ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ಭಾರತಿ ವಿಷ್ಣುವರ್ಧನ್, ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ನಟಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳ ಮನಗೆದ್ದವರು. 1960ರಲ್ಲಿ ಕನ್ನಡ ಬೆಳ್ಳಿತೆರೆಗೆ ಕಾಲಿರಿಸಿದ ಭಾರತಿ, 80ರ ದಶಕದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಗೆದ್ದವರು.
ಕನ್ನಡದ ಮೇರು ನಟ ಡಾ.ರಾಜ್ ಕುಮಾರ್, ರೆಬೆಲ್ ಸ್ಟಾರ್ ಅಂಬರೀಷ್, ವಿಷ್ಣುವರ್ಧನ್ ಸೇರಿದಂತೆ ಹಲವರ ಜತೆ ನಟಿಸಿದ ಕೀರ್ತಿ ಭಾರತಿಯವರದ್ದು, ಬಂಗಾರದ ಮನುಷ್ಯ, ದೂರದಬೆಟ್ಟ, ಗಂಡೊಂದು ಹೆಣ್ಣಾರು, ಬಂಗಾರದ ಜಿಂಕೆ, ಭಾಗ್ಯಜ್ಯೋತಿ,ಮೇಯರ್ ಮುತ್ತಣ್ಣ, ಸೂರಜ್ ಸೇರಿದಂತೆ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟೆಸಿದ ಕೀರ್ತಿ ಭಾರತಿವಿಷ್ಣುವರ್ಧನ ಅವರದ್ದು.
ಇತ್ತೀಚೆಗಷ್ಟೇ ಬಹುಭಾಷಾ ನಟಿ ಭಾರತಿ ಅವರು ಕವಿತಾ ಲಂಕೇಶ್ ನಿರ್ದೇಶನದ ಪ್ರೀತಿ-ಪ್ರೇಮ-ಪ್ರಣಯ ಸಿನಿಮಾದ ಅನಂತನಾಗ್ ಜೋಡಿಯಾಗಿ ನಟಿಸಿದ್ದರು.
ಬಹುಭಾಷಾ ನಟಿಯಾಗಿದ್ದ ಭಾರತಿ ಅವರು ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರೊಂದಿಗೆ ಹಸೆಮಣೆ ಏರಿದ್ದರು. ಭಾರತಿ-ವಿಷ್ಣು ದಂಪತಿಗಳಿಗೆ ಕೀರ್ತಿ ಮತ್ತು ಚಂದನ ಎಂಬ ಇಬ್ಬರು ದತ್ತು ಪುತ್ರಿಯರಿದ್ದಾರೆ. ಹಿರಿಯ ಮಗಳಾದ ಕೀರ್ತಿಯನ್ನು ನಟ ಅನಿರುದ್ಧ ಜತೆ ವಿವಾಹ ಮಾಡಿಕೊಡಲಾಗಿದೆ.