ದಕ್ಷಿಣ ಭಾರತದ ಜನಪ್ರಿಯ ನಟಿಯಾದ ರಮ್ಯ, ಬೆಂಗಳೂರಿನಲ್ಲಿ 1981 ನವೆಂಬರ್ 29 ರಂದು ಜನಿಸಿದರು . ರಮ್ಯಳ ನಿಜ ನಾಮಧೇಯ ದಿವ್ಯ ಸ್ಪಂದನ. ಉಟಿಯ ಸೇಂಟ್ ಹಿಲ್ಡಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಪದವಿಯನ್ನು ಪಡೆದರು.
ರಮ್ಯ ಅವರಿಗೆ ಬಾಲ್ಯದಲ್ಲಿಯೇ ನೃತ್ಯಸ್ಪರ್ಧೆ ಕಾಲೇಜಿನ ಸಮಾರಂಭಗಳಲ್ಲಿ ಭಾಗವಹಿಸುವುದು ಇಷ್ಟದ ಸಂಗತಿಯಾಗಿತ್ತು . ಪದವಿಯನ್ನು ಪೂರ್ಣಗೊಳಿಸಿದ ನಂತರ ದಿನೇಶ್ ಬಾಬು ನಿರ್ದೇಶನದ "ಅಭಿ " ಚಿತ್ರದಲ್ಲಿ ನಟಿಸಲು ಕರೆ ಬಂದಿತು. ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಎದುರಿಗೆ ನಾಯಕಿಯಾಗಿ ಉತ್ತಮ ನಟನೆಯ ಮೂಲಕ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾದಳು. ಚಿತ್ರ ಹಿಟ್ ಆಗುವುದರೊಂದಿಗೆ ಗೋಲ್ಟನ್ ಗರ್ಲ್ ಖ್ಯಾತಿ ಗಳಿಸಿದ ರಮ್ಯ ಮತ್ತೆ ಹಿಂದೆ ನೋಡಲಿಲ್ಲ.
ತದ ನಂತರ ಪ್ರೇಕ್ಷಕರಿಗೆ ಹಾಗೂ ಚಿತ್ರ ನಿರ್ಮಾಪಕರಿಗೆ ಅಚ್ಚುಮೆಚ್ಚಿನ ನಟಿಯಾದಳು. ಪುನೀತ್ ರಾಜ್‌ಕುಮಾರ್ ಸುನೀಲ್ ರಾವ್ , ಸುದೀಪ್ ,ಮುರಳಿ, ಆದಿತ್ಯ ಉಪೇಂದ್ರ ಧ್ಯಾನ, ವಿಜಯ್ ರಾಘವೇಂದ್ರ ,ದರ್ಶನ್ ಪ್ರೇಮ್ ಅವರೊಂದಿಗೆ ಅಭಿ , ಎಕ್ಸ್‌ಕ್ಯೂಸ್ ಮಿ , ರಂಗಾ (ಎಸ್ ಎಸ್ ಎಲ್ ಸಿ ), ಕಂಠಿ ,ಆದಿ ಆಕಾಶ್ , ಗೌರಮ್ಮ , ಅಮೃತಧಾರೆ , ಸೇವಂತಿ ಸೇವಂತಿ , ಜ್ಯೂಲಿ ಜೊತೆ ಜೊತೆಯಲಿ ,ತನನಂ ತನನಂ , ಅರಸು , ಮೀರಾ ಮಾಧವಾ ರಾಘವಾ ಚಿತ್ರಗಳಲ್ಲಿ ನಟಿಸಿದ್ದು, ದೀನೇಶ್ ಬಾಬು ಪ್ರೇಮ್ , ಯೋಗಿರಾಜ್ ಭಟ್ ,ಭರತ್ ಎಂ.ಎಸ್ ರಮೇಸ್ ಮಹೇಶ್ ಬಾಬು ಅವರಂತಹ ಖ್ಯಾತ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿ ಖ್ಯಾತಿಯ ಉತ್ತಂಗಕ್ಕೇರಿದರು.
ದಿನಕರ ನಿರ್ದೇಶನದ ಜೊತೆ ಜೊತೆಯಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ ಅವರೊಂದಿಗೆ ನಟಿಸಿ ಯಶಸ್ವಿ ಜೋಡಿಯ ಸ್ಥಾನವನ್ನು ಪಡೆದರು. ಪ್ರಶಸ್ತಿ ವಿಜೇತ ನಿರ್ದೇಶಕಿ ಕವಿತಾ ಲಂಕೇಶ್ ನಿರ್ದೇಶನದ ತನನಂ ತನನಂ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು . ರೋಮ್ಯಾಂಟಿಕ್ ಚಿತ್ರಗಳಲ್ಲಿ ಮಾತ್ರವಲ್ಲದೇ ' ಅರಸು' ಚಿತ್ರದಲ್ಲಿ ಭಾವನಾತ್ಮಕ ನಟನೆಯಲ್ಲೂ ತಮ್ಮ ಕಲಾಪ್ರತಿಭೆಯನ್ನು ಎತ್ತಿ ತೋರಿಸಿದ್ದಾರೆ.