ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಯಶಸ್ಸಿನ ಅಂಬಾರಿ ಮೇಲೆ ಸುಪ್ರೀತಾ
ತಾರಾ ಪರಿಚಯ
Feedback Print Bookmark and Share
 
MOKSHENDRA
'ಅಂಬಾರಿ' ಚಿತ್ರ ಬಿಡುಗಡೆಯಾಗಿದೆ. ನಾಯಕಿ ಸುಪ್ರೀತಾ ನಟನೆಯ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದೆ. ಮೊದಲ ಬಾರಿಗೆ ಕ್ಯಾಮರಾ ಎದುರಿಸಿದರೂ ಲವಲವಿಕೆಯಿಂದ ನಟಿಸಿದ್ದಾರೆ ಎಂದು ಜನ ಬಾಯ್ತುಂಬ ಹೊಗಳುತ್ತಾರೆ. ಇದರಿಂದ ಸುಪ್ರೀತಾ ಕೂಡಾ ಹರ್ಷಗೊಂಡಿದ್ದಾರೆ.

ಸಿನಿಮಾದಲ್ಲಿ ನಾಯಕಿಯಾಗಬೇಕೆಂಬ ಆಸೆ ಇತ್ತು. ಆದರೆ ಇಷ್ಟೊಂದು ಬೇಗ ಆ ಭಾಗ್ಯ ಒದಗಿ ಬರುತ್ತದೆಂದು ಗೊತ್ತಿರಲಿಲ್ಲ. ಉತ್ತಮ ತಂತ್ರಜ್ಞರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಿಜಕ್ಕೂ ನಾನು ಅದೃಷ್ಟವಂತೆ ಎನ್ನುತ್ತಾರೆ ಸುಪ್ರೀತಾ.

ಅಂಬಾರಿ ಚಿತ್ರದಲ್ಲಿ ಸುಪ್ರೀತಾಗೆ ಶ್ರೀಮಂತ ಮಧ್ಯಮ ವರ್ಗದ ಹುಡುಗಿಯ ಪಾತ್ರ. ‘ಈ ಪಾತ್ರ ನನ್ನ ವ್ಯಕ್ತಿತ್ವವನ್ನು ಹೋಲುತ್ತಿದ್ದರಿಂದ ಕ್ಯಾಮೆರಾ ಎದುರಿಸುವಾಗ ನನಗೆ ಭಯವಾಗಲಿಲ್ಲ. ಚಿತ್ರೀಕರಣಕ್ಕೆ ಮುನ್ನ ನಿರ್ದೇಶಕರು 2 ತಿಂಗಳು ನಟನೆ ಬಗ್ಗೆ ಹೇಳಿಕೊಟ್ಟಿದ್ದರು. ಸೆಟ್‌ನಲ್ಲಿ ಹಿರಿಯ ಕಲಾವಿದರು ಕೂಡಾ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಇದರಿಂದ ಪಾತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ತಮ್ಮ ಮೊದಲ ಚಿತ್ರದ ಅನುಭವವನ್ನು ಹಂಚಿಕೊಂಡರು.

ಈಗ ಸುಪ್ರೀತಾಗೆ ಅನೇಕ ಅವಕಾಶಗಳು ಬರುತ್ತಿವೆ. ಆದರೆ ಅವಕಾಶವಿದೆ ಎಂದು ಸಿಕ್ಕ ಪಾತ್ರವನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುತ್ತಾರೆ ಈ ಬೆಡಗಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯಶಸ್ಸಿನ ಅಂಬಾರಿ ಮೇಲೆ ಸುಪ್ರೀತಾ