ಅಂತರ್ಜಾಲ ಜಗತ್ತಿನಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಹೊಸ ಸುಳಿಗಾಳಿ, 9 ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ "ವೆಬ್‌ದುನಿಯಾ"ದ ಕನ್ನಡ ಅಂತರ್ಜಾಲ ತಾಣದ ತಾಂತ್ರಿಕ ವಿಭಾಗದಲ್ಲಿ ಅನುವಾದಕರ ಹುದ್ದೆ ಖಾಲಿ ಇವೆ. ಕೆಲಸ ಮಾಡಬೇಕಿರುವುದು ಚೆನ್ನೈಯಲ್ಲಿ ಎಂಬುದನ್ನು ಮೊದಲೇ ಹೇಳಿಬಿಡುತ್ತೇವೆ.
ನಮಗ್ಯಾರು ಬೇಕು? ಕನ್ನಡ ಭಾಷೆಯ ಮೇಲೆ ಹಿಡಿತ ಬೇಕೇ ಬೇಕು ಎಂಬುದು ನಿರ್ವಿವಾದ. ಜತೆಗೆ, ಇಂಗ್ಲಿಷ್ ಮಾತನಾಡಲು ಬಾರದಿದ್ದರೂ, ಸರಿಯಾಗಿ ಅರ್ಥೈಸಿಕೊಳ್ಳುವುದು ಕೂಡ ಅಷ್ಟೇ ಕಡ್ಡಾಯ. ಇಂಗ್ಲಿಷಿನಿಂದ ಕನ್ನಡಕ್ಕೆ ಸುಲಲಿತವಾಗಿ ತರ್ಜುಮೆ ಮಾಡಬಲ್ಲವರನ್ನೇ ನಾವು ಹುಡುಕುತ್ತಿರುವುದು. ಕನಿಷ್ಠ ಒಂದು ವರ್ಷ ಅನುಭವವಿದ್ದವರಾದರೆ ಅತ್ಯುತ್ತಮ ಮತ್ತು "ಖಂಡಿತವಾಗಿ ನಾನಿದನ್ನು ಮಾಡಬಲ್ಲೆ" ಎಂಬ ಆತ್ಮವಿಶ್ವಾಸವಿರುವ ಹೊಸಬರು ಕೂಡ ಅರ್ಜಿ ಗುಜರಾಯಿಸಬಹುದು.
ಕಂಪ್ಯೂಟರ್ ಏನೂಂತ ಗೊತ್ತಿದ್ದರಾಯಿತು, ಉಳಿದ ವಿಷಯಗಳನ್ನು ಕಲಿಸುವುದು ನಮ್ಮ ಜವಾಬ್ದಾರಿ. ನಿಮ್ಮ ಹುಟ್ಟಿದ ದಿನಾಂಕ, ವಿಳಾಸ, ಅನುಭವ (ಇದ್ದರೆ) ವಿವರ, ವಿದ್ಯಾಭ್ಯಾಸ ವಿವರ, ಹವ್ಯಾಸ, ಇ-ಮೇಲ್ ವಿಳಾಸ ಸಹಿತ ಅರ್ಜಿಯನ್ನು ಕೆಳಗೆ ನೀಡಲಾದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಅದರ ಜತೆಗೇ, ನಿಮ್ಮ ಸಂಪರ್ಕ ದೂರವಾಣಿ ಸಂಖ್ಯೆ ಇರುವುದು ಅತ್ಯಗತ್ಯ.