ಗೀತರಚನೆ, ದಿನೇಶ್ ಮಂಗಳೂರು ಕಲೆ ಹಾಗೂ ಶಶಿಧರ್ ಅವರ ನಿರ್ಮಾಣ ನಿರ್ವಹಣೆಯಿದೆ. ತಾರಾಗಣದಲ್ಲಿ ಯಶ್, ಭಾಮ, ರಂಗಾಯಣ ರಘು, ಅವಿನಾಶ್, ಶರಣ್, ತಾರಾ, ಯೋಗೀಶ್ ನಾರಾಯಣ್, ರಾಕೇಶ್, ತಿಮ್ಮೇಗೌಡ ಮುಂತಾದವರಿದ್ದಾರೆ.