| ಇನ್ಫೋಸಿಸ್‌ಗೆ 355 ಮಿಲಿಯನ್ ಡಾಲರ್ ಗುತ್ತಿಗೆ | | | ಬೆಂಗಳೂರು, ಬುಧವಾರ, 10 ಜೂನ್ 2009( 15:07 IST ) | | | |
| | |
| ಆಸ್ಟ್ರೇಲಿಯಾದ ದೂರವಾಣಿ ಕಂಪೆನಿಯಾದ ಟೆಲ್‌ಸ್ಟ್ರಾ ಕಾರ್ಪೋರೇಶನ್‌ನಿಂದ 355ಮಿಲಿಯನ್ ಡಾಲರ್‌ಗಳ ಹೊರಗುತ್ತಿಗೆ ಬಿಡ್ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಯಾದ ಇನ್ಫೋಸಿಸ್ ಟೆಕ್ನಾಲಾಜೀಸ್ ಮೂಲಗಳು ತಿಳಿಸಿವೆ. ಅಮೆರಿಕ ಮೂಲದ ಹೆವ್‌ಲೆಟ್ ಆಂಡ್ ಪ್ಯಾಕರ್ಡ್ ಕಂಪೆನಿಯ ಸಹೋದರ ಸಂಸ್ಥೆ ಇಡಿಎಸ್ ಹಾಗೂ ಇನ್ಫೋಸಿಸ್ ಕಂಪೆನಿಗಳಿಗೆ ಅಪ್ಲಿಕೇಶನ್ ಡೆವಲೆಪ್‌ಮೆಂಟ್ ಆಂಡ್ ಮೆಂಟೆನನ್ಸ್ ಸರ್ವಿಸ್ ಹೊರಗುತ್ತಿಗೆ ಸೇವೆಯ 355 ಮಿಲಿಯನ್ ಡಾಲರ್‌ಗಳ ಗುತ್ತಿಗೆಯನ್ನು ಐದು ವರ್ಷಗಳ ಅವಧಿಗಾಗಿ ನೀಡಲಾಗಿದೆ ಎಂದು ಇನ್ಫೋಸಿಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಯುಎಸ್‌ನ ಟೆಕ್ನಾಲಾಜೀ ದೈತ್ಯ ಕಂಪೆನಿ ಐಬಿಎಂ ಕೂಡಾ ಯೋಜನೆಯ ಭಾಗವಾಗಿದ್ದು, ನಾಸ್ಡಾಕ್ ಶೇರುಪೇಟೆ ನೊಂದಾಯಿತ ಟೆಲ್‌ಸ್ಟ್ರಾ ಕಂಪೆನಿ, ಕಳೆದ 2003 ರಿಂದ ಇನ್ಫೋಸಿಸ್‌ನ ಗ್ರಾಹಕ ಕಂಪೆನಿಯಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲ್‌ಕೃಷ್ಣನ್ ತಿಳಿಸಿದ್ದಾರೆ.ಭಾರತದ ಸಾಫ್ಟ್‌ವೇರ್ ಕಂಪೆನಿಗಳಾದ ಇನ್ಫೋಸಿಸ್ ,ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್ ಕಂಪೆನಿಗಳು ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಲು ಏಷ್ಯಾ ಫೆಸಿಫಿಕ್ ಮತ್ತು ಯುರೋಪ್ ರಾಷ್ಟ್ರಗಳತ್ತ ಗಮನಹರಿಸಿವೆ ಎಂದು ಸಿಇಒ ಗೋಪಾಲ್ ಕೃಷ್ಣನ್ ತಿಳಿಸಿದ್ದಾರೆ. |
| |
| | |
| | | |
|
| | | | | |
|
|
| |
|  | |